ಪೆರಾಜೆ, ಆ. ೩೦: ಬಂಟಮಲೆ ಅಕಾಡೆಮಿಯ ವತಿಯಿಂದ ಕೆದಂಬಾಡಿ ರಾಮಯ್ಯಗೌಡರ ಹೆಸರಿನಲ್ಲಿ ಕೊಡಮಾಡುವ ಪ್ರಥಮ ಪ್ರಶಸ್ತಿಯನ್ನು ಚಲನಚಿತ್ರ ನಿರ್ಮಾಪಕ, ಸಾಹಿತಿ, ಸಂಘಟಕ ಸಂಪಾಜೆಯ ನಂಜಯ್ಯನಮನೆ ಎಸ್. ದೇವಿಪ್ರಸಾದ್ ಆಯ್ಕೆಯಾಗಿದ್ದಾರೆ.

ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರೋಫೆಸರ್ ತಂಬAಡ ವಿಜಯ ಪೂಣಚ್ಚ , ವಕೀಲರು ಹಾಗೂ ಇತಿಹಾಸ ಸಂಶೋಧಕ ಕೆ.ಆರ್. ವಿದ್ಯಾಧರ ಬಡ್ಡಡ್ಕ ಮತ್ತು ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಪಿ.ಅಂಟನಿ ಅವರನ್ನು ಒಳಗೊಂಡ ಆಯ್ಕೆ ಸಮಿತಿಯು ಪ್ರಶಸ್ತಿಗಾಗಿ ದೇವಿಪ್ರಸಾದ್ ಎನ್ .ಎಸ್ ಅವರನ್ನು ಶಿಫಾರಸು ಮಾಡಿದೆ.

ಕರ್ನಾಟಕ ಅರೆಭಾಷೆ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ದೇವಿಪ್ರಸಾದ್ ನಾಟಕಕಾರ, ನಿರ್ದೇಶಕ, ಚಲನಚಿತ್ರ ನಿರ್ಮಾಪಕ, ಸಂಶೋಧಕರಾಗಿ ಹಲವು ಕೆಲಸ ಮಾಡಿದ್ದಾರೆ ಇವರು ಶಿರಾಡಿ ಭೂತ ಮತ್ತು ಹೆಂಗಿತ್ತ್ ಹೇಂಗಾತ್ ಎಂಬೆರಡು ನಾಟಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕೃತಿ ಅಮರ ಸುಳ್ಯದ ಸ್ವಾತಂತ್ರö್ಯ ಸಮರ (೧೯೯೯) ಸಂಶೋಧನಾ ಕ್ಷೇತ್ರಕ್ಕೊಂದು ಅಮೂಲ್ಯ ಕೊಡುಗೆಯಾಗಿದೆ.

ಕಲೆ, ಸಾಹಿತ್ಯ, ಚಲನಚಿತ್ರ, ರಂಗಭೂಮಿ ಇತಿಹಾಸ ಸಂಶೋಧನೆ ಒಳಗೊಂಡAತೆ ಹಲವಾರು ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ.