ಸೋಮವಾರಪೇಟೆ,ಆ.೨೩: ಇಲ್ಲಿನ ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲ್ಲಿ ಸದ್ಭಾವನಾ ದಿನ ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಹೆಚ್.ಎನ್. ರಾಜು ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ನಂತರ ಮಾತನಾಡಿ, ಭಾರತÀ ಬಹು ಭಾಷೆ, ಧರ್ಮ ಮತ್ತು ಸಂಸ್ಕೃತಿಗಳ ತವರಾಗಿದೆ. ಇಲ್ಲಿ ಶಾಂತಿ ಸೌಹಾರ್ದತೆಗಳು ನಿರಂತರವಾಗಿ ಮುಂದುವರೆದುಕೊAಡು ಹೋಗುವಂತಾಗಬೇಕು. ಆ ದೃಷ್ಟಿಯಿಂದ ದೇಶದ ನಾಗರಿಕರಾದ ನಾವು ನಮ್ಮ ಧರ್ಮ ಸಂಸ್ಕೃತಿಗಳಲ್ಲದೇ ಇತರೆ ಧರ್ಮ, ಭಾಷೆ, ಸಂಸ್ಕೃತಿಗಳನ್ನು ಸಮಾನ ಮನೋಭಾವನೆಯಿಂದ ಸ್ವೀಕರಿಸಬೇಕು ತಿಳಿಸಿದರು.

ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ.ಎನ್.ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಆಂತರಿಕ ಗುಣಮಟ್ಟ ಖಾತ್ರಿ ಕೋಶದ ಸಂಚಾಲಕ ಎಂ.ಎಸ್. ಶಿವಮೂರ್ತಿ, ಪ್ರಾಧ್ಯಾಪಕರುಗಳಾದ ಬಿ.ಎಂ. ಪ್ರವೀಣ್‌ಕುಮಾರ್, ಕೆ.ಹೆಚ್. ಧನಲಕ್ಷಿö್ಮ, ಬೋಧಕೇತರ ಸಿಬ್ಬಂದಿಗಳಾದ ಶಿವ, ನವೀನ್‌ಕುಮಾರ್, ಹೆಚ್.ಜೆ. ಜವರ, ವೈ.ಎನ್. ಧರ್ಮಪ್ಪ, ಮಹೇಶ್, ಚಾಣಕ್ಯ ಕಾಲೇಜಿನ ಉಪನ್ಯಾಸಕರುಗಳಾದ ರೋಜ ಮತ್ತು ಸಹನ ಉಪಸ್ಥಿತರಿದ್ದರು. ಬಿಟಿಸಿಜಿ ಪದವಿಪೂರ್ವ ಕಾಲೇಜು ಮತ್ತು ಚಾಣಕ್ಯ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.