ಕಣಿವೆ, ಆ. ೨೭: ಇಲ್ಲಿಗೆ ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷ ಚೆಲುವರಾಜು ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪಂಚಾಯಿತಿಯ ಮಾಸಿಕ ಖರ್ಚು ವೆಚ್ಚಗಳ ಆಯವ್ಯಯ ಮಂಡನೆ ವೇಳೆ ಸದಸ್ಯ ಎಂ.ಎಸ್. ಶಿವಾನಂದ ವಿಚಾರವೊಂದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪಂಚಾಯಿತಿ ಅಧ್ಯಕ್ಷರು, ಸದಸ್ಯರ ಗಮನಕ್ಕೂ ತರದೆ ಅಥವಾ ಸಭೆಯಲ್ಲೂ ವಿಚಾರಗಳನ್ನು ಇಡದೇ ಏಕಾಏಕಿ ಸರ್ವಾಧಿಕಾರಿ ಧೋರಣೆ ತಾಳುತ್ತಿದ್ದಾರೆ ಎಂದು ಆರೋಪ ಮಾಡಿದಾಗ, ಸಭೆಯಲ್ಲಿದ್ದ ಸದಸ್ಯರು ಶಿವಾನಂದ ಅವರ ಆರೋಪಕ್ಕೆ ಧ್ವನಿಗೂಡಿಸಿದರು. ಇನ್ನು ಮುಂದೆ ಪಂಚಾಯಿತಿಯ ಮಾಸಿಕ ಸಭೆಯಲ್ಲಿ ಖರ್ಚು ವೆಚ್ಚಗಳ ವಿಚಾರಗಳನ್ನು ಮಂಡಿಸಿ ಸರ್ವ ಸದಸ್ಯರ ಒಮ್ಮತದ ತೀರ್ಮಾನದಂತೆಯೇ ಕ್ರಮ ವಹಿಸಲಾಗುತ್ತದೆ ಎಂದು ಸಭಾಧ್ಯಕ್ಷ ಚೆಲುವರಾಜು ಹೇಳಿದರು.

ಉಪಾಧ್ಯಕ್ಷೆ ಕೆಂಡಾಮAಡಲ

ಇದೇ ವೇಳೆ ಉಪಾಧ್ಯಕ್ಷೆ ಆರ್. ಜಯಮ್ಮ ಮಾತನಾಡಿ, ಪಂಚಾ ಯಿತಿಯ ಅಭಿವೃದ್ಧಿಗೆ ಸಂಬAಧ ಪಟ್ಟಂತೆ ಯಾವುದೇ ವಿಚಾರವನ್ನು ತನ್ನ ಗಮನಕ್ಕೆ ತರುತ್ತಿಲ್ಲ. ಯಾವುದೇ ಕಾಮಗಾರಿ ಬಗೆಯಾಗಲೀ, ಬಿಲ್ ಪಾವತಿ ಬಗೆಯಾಗಲೀ ತÀನ್ನ ಗಮನಕ್ಕೆ ತರುತ್ತಿಲ್ಲ. ಇದೇ ರೀತಿ ಮುಂದುವರೆದರೆ ಅಧ್ಯಕ್ಷ ಹಾಗೂ ಪಿಡಿಒ ವಿರುದ್ಧ ತಾನು ಡಿಸಿಗೆ ದೂರು ಕೊಡ್ತೇನೆ ಎಂದು ಸಭೆಯಲ್ಲಿ ಉಪಾಧ್ಯಕ್ಷೆ ಜಯಮ್ಮ ಕೆಂಡಾಮAಡಲರಾದರು.

ಬಳಿಕ ಸದಸ್ಯರಾದ ಮುರುಳೀಧರ್, ಜಗದೀಶ್, ಶಿವಾನಂದ, ಕುಮಾರಸ್ವಾಮಿ, ವೇದಾವತಿ, ಮಣಿಕಂಠ ಮೊದಲಾದವರು ಉಪಾಧ್ಯಕ್ಷೆಯನ್ನು ಸಮಾಧಾನಗೊಳಿಸಿದರು.

ಕಳೆದ ಹತ್ತು ವರ್ಷಗಳ ಹಿಂದೆ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ ೫-೧ ರಲ್ಲಿ ೨೩ ಮಂದಿಗೆ ನಿವೇಶನ ಮಂಜೂರಾತಿ ನೀಡಿ ಆರ್‌ಟಿಸಿ ವಿತರಿಸಿದ್ದರೂ ಕೂಡ ಇದೂವರೆಗೂ ಅವರಿಗೆ ಸೂಕ್ತ ಜಾಗ ಬಿಡಿಸಿಕೊಡಲು ಸಾಧ್ಯವಾಗದ ಕುರಿತು ಪ್ರಶ್ನಿಸಿದ ಪಂಚಾಯಿತಿ ಹಿರಿಯ ಸದಸ್ಯ ಎಂ.ಎಸ್. ಶಿವಾನಂದ, ಬಡವರಿಗೆ ಆರ್‌ಟಿಸಿ ನೀಡಿರುವ ಜಾಗದಲ್ಲಿ ಪ್ರಭಾವಿಗಳು ಕುಳಿತಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಪೈಸಾರಿ ಜಾಗದಲ್ಲಿ ಎಕರೆಗಟ್ಟಲೆ ಭೂಮಿ ಅತಿಕ್ರಮಿಸಿ ಕೊಂಡಿರುವವರನ್ನು ತೆರವುಗೊಳಿಸಿ, ಆ ಜಾಗದಲ್ಲಿ ಆರ್‌ಟಿಸಿ ಹೊಂದಿರುವ ಫಲಾನುಭವಿಗಳನ್ನು ಕೂರಿಸಲು ಏಕೆ ಸಾಧ್ಯವಾಗಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿನ ಪೈಸಾರಿ ಜಾಗವನ್ನು ಕೆಲವು ಖಾಸಗಿ ವ್ಯಕ್ತಿಗಳು ಮಾರಿಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಪೈಸಾರಿ ಜಾಗವನ್ನು ಸಂರಕ್ಷಿಸಿಡಬೇಕಾದ್ದು ಪಂಚಾಯಿತಿಯ ಮೊದಲ ಆದ್ಯತೆ ಆಗಬೇಕಿದೆ. ಆದ್ದರಿಂದ ಸಮಗ್ರ ಸರ್ವೆಗೆ ಪಂಚಾಯಿತಿಯಿAದಲೇ ಕ್ರಮವಹಿಸಿ ಎಂದು ಸದಸ್ಯ ಆಸಿಫ್ ಹಾಗೂ ಮಣಿಕಂಠ ಹೇಳಿದರು.

ಇದೇ ವಿಚಾರದಲ್ಲಿ ಸಭೆಯಲ್ಲಿ ಗೊಂದಲವೇರ್ಪಟ್ಟಾಗ, ಸಭೆಯನ್ನು ತಹಬದಿಗೆ ತರದ ಸಭಾಧ್ಯಕ್ಷರ ಮೇಲೆ ಕೋಪಿಸಿ ಸದಸ್ಯ ಆಸಿಫ್ ಸಭೆಯಿಂದ ಹೊರನಡೆದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್, ಕಾರ್ಯದರ್ಶಿ ಬಲರಾಮೇಗೌಡ ಇದ್ದರು.