ಸುಂಟಿಕೊಪ್ಪ, ಆ. ೨೩ : ತಾಯಿಯ ಸ್ತನ್ಯಪಾನದಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಕೊಡಗರಹಳ್ಳಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಟಿ.ಎಲ್. ಸುಮ ಹೇಳಿದರು.

ಗ್ರಾಮ ಮಟ್ಟದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಕೊಡಗರಹಳ್ಳಿ, ಕಲ್ಲೂರು, ಉಪ್ಪುತೋಡು ಹಾಗೂ ಅಂದಗೋವೆ ಅಂಗನವಾಡಿ ಕೇಂದ್ರಗಳನ್ನು ಸಂಯೋಜಿಸಿ ಕೊಡಗರಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾದ ವಿಶ್ವ ಸ್ತನ್ಯಪಾನ ದಿನಾಚರಣೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.

ಕೊಡಗರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ವಿಜಯಲಕ್ಷಿö್ಮ ಸ್ತನ್ಯಪಾನದ ಮಹತ್ವ ಜೊತೆಗೆ ಪೌಷ್ಠಿಕಾಂಶಯುಕ್ತ ಆಹಾರಗಳನ್ನು ಮಗುವಿಗೆ ನೀಡುವುದರಿಂದ ಮಕ್ಕಳು ಆರೋಗ್ಯವಂತರಾಗಿ ಇರಲು ಸಾಧ್ಯವೆಂದರು.

ಸಮಾರAಭದ ಉದ್ಘಾಟನೆಯನ್ನು ನೀತಾ ಹರೀಶ್, ಕಲಾಮಣಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಗ್ರಾ.ಪಂ.ಸದಸ್ಯ ಚೆನ್ನಬಸಪ್ಪ ವಹಿಸಿದ್ದರು. ದಿನದ ಮಹತ್ವದ ಕುರಿತು ಆರೋಗ್ಯ ಕಾರ್ಯಕರ್ತೆ ಲತಾ ಮಾತನಾಡಿದರು. ಪ್ರಾಸ್ತಾವಿಕವಾಗಿ ಜೆಸ್ಸಿ ಡಿಸೋಜ ಮಾತನಾಡಿದರು.

ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆಂiÀiರಾದ ಎಸ್.ಎನ್. ಸಾವಿತ್ರಿ, ಸಿ.ಸಿ. ಮಹದೇವಮ್ಮ, ಲೀಲಾವತಿ, ಶೋಭಾವತಿ, ಜರೀನಾ, ವಿಶಾಲಾಕ್ಷಿ, ಸರಳ, ವಿಜಯ, ಕೊಡಗರಹಳ್ಳಿ ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆ ರಕ್ಷಿತಾ, ಆಶಾಕಾರ್ಯಕರ್ತೆ ಆರ್. ಕವಿತ, ಸಹಾಯಕಿಯರಾದ ಸಂಧ್ಯಾ, ಹಸೀನಾ ಮತ್ತು ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು ಇದ್ದರು.