ಮಡಿಕೇರಿ, ಆ.೨೩: ಗುರುಕುಲ ಕೊಡಗು ಘಟಕದ ವತಿಯಿಂದ ಸ್ವಾತಂತ್ರೊö್ಯÃತ್ಸವ ಅಂಗವಾಗಿ ಆನ್ ಲೈನ್ ಮೂಲಕ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ದೇಶ ಭಕ್ತಿ ಗೀತೆ ಗಾಯನ ಸ್ಪರ್ಧೆಗೆ ೧೬೦ಕ್ಕೂ ಹೆಚ್ಚು ಆಡಿಯೋಗಳು ಬಂದಿದ್ದು, ‘ಸಾತಂತ್ರö್ಯ ಸಿರಿ' ಕಾರ್ಯಕ್ರಮದಲ್ಲಿ ವಿಜೇತರಿಗೆ ಪುಸ್ತಕ ಬಹುಮಾನ ಹಾಗೂ ಶ್ರೇಷ್ಠ ಸ್ಥಾನ ,ಅತ್ಯುತ್ತಮ ಸ್ಥಾನ, ಉತ್ತಮ ಸ್ಥಾನ ಹಾಗೂ ಪ್ರೋತ್ಸಾಹಕರ ಸ್ಥಾನಗಳಿಗೆ ಪ್ರಶಸ್ತಿ ಪತ್ರ ನೀಡಿ, ಗೌರವಿಸಲಾಯಿತು.
ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯ ಗಾಯಕರು ಸಿಂಹ ಪಾಲನ್ನು ಹೊಂದುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗಿನ ವಿಧುಷಿ ನಿರ್ಮಲ ಬೋಪಣ್ಣ ನೆರವೇರಿಸಿದರು. ಅಧ್ಯಕ್ಷತೆಯನ್ನು ಚತುರ್ಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ವಹಿಸಿದ್ದರು. ತೀರ್ಪುಗಾರಿಕೆಯ ಜವಾಬ್ದಾರಿಯನ್ನು ಮೈಸೂರಿನ ಮೀರಾ ನಾಡಿಗ್ ದೀಪಕ್ ನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಗುರುಕುಲ ಕಲಾ ಪ್ರತಿಷ್ಠಾನ ರಾಜ್ಯಘಟಕ ರಾಜ್ಯಾಧ್ಯಕ್ಷ ಹುಲಿಯೂರು ದುರ್ಗ ಲಕ್ಷಿö್ಮ ನಾರಾಯಣ್, ರಾಜ್ಯ ಕಾರ್ಯಾಧ್ಯಕ್ಷ ಡಾ. ಶಿವರಾಜಗೌಡ, ಮೈಸೂರು ಘಟಕದ ಜಿಲ್ಲಾಧ್ಯಕ್ಷ ಶಮಂತ ಕುಮಾರ್ .ಎಸ್. ಭಾಗವಹಿಸಿದ್ದರು. ವಿಶೇಷ ಆಹ್ವಾನಿತರಾಗಿದ್ದ ಗಾಯಕ ಬಿ.ಎಸ್. ಲಾಲ್ಕುಮಾರ್ ವಿಜೇತರಿಗೆ ಬಹುಮಾನ ಹಾಗೂ ಪ್ರಸಸ್ತಿ ಪತ್ರಗಳನ್ನು ವಿತರಿಸಿದರು.
ಪುಸ್ತಕ ಬಹುಮಾನ ವಿಜೇತರು
ಅನ್ವಿತ್ ಕುಮಾರ್, ಪೊನ್ನಂಪೇಟೆ, ಸುಪ್ರಿಯಾ ತಿರುಮಲೇಶ್ ಭಟ್, ಧಾರವಾಡ, ಆಯುಷ್.ಎಂ.ಡಿ.,ವಿರಾಜಪೇಟೆ,
ಶ್ರೇಷ್ಠ ಸ್ಥಾನ
ಬೈಲೆ ಸಹನಾ ಚಂದನ್, ಮೂರ್ನಾಡ್, ಶರ್ಮಿಳಾ ರಮೇಶ್,ಸೋಮವಾರ ಪೇಟೆ, ಕಾವ್ಯ.ಕೆ.ಜಿ., ಕುಶಾಲನಗರ, ವಿ.ಟಿ.ಶ್ರೀನಿವಾಸ್, ಗೋಣಿಕೊಪ್ಪಲು, ಸ್ನೇಹ ಮಧುಕರ್ ಶೇಟ್,ಮಡಿಕೇರಿ, ವಸುಂಧರ ಭಾರ್ಗವ್.ಐ.ಎಸ್., ಕೊಡಗು, ರಮ್ಯಶ್ರೀ ಭರತ್, ತಿಪಟೂರು ಮತ್ತು ಸುಮಾರು ೬೦ ಮಂದಿ ಅತ್ಯುತ್ತಮ ಸ್ಥಾನ, ೨೫ ಉತ್ತಮ ಸ್ಥಾನ ಹಾಗೂ ಉಳಿದಂತೆ ಎಲ್ಲರಿಗೂ ಪ್ರೋತ್ಸಾಹಕರ ಪ್ರಶಸ್ತಿ ಪತ್ರವನ್ನು ಆನ್ಲೈನ್ ಮೂಲಕ ನಡೆದ "ಸ್ವಾತಂತ್ರ‍್ಯ ಸಿರಿ.' ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತು. ಪುಸ್ತಕ ಬಹುಮಾನವನ್ನು ಅಂಚೆ ಮೂಲಕ ಕಳುಹಿಸಿಕೊಡಲಾಗುವುದು ಎಂದು ಗುರುಕುಲ ಕೊಡಗು ಘಟಕದ ಜಿಲ್ಲಾಧ್ಯಕ್ಷೆ ಕೆ.ಶೋಭಾ ರಕ್ಷಿತ್ ತಿಳಿಸಿದ್ದಾರೆ. ಪ್ರಾರ್ಥನೆ ಮತ್ತು ಸ್ವಾಗತವನ್ನು ಕೆ.ಶೋಭಾರಕ್ಷಿತ್ ನೆರವೇರಿಸಿದರು. ಹೆಚ್.ಜಿ.ಸಾವಿತ್ರಿ ಪ್ರಾಸ್ತಾವಿಕ ನುಡಿಗಳಾಡಿದರು. ಶಿಕ್ಷಕಿ ಮಾಲಾಮೂರ್ತಿ ಸಮಾರೋಪ ಭಾಷಣ ಮಾಡಿದರು. ಲತಾ ಜೈಶಂಕರ್ ವಂದಿಸಿದರು. ಕುಸುಮಾಕರ ಅಂಬೆಕಲ್ಲು ರಾಷ್ಟçಗೀತೆ ಹಾಡಿದರು.