*ವೀರಾಜಪೇಟೆ, ಆ. ೨೩: ಹರ್ಷವರ್ಧನ್ ನಿಧನದಿಂದ ತೆರವಾಗಿದ್ದ ವೀರಾಜಪೇಟೆ ಪಟ್ಟಣ ಪಂಚಾಯ್ತಿಯ ಮೀನುಪೇಟೆ ವಾರ್ಡ್ನ ಸದಸ್ಯ ಸ್ಥಾನದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾದಂಡ ತಿಮ್ಮಯ್ಯ ಉಮೇದುವಾರಿಕೆ ಸಲ್ಲಿಸಿದರು.
ಇಂದು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಚುನಾವಣಾಧಿಕಾರಿ ಲಾಲ್ ಕುಮಾರ್ ಹಾಗೂ ಉಪತಹಶೀಲ್ದಾರ್ ಪ್ರದೀಪ್ ಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಅಭ್ಯರ್ಥಿ ತಿಮ್ಮಯ್ಯ, ವೀರಾಜಪೇಟೆಯ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಮುಖಂಡರು ಆದ ಎಂ.ಎಸ್ ಪೂವಯ್ಯನವರ ಪುತ್ರ.
ನಾಮಪತ್ರ ಸಲ್ಲಿಕೆ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಕಾಂಗ್ರೆಸ್ ನಗರ ಅಧ್ಯಕ್ಷ ಜಿ.ಜಿ ಮೋಹನ್, ಸಿ.ಕೆ, ನಾಸಿರ್, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರುಗಳಾದ ಗೋಪಾಲಕೃಷ್ಣ, ಚಿಲುವಂಡ ಕಾವೇರಪ್ಪ, ಪಟ್ಟಣ ಪಂಚಾಯತ್ ಸದಸ್ಯರುಗಳಾದ ಮೊಹಮ್ಮದ್ ರಾಫಿ, ರಾಜೇಶ್ ಪದ್ಮನಾಭ, ಪೃಥ್ವಿನಾಥ್, ಬೆನ್ನಿ ಅಗಸ್ಟಿನ್, ಫಸಿಹಾ ತಬಸುಮ್, ರಜನಿಕಾಂತ್, ಮತೀನ್ ಸೇರಿದಂತೆ ಇನ್ನಿತರರು ಹಾಜರಿದ್ದರು.