ಶನಿವಾರಸಂತೆ, ಆ. ೩೧: ಶನಿವಾರಸಂತೆ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಪಂಚಾಯಿತಿ ಸಾಮಾನ್ಯ ಸಭೆ ನಡೆಯಿತು.

ಶನಿವಾರಸಂತೆಯಲ್ಲಿ ಅವೈಜ್ಞಾನಿಕ ಕಾಮಗಾರಿಗಳಾಗುತ್ತಿವೆ. ಪಂಚಾಯಿತಿ ಗಮನಕ್ಕೆ ಬಾರದೆ ಅನಧಿಕೃತವಾಗಿ ಕಟ್ಟಡಗಳ ನಿರ್ಮಾಣವಾಗುತ್ತಿವೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಪಂಚಾಯಿತಿ ಕಾರ್ಯದರ್ಶಿಗೆ ತರಕಾರಿ ಅಂಗಡಿಯವರು ಬೆಲೆ ಕೊಡುವುದಿಲ್ಲ. ಸರಕಾರಿ ಜಾಗದಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ಸಭೆಯಲ್ಲಿ ಚರ್ಚಿಸಲಾಯಿತು.

ಶನಿವಾರಸಂತೆಯ ಕೋವಿಡ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿಯ ಬಗ್ಗೆ ಸಂಬAಧಿಸಿದವರು ಪಂಚಾಯಿತಿಯ ಗಮನಕ್ಕೆ ತಂದಿಲ್ಲದ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಸಭೆಯಲ್ಲಿ ಸೀಲು, ಸಹಿ ಇಲ್ಲದ ನಡಾವಳಿ ಪ್ರತಿಯನ್ನು ಅಸಮಾಧಾನ ದಿಂದ ಸದಸ್ಯ ಆದಿತ್ಯಗೌಡ ಹರಿದು ಹಾಕಿದರು. ಕೆ.ಆರ್.ಸಿ. ವೃತ್ತದಲ್ಲಿ ರಸ್ತೆ ಬದಿಯಲ್ಲಿ ತರಕಾರಿ ಇತರ ಸಾಮಗ್ರಿಗಳನ್ನು ವ್ಯಾಪಾರ ಮಾಡುತ್ತಿರು ವವರನ್ನು ತೆರವುಗೊಳಿಸಲು ನಿರ್ಣಯಿಸ ಲಾಯಿತು. ಸಂತೆ ಮಾರುಕಟ್ಟೆ ಬಳಿ ರೂ. ೫೦ ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಲು ಅಂದಿನ ಗ್ರಾ.ಪಂ. ಆಡಳಿತದ ಅವಧಿಯಲ್ಲಿ ಹಣ ಬಿಡುಗಡೆಯಾಗಿತ್ತು. ಕಾರಣಾಂತರ ದಿಂದ ಕಳೆದ ೩ ವರ್ಷಗಳಿಂದ ಕಾಮಗಾರಿಗೆ ಅಡಚಣೆಯಾಗಿದೆ. ರಾಷ್ಟಿçÃಯ ಜಲ ಜೀವನ್ ಯೋಜನೆಯಿಂದ ಪಟ್ಟಣದಲ್ಲಿ ೪ ಲಕ್ಷ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣದ ಬಗ್ಗೆ ಸದಸ್ಯರುಗಳು ಚರ್ಚೆ ನಡೆಸಿದರು.

ಹಣಕಾಸು ಯೋಜನೆಯಿಂದ ಕುಡಿಯುವ ನೀರು ಮತ್ತು ಸ್ವಚ್ಛತೆ ವ್ಯವಸ್ಥೆ ಕಾಮಗಾರಿಗೆ ಮೊದಲ ಹಂತವಾಗಿ ರೂ. ೧೧ ಲಕ್ಷ ಅನುದಾನ ಬಂದಿರುವುದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ ಸದಸ್ಯರ ಗಮನಕ್ಕೆ ತಂದರು. ಅಧ್ಯಕ್ಷೆ ಸರೋಜ ಶೇಖರ್ ಅಧ್ಯಕ್ಷತೆಯಲ್ಲಿ ನಡೆಸಿ ಸಭೆಯಲ್ಲಿ ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರುಗಳಾದ ಎಸ್.ಸಿ. ಶರತ್‌ಶೇಖರ್, ಎಸ್.ಎನ್. ರಘು, ಸರ್ದಾರ್ ಅಹಮ್ಮದ್, ಗೀತಾ, ಹರೀಶ್, ಫರ್ಜಾನ ಶಾಹಿದ್, ಕಾವೇರಿ, ಸರಸ್ವತಿ, ಕಾರ್ಯದರ್ಶಿ ತಮ್ಮಯ್ಯಆಚಾರ್ ಹಾಜರಿದ್ದರು.