ಸೋಮವಾರಪೇಟೆ, ಆ. ೩೧: ಪ್ರತಿಷ್ಠಿತ ಪ್ರೋ ಕಬಡ್ಡಿ ಪಂದ್ಯಾವಳಿಗೆ ಸಮೀಪದ ಕೂತಿ ಗ್ರಾಮದ ಕೆ.ಎ. ರತನ್ ಅವರು ಆಯ್ಕೆಗೊಂಡಿದ್ದು, ಗುಜರಾತ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಪ್ರೋ ಕಬಡ್ಡಿಯ ಸೀಸನ್ ೮ರ ಹರಾಜು ಪ್ರಕ್ರಿಯೆಯಲ್ಲಿ ರತನ್ ಅವರು ೨೫ ಲಕ್ಷಕ್ಕೆ ಗುಜರಾತ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಪ್ರಸ್ತುತ ಬೆಂಗಳೂರಿನ ಬ್ಯಾಂಕ್ ಆಫ್ ಬರೋಡಾದಲ್ಲಿ ಕೆಲಸ ನಿರ್ವಹಿಸುತ್ತಿರುವ ಇವರು, ಕೂತಿ ಗ್ರಾಮದ ಅಪ್ಪಚ್ಚು ಹಾಗೂ ಇಂದಿರಾ ದಂಪತಿ ಪುತ್ರ.