ಮಡಿಕೇರಿ, ಆ. ೨೩: ಮಾರ್ಗ ದರ್ಶಿ ತ್ರಿನೇತ್ರ ಯುವಕ ಸಂಘ ಹಾಕತ್ತೂರು, ತೊಂಭತ್ತುಮನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ತಾಲೂಕು ಯುವ ಒಕ್ಕೂಟ ಇವರ ಆಶ್ರಯದಲ್ಲಿ ತ್ರಿನೇತ್ರ ಯುವಕ ಸಂಘದ ಸಭಾಂಗಣದಲ್ಲಿ ಯುವಕ ಸಂಘದ ಬೆಳ್ಳಿ ಹಬ್ಬದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅದರ ಭಾಗವಾಗಿ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಜನರಿಗೆ ತಲುಪಿಸುವ ಕಾರ್ಯಕ್ರಮವನ್ನು ೨ ಹಂತದಲ್ಲಿ ನಡೆಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಂತವೈದ್ಯ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಡಾ. ಸುಭಾಷ್ ನಾಣಯ್ಯ, ಬೆಳ್ಳಿಹಬ್ಬದ ಪ್ರಯುಕ್ತ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮ ಮಹತ್ವದ್ದಾಗಿದೆ. ಇದು ಎಲ್ಲಾ ಯುವಕ ಸಂಘಗಳಿಗೆ ಮಾದರಿಯಾಗಿದ್ದು, ಈ ಯುವಕ ಸಂಘ ಜಿಲ್ಲೆಯಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಜನರು ಲಸಿಕಾ ಅಭಿಯಾನದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ಹೆಚ್ಚು ಹೆಚ್ಚು ಲಸಿಕೆ ತಲುಪಿಸುವ ಯೋಜನೆಯಲ್ಲಿ ಕೈಜೋಡಿಸುವಂತೆ ಸಲಹೆ ನೀಡಿದರು. ಬೆಳ್ಳಿ ಹಬ್ಬದ ವಿಶೇಷ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಪ್ರೋತ್ಸಾಹ ನೀಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಆರೋಗ್ಯ ಮುಕ್ತ ಸಮಾಜಕ್ಕೆ ಕೈ ಜೋಡಿಸುವಂತೆ ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಪಂಚಾಯಿತಿ ಉಪಾಧ್ಯಕ್ಷ ಕಿರಣ್, ಸದಸ್ಯೆ ಶೈನಿ, ಅಭಿವೃದ್ಧಿ ಅಧಿಕಾರಿ ಚಂಗಪ್ಪ ಮಾತನಾಡಿದರು. ಪ್ರಾಸ್ತಾವಿಕ ಮಾತನಾಡಿದ ಯುವಕ ಸಂಘದ ಅಧ್ಯಕ್ಷ ಪಿ.ಪಿ.ಸುಕುಮಾರ ಸಂಘ ಸ್ಥಾಪನೆಯಾದಲ್ಲಿಂದ ಇಲ್ಲಿಯವರೆಗೆ ನಡೆದು ಬಂದ ಹಾದಿಯನ್ನು ವಿವರಿಸಿ, ಸಂಘದ ಮುಂದಿನ ಚಟುವಟಿಕೆಗೆ ಸರ್ವರ ಸಹಕಾರದೊಂದಿಗೆ ಲಸಿಕಾ ಅಭಿಯಾನ ಮುಂದುವರೆಯಲಿದೆ, ಸಂಪೂರ್ಣ ಕೋವಿಡ್ ಮುಕ್ತ ಮಾಡಲು ಶ್ರಮವಹಿಸಲಾಗುತ್ತಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಕೆ.ವೈ. ಜಲೀಲ್, ಸಾಂಸ್ಕೃತಿಕ ಕಾರ್ಯದರ್ಶಿ ಎಂ.ಕೆ. ರಾಜ, ಸದಸ್ಯರಾದ ಟಿ.ಬಿ. ಮಂಜುನಾಥ, ಸುನಿತ ಸಿ.ವಿ., ವಿಠಲ, ರಂಜನ್, ಆಶಾ ಕಾರ್ಯಕರ್ತೆ ಬಿ.ವಿ. ಸರೋಜ, ಆರೋಗ್ಯ ಇಲಾಖೆಯ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಕೀರ್ತನಾ ಹಾಗೂ ದೀಕ್ಷಿತಾ, ಕುಸುಮ, ಆರೋಗ್ಯ ಇಲಾಖೆ ಕಿರಿಯರ ಪುರುಷ ಆರೋಗ್ಯ ಸಹಾಯಕ ಚರಣ್ ಹಾಜರಿದ್ದರು.
ಸಂಘದ ಸ್ಥಾಪಕ ಪಿ.ಈ. ದಿವಾಕರ ಸ್ವಾಗತಿಸಿದರು. ಎಂ.ಎA. ಅಬೂಬಕರ್ ನಿರೂಪಿಸಿ, ವಂದಿಸಿದರು.