ಸುAಟಿಕೊಪ್ಪ, ಆ. ೨೩: ವ್ಯಕ್ತಿಗಳಲ್ಲಿ ಮಾನವೀಯ ಮೌಲ್ಯ ಅತಿಮುಖ್ಯ ವೆಂದು ಮಡಿಕೇರಿ ಕ್ಷೇತ್ರದ ಶಾಸಕÀ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪದಿಂದ ನಿರಾಶ್ರಿತಗೊಂಡವರಿಗೆ ಉಲುಗುಲಿ ತೋಟದಲ್ಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ. ಲತೀಫ್ ಅವರು ಉಚಿತವಾಗಿ ನೀಡಿರುವ ಒಂದು ಎಕರೆ ಜಾಗದಲ್ಲಿ ಕರ್ನಾಟಕ ಕಲ್ಚರ್ ಫೌಂಡೇಶನ್ ವತಿಯಿಂದ ನಿರ್ಮಿಸಲಾದ ೩ ಮನೆ ಹಾಗೂ ೧೩ ಮಂದಿಗೆ ನಿವೇಶನ ಹಕ್ಕುಪತ್ರವನ್ನು ರಂಜನ್ ವಿತರಿಸಿ ಮಾತನಾಡಿದರು. ೧೬ ನಿವೇಶನಗಳನ್ನು ಯಾವುದೇ ಒಂದು ಧರ್ಮವರಿಗೆ ನೀಡದೆ ಎಲ್ಲಾ ವರ್ಗದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಜನತೆಗೆ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ನೋವು ಸಂಕಷ್ಟದಲ್ಲಿರುವ ಮಂದಿಗೆ ಸಂಕಷ್ಟವನ್ನು ಪರಿಹರಿಸಲು ಮುಂದಾಗುವ ಲತೀಫ್ ಅವರ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರಿನ ಯೂಸುಫ್ ಸಖಾಫಿ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಸ್ಥಳದಾನಿ ಪಿ.ಎಂ. ಲತೀಫ್ ಸನ್ಮಾನಿಸಲಾಯಿತು.

ಕೆ.ಎಸ್.ಎಫ್. ಸೌದಿ ಅರೇಬಿಯ ಅಧ್ಯಕ್ಷ ಶೇಖ್‌ಬಾವ, ಕಾರ್ಯದರ್ಶಿ ಅಬ್ದುಲ್‌ಝಲ್ ನಿಜಾಮಿ, ಕೆಯ್ಯೂರು ಹೈದ್ರುಸ್ ತಂಙಳ್, ಇಸ್ಮಾಹಿಲ್ ಸಖಾಫಿ, ಪಿ.ಆಫಿಲ್ ಸಹಾಜಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕಾಂಗ್ರೆಸ್ ಮುಖಂಡರಾದ ನವೀನ್ ಹಾಗೂ ವಿವಿಧ ಮಸೀದಿಗಳ ಮೌಲವಿಗಳು ಮತ್ತಿತರರು ಇದ್ದರು.

ರ‍್ಯಾಟ್ ಮೂಲಕ ೧೩ ಹೊಸ ಪ್ರಕರಣಗಳು

ಮಡಿಕೇರಿ, ಆ.೨೩: ಜಿಲ್ಲೆಯ ಆರ್‌ಟಿಪಿಸಿಆರ್ ಲ್ಯಾಬ್ ಸ್ಯಾನಿಟೈಸೇಷನ್ ಸಂಬAಧ ಮುಚ್ಚಿದ್ದ ಕಾರಣ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮೂಲಕ ದೃಢಪಟ್ಟ ಕೋವಿಡ್ ಪ್ರಕರಣಗಳ ಸಂಖ್ಯೆ ಮಾತ್ರ ನೀಡಲಾಗಿದ್ದು, ಒಟ್ಟು ೧೩ ಹೊಸ ಪ್ರಕರಣಗಳು ದೃಢಪಟ್ಟಿವೆ.

ಸೋಮವಾರಪೇಟೆ ತಾಲೂಕಿನಲ್ಲಿ ೪ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ೯ ಹೊಸ ಕೋವಿಡ್-೧೯ ಪ್ರಕರಣಗಳು ಕಂಡುಬAದಿವೆ. ಜಿಲ್ಲೆಯಲ್ಲಿನ ಒಟ್ಟು ಕೋವಿಡ್-೧೯ ಪ್ರಕರಣಗಳ ಸಂಖ್ಯೆ ೩೩,೨೦೯ ಆಗಿದ್ದು, ಕಳೆದ ೨೪ ಗಂಟೆಗಳ ಅವಧಿಯಲ್ಲಿ ೬೯ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟು ೩೨,೩೧೩ ಮಂದಿ ಗುಣಮುಖರಾಗಿದ್ದಾರೆ. ೪೮೮ ಸಕ್ರಿಯ ಪ್ರಕರಣಗಳಿದ್ದು, ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧ ಸಾವು ಉಂಟಾಗಿದ್ದು, ಒಟ್ಟು ೪೦೮ ಮರಣ ಪ್ರಕರಣಗಳು ವರದಿಯಾಗಿದೆ. ಕಂಟೈನ್‌ಮೆAಟ್ ವಲಯಗಳ ಸಂಖ್ಯೆ ೮೬ ಆಗಿವೆ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.೨.೭೭ ಆಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ.