ಸೋಮವಾರಪೇಟೆ,ಆ.೩೦: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ತೆರವಾಗಿರುವ ವಾರ್ಡ್ ೧ ಹಾಗೂ ವಾರ್ಡ್ ೩ರ ಸದಸ್ಯ ಸ್ಥಾನಕ್ಕೆ ಸೆ.೩ರಂದು ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸ್ಪರ್ಧಿಗಳು ಮನೆ ಮನೆಗೆ ತೆರಳಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ವಾರ್ಡ್ ೧ರ ಬಿಜೆಪಿ ಅಭ್ಯರ್ಥಿಯಾದ ಮೃತ್ಯುಂಜಯ ಹಾಗೂ ವಾರ್ಡ್ ೩ರ ಅಭ್ಯರ್ಥಿ ಮೋಹಿನಿ ಅವರುಗಳ ಪರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಪಕ್ಷದ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ನಗರಾಧ್ಯಕ್ಷ ಸೋಮೇಶ್, ಪ್ರಮುಖರಾದ ಕುಂದಳ್ಳಿ ದಿನೇಶ್, ಶಿವಕುಮಾರ್, ಯುವರಾಜ್, ಜೆ.ಸಿ. ಶೇಖರ್, ಪ.ಪಂ.ಸದಸ್ಯ ಶುಭಕರ್, ಮಂಜುಳಾ ಸುಬ್ರಮಣಿ, ಲೋಕೇಶ್ವರಿ ಗೋಪಾಲ್, ಎ.ಎಸ್. ಮಲ್ಲೇಶ್ ಸೇರಿದಂತೆ ಇತರರು ಮತಯಾಚಿಸಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿರುವ ಭುವನೇಶ್ವರ್ ಹಾಗೂ ಸಂಧ್ಯಾ ಅವರುಗಳ ಪರವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರಾದ ಚಂದ್ರಮೌಳಿ, ಕೆ.ಎಂ. ಲೋಕೇಶ್, ಶೀಲಾ ಡಿಸೋಜ, ಯಾಕೂಬ್, ಸಂಜಯ್ ಜೀವಿಜಯ ಸೇರಿದಂತೆ ಇತರರು ಮನೆ ಮನೆಗೆ ತೆರಳಿ ಮತಯಾಚಿಸಿದರು.