ಶನಿವಾರಸಂತೆ, ಆ. ೨೨: ಶನಿವಾರಸಂತೆ ಸಮೀಪದ ಗಡಿಭಾಗ ಯಸಳೂರು ಗ್ರಾಮ ಪಂಚಾಯಿತಿ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕ ಗಳಿಸಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸೆಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಜನಿತಾಳನ್ನು ಸನ್ಮಾನಿಸಿ ಗೌರವಿಸಲಾಯಿತು. ಪಂಚಾಯಿತಿ ಅಧ್ಯಕ್ಷ ವೈ.ಎನ್. ಹರ್ಷ, ಉಪಾಧ್ಯಕ್ಷೆ ಮನುಪರಮೇಶ್, ಪಿಡಿಓ ಎಂ.ಎಸ್. ಮಲ್ಲೇಗೌಡ, ಸದಸ್ಯರು, ಸಿಬ್ಬಂದಿ ಹಾಜರಿದ್ದರು.