ಕುಶಾಲನಗರ, ಆ. ೨೩: ಹುಣ್ಣಿಮೆ ಅಂಗವಾಗಿ ಕುಶಾಲನಗರದಲ್ಲಿ ಜೀವನದಿ ಕಾವೇರಿಗೆ ೧೨೨ ನೇ ಮಹಾ ಆರತಿ ಕಾರ್ಯಕ್ರಮ ನಡೆಯಿತು.

ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ನಡೆದ ಕಾರ್ಯಕ್ರಮದಲ್ಲಿ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅರ್ಚನೆ, ಅಷ್ಟೋತ್ತರ ನಂತರ ನದಿಗೆ ಮಹಾ ಆರತಿ ಬೆಳಗಿದರು. ಬಳಗದ ಪ್ರಮುಖರಾದ ಡಿ ಆರ್ ಸೋಮಶೇಖರ್, ಚೈತನ್ಯ ಚಂದ್ರ ಮೋಹನ್, ಶ್ರೀನಿವಾಸ್ ಇದ್ದರು.