ಮಡಿಕೇರಿ, ಆ. ೨೩: ಸುಂಟಿಕೊಪ್ಪ ಗದ್ದೆಹಳ್ಳದ ವಿಕಾಸ್ ಜನಸೇವಾ ಟ್ರಸ್ಟ್ಗೆ ಅಂದಗೋವೆ ಎನ್.ಬಿ. ಬೊಳ್ಳಮ್ಮ (೯೪) ಎಂಬವರು ತಮ್ಮ ಪತಿಯ ಸ್ಮರಣಾರ್ಥ ೩೦ ಸೆಂಟ್ ಜಾಗವನ್ನು ಶಾಸಕ ಅಪ್ಪಚ್ಚು ರಂಜನ್ ಅವರ ಮುಖಾಂತರ ದಾನ ಮಾಡಿದರು.
ಈ ಸಂದರ್ಭ ಶಾಸಕ ಅಪ್ಪಚ್ಚು ರಂಜನ್ ಅವರು ಉಳಿದ ೭೦ ಸೆಂಟ್ ಆಸ್ತಿಯನ್ನು ಸ್ವಂತ ಖರೀದಿಸಿ ಆಶ್ರಮಕ್ಕೆ ನೀಡುತ್ತೇನೆ ಹಾಗೂ ಆಶ್ರಮಕ್ಕೆ ಕಟ್ಟಡವನ್ನು ನಿರ್ಮಿಸಿಕೊಡುತ್ತೇನೆ ಎಂದು ಭರವಸೆಯಿತ್ತರು. ಈ ಸಂದರ್ಭ ರಾಣಿ ಮಾಚಯ್ಯ, ಬೊಳ್ಳಮ್ಮ ಅವರ ಪುತ್ರ ಎನ್.ಬಿ. ಬೆಳ್ಯಪ್ಪ, ಸೊಸೆ ನಿರತ ಹಾಗೂ ಟ್ರಸ್ಟ್ನ ಅಧ್ಯಕ್ಷ ರಮೇಶ್, ಪತ್ನಿ ರೂಪ, ಸಿಬ್ಬಂದಿ ರಾಧ ಮತ್ತಿತರರು ಇದ್ದರು.