ಮಡಿಕೇರಿ, ಆ. ೩೦: ಜಿಲ್ಲೆಯಲ್ಲಿ ಆನೆಧಾಳಿ ಹಾಗೂ ಎರಡು ಅಪಘಾತ ಘಟನೆಗಳು ಸಂಭವಿಸಿದ್ದು, ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ದುರ್ಮರಣ ಹೊಂದಿದ್ದಾರೆ. ಸುಂಟಿಕೊಪ್ಪದಲ್ಲಿ ಲಾರಿ ಮಗುಚಿ ಬಿದ್ದು ಮಹಿಳೆಯೊಬ್ಬರು ಕೊನೆಯುಸಿರೆಳೆದಿದ್ದು, ಬಿಟ್ಟಂಗಾಲದಲ್ಲಿ ಬೈಕ್ ಅವಘಡದಲ್ಲಿ ಗ್ರಾಮಲೆಕ್ಕಿಗರೊಬ್ಬರು ಸಾವನ್ನಪ್ಪಿದ್ದಾರೆ. ಘಟ್ಟದಳ್ಳದಲ್ಲಿ ಆನೆಧಾಳಿಗೆ ಕೂಲಿ ಕಾರ್ಮಿಕರೊಬ್ಬರು ಅಂತ್ಯಕAಡಿದ್ದಾರೆ.ಸುAಟಿಕೊಪ್ಪ: ನೂತನ ಸ್ಕೂಟರ್ಗಳನ್ನು ತುಂಬಿಸಿಕೊAಡು ಕಾಸರಗೋಡಿನ ಶೋರೂಂಗೆ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಕೊಂಡ ಪರಿಣಾಮ ಪಾದಚಾರಿ ಮಹಿಳೆಯೊಬ್ಬರು ಲಾರಿಯಡಿ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ.
ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಹೊಸೂರಿನಿಂದ ಲಾರಿಯಲ್ಲಿ (ಟಿಎನ್ ೭೦ಎ ೭೪೬೧) ನೂತನ ಸ್ಕೂಟರ್ಗಳನ್ನು ತುಂಬಿಸಿಕೊAಡು ಚಾಲಕ ಶಿವಶಕ್ತಿ ಎಂಬಾತ ಕಾಸರಗೋಡಿನ ಶೋರೂಮ್ಗೆ ಸಾಗಿಸುತ್ತಿದ್ದಾಗ ಇಂದು ಬೆಳಗ್ಗಿನ ಜಾವ ೬.೧೦ ಗಂಟೆಗೆ ಸುಂಟಿಕೊಪ್ಪ ಗದ್ದೆಹಳ್ಳದ ಪಟ್ಟೆಮನೆ ತಿರುವಿನಲ್ಲಿ ವಂದನಾಬಾರ್ ಬಳಿ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಮಗುಚಿಕೊಂಡಿದೆ. ಅದೇ ವೇಳೆಗೆ ವಾಯುವಿಹಾರಕ್ಕೆ ತೆರಳಿದ್ದ ಸುಂಟಿಕೊಪ್ಪ ೩ನೇ ವಾರ್ಡಿನಲ್ಲಿ ತನ್ನ ಸಂಬAಧಿಕರ ಸಾವಿಗೆ ಬಂದಿದ್ದ ಹಾಸನ ಜಿಲ್ಲೆಯ ರಾಮನಾಥಪುರದ ನಿವಾಸಿ ಜಿಖ ಎಂಬವರ ಪತ್ನಿ ದಿಲ್ಶಾದ್ (೫೩) ಅವಘಡಕ್ಕೀಡಾದ ಲಾರಿಯಡಿ ಸಿಲುಕಿ ಸ್ಥಳದಲ್ಲೇ ಅಸುನೀಗಿದ್ದಾರೆ. ಮಗುಚಿದ ಲಾರಿಯಡಿ ಸಿಲುಕಿ ನರಳುತ್ತಿದ್ದ ಚಾಲಕ ಶಿವಶಕ್ತಿಯನ್ನು ಸ್ಥಳೀಯ ನಿವಾಸಿಗಳು ಶ್ರಮವಹಿಸಿ ಹೊರ ತಂದಿದ್ದಾರೆ.
ಮೃತ ಮಹಿಳೆಯ ಸಂಬAಧಿಕರು ಸ್ಮಶಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂತಿರುಗುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು ಚಾಲಕನನ್ನು ಲಾರಿ ಅಡಿಯಿಂದ ಹೊರಗೆತ್ತಲು ಇವರುಗಳು ಸ್ಥಳೀಯರೊಂದಿಗೆ ಸಹಾಯಕ್ಕೆ ಮುಂದಾಗಿದ್ದರು. ಆದರೆ ತಮ್ಮ ಸಂಬAಧಿಯೇ ಲಾರಿ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂಬುದು ಇವರಿಗೆ ಗೊತ್ತಿರಲಿಲ್ಲ. ಬಳಿಕ ಲಾರಿಯನ್ನು ಕ್ರೆöÊನ್ ಸಹಾಯದಿಂದ ಮೇಲೆತ್ತಿದ್ದಾಗ ಸಂಬAಧಿ ಮಹಿಳೆ ದಿಲ್ಶಾದ್ ಕೊನೆಯುಸಿರೆಳೆದಿರುವುದು ಕಂಡು ಬಂದಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯ ಪ್ರಭಾರ ಠಾಣಾಧಿಕಾರಿ ಎ.ಎಸ್.ಐ.ಕಾವೇರಪ್ಪ, ಮುಖ್ಯಪೇದೆ ಸತೀಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಗ್ರಾಮ ಲೆಕ್ಕಿಗ ದುರ್ಮರಣ
ವೀರಾಜಪೇಟೆ : ಸ್ನೇಹಿತನ ಮನೆಗೆ ತೆರಳಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ರಸ್ತೆ ಅಪಘಾತದಲ್ಲಿ ಗ್ರಾಮ ಲೆಕ್ಕಿಗ ದಾರುಣವಾಗಿ ಸಾವನ್ನಪ್ಪಿದ ಘಟನೆ ಬಿಟ್ಟಂಗಾಲದಲ್ಲಿ ನಡೆದಿದೆ.
ಹೊಸಕೋಟೆ ವಿಜಯನಗರ ಕಡದ್ಗೇರಿ ನಿವಾಸಿ ನಾಗರಾಜು ಹುತ್ತಂಗಿ ಎಂಬವರ ಪುತ್ರ ವೀರಾಜಪೇಟೆ ಅಮ್ಮತ್ತಿ ಹೋಬಳಿ ಗ್ರಾಮ ಲೆಕ್ಕಿಗ ಗೌಡಜ್ಜ ಹುತ್ತಂಗಿ (೨೩) ಎಂಬವರೆ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದ ವ್ಯಕ್ತಿ. ಗೌಡಜ್ಜ ಅವರ ಹೊಸಕೋಟೆ ವಿಜಯನಗರದಿಂದ ಕೊಡಗು ಜಿಲ್ಲೆಗೆ ಸರ್ಕಾರಿ ಸೇವೆಗೆ ನಿಯೋಜನೆಗೊಂಡು ನಾಲ್ಕು ವರ್ಷವಾಗಿತ್ತು. ವೀರಾಜಪೇಟೆ ನಗರದ ಚಿಕ್ಕಪೇಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅವರು ಮಾಲ್ದಾರೆ ಮತ್ತು ಬಿಳುಗುಂದ ಗ್ರಾಮ ಪಂಚಾಯಿತಿ ಗ್ರಾಮ ಲೆಕ್ಕಿಗರಾಗಿ ಸೇವೆ ಸಲ್ಲಿಸುತ್ತಿದ್ದರು. ತಾ. ೨೯ ರಂದು ಪೊನ್ನಂಪೇಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತನ್ನ ಸ್ನೇಹಿತನ ಮನೆಗೆ ತೆರಳಿ ಗೋಣಿಕೊಪ್ಪ ಬಿಟ್ಟಂಗಾಲ ಮಾರ್ಗವಾಗಿ ವೀರಾಜಪೇಟೆ ನಗರಕ್ಕೆ ತಮ್ಮ ಬೈಕ್ (ಕೆ.ಎ. ೧೨ ಕ್ಯು- ೩೦೩೧)ನಲ್ಲಿ ಹಿಂತಿರುಗುತ್ತಿದ್ದ ವೇಳೆ ರಾತ್ರಿ ೧೦.೪೫ ಗಂಟೆಗೆ ಬಿಟ್ಟಂಗಾಲ ವಿಜಯ ಬ್ಯಾಂಕ್ ಸಮೀಪದ ಸೇತುವೆಯ ತಿರುವಿನಲ್ಲಿ ಬೈಕ್ ಆಯತಪ್ಪಿ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ತಲೆಯ ಭಾಗಕ್ಕೆ ಮಾರಣಾಂತಿಕ ಗಾಯವಾಗಿ ಗೌಡಜ್ಜ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಮೃತರ ಸಹೊದ್ಯೋಗಿ ಒಮ್ಮಪ್ಪ ಬಣಗಾರ್ ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ತಿಳಿದು ಮೃತರ ತಂದೆ ನಾಗರಾಜು ಹುತ್ತಂಗಿ ಅವರು ಆಗಮಿಸಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ವೀರಾಜಪೇಟೆ ತಾಲೂಕು ತಹಶೀಲ್ದಾರ್ ಆರ್. ಯೋಗಾನಂದಾ ಮತ್ತು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕಂದಾಯ ಪರಿವೀಕ್ಷಕ ಹರೀಶ್ ಹಾಗೂ ಸಿಬ್ಬಂದಿ ಸೇರಿದಂತೆ, ಮಾಲ್ದಾರೆ ಮತ್ತು ಬಿಳುಗುಂದ ಗ್ರಾಮ ಪಂಚಾಯಿತಿ ಚುನಾಯಿತಿ ಪ್ರತಿನಿಧಿಗಳು ಭೇಟಿ ನೀಡಿದ್ದರು.
ಆನೆ ಧಾಳಿಗೆ ಬಲಿ
ಸಿದ್ದಾಪುರ : ಕಾಡಾನೆ ಧಾಳಿ ನಡೆಸಿದ ಪರಿಣಾಮ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಘಟ್ಟದಳ್ಳದಲ್ಲಿ ನಡೆದಿದೆ.