ಮಡಿಕೇರಿ, ಆ. ೩೦: ಸಾವಿಗೆ ಹೋಗಿ ಬರುತ್ತೇನೆ ಎಂದು ತೆರಳಿದ ವ್ಯಕ್ತಿ ಇದುವರೆಗೂ ಮನೆಗೆ ಬಂದಿಲ್ಲದ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳುಗೋಡು ಗ್ರಾಮದ ತೋಟ ಕಾರ್ಮಿಕ ಮನೋಜ್ (೨೮) ನಾಪತ್ತೆಯಾದ ವ್ಯಕ್ತಿ. ಆ. ೧೫ ರಂದು ಬೆಳಿಗ್ಗೆ ೬ ಗಂಟೆಗೆ ಮನೆಯಿಂದ ಹೋದ ವ್ಯಕ್ತಿ ಇದುವರೆಗೂ ಪತ್ತೆಯಾಗಿಲ್ಲ ಎಂದು ಪ್ರಕರಣ ದಾಖಲಾಗಿದೆ.

೫ ಅಡಿ ಎತ್ತರವಿರುವ ಮನೋಜ್ ಎಣ್ಣೆಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ದುಂಡು ಮುಖ ಹೊಂದಿದ್ದಾನೆ. ಯರವ, ಕನ್ನಡ, ಕೊಡವ ಭಾಷೆ ಬಲ್ಲವನಾಗಿದ್ದು, ಪತ್ತೆಯಾದಲ್ಲಿ ೦೮೨೭೪-೨೫೭೮೮೮, ೨೪೭೨೦೯ ಸಂಪರ್ಕಿಸುವAತೆ ಕೋರಿದೆ.