ಸೋಮವಾರಪೇಟೆ, ಆ. ೨೩: ಇಲ್ಲಿನ ಶ್ರೀ ಸೋಮೇಶ್ವರ ದೇವಾಲಯ, ಬ್ರಾಹ್ಮಣ ಸಮಾಜ ವತಿಯಿಂದ ಋಷಿ ಆಹ್ವಾನ ಮತ್ತು ಯಜ್ಞೋಪವಿತಧಾರಣಾ ಉಪಾಕರ್ಮ ನಡೆಯಿತು.
ಪ್ರಧಾನ ಅರ್ಚಕ ಚಿತ್ರಕುಮಾರ್ ಭಟ್ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆದವು. ಸರ್ಕಾರದ ಮಾರ್ಗಸೂಚಿ ಕೋವಿಡ್ ೧೯ ಹಿನ್ನೆಲೆಯಲ್ಲಿ ಸೀಮಿತ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಕಾರ್ಯದರ್ಶಿ ಎಸ್. ಡಿ.ವಿಜೇತ್, ಸುದರ್ಶನ್ ಕೌಶಿಕ್, ರವಿಶಂಕರ್, ಜಯಂತ್, ದಿನೇಶ್ ಹಾಲೇರಿ ಮತ್ತು ಎಸ್. ಎನ್. ಸೋಮಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.