*ವೀರಾಜಪೇಟೆ, ಆ,. ೨೧: ವೀರಾಜಪೇಟೆ ನಗರದ ಮೀನುಪೇಟೆ ೧೩ನೇ ವಾರ್ಡ್ ಪಟ್ಟಣ ಪಂಚಾಯಿತಿ ಉಪ ಚುನಾವಣೆಗೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕೊಡಗು ಬಿಜೆಪಿಯ ಮಾಜಿ ಜಿಲ್ಲಾ ಅಧÀ್ಯಕ್ಷ ಸುಜಾಕುಶಾಲಪ್ಪ ಅವರ ಪುತ್ರ ವಿನಾಂಕ್ ಕುಟ್ಟಪ್ಪ ನಾಮಪತ್ರ ಸಲ್ಲಿಸಿದರು. ವೀರಾಜಪೇಟೆ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಚುನಾವಣಾ ಅಧಿಕಾರಿಗಳು ಹಾಗೂ ಉಪ ತಹಶೀಲ್ದಾರ್ ಪ್ರದೀಪ್ ಕುಮಾರ್ ಮತ್ತು ಲಾಲ್ ಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಹಿಂದೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ಪಟ್ಪಣ ಪಂಚಾಯತಿ ಉಪಾಧ್ಯಕ್ಷರಾಗಿದ್ದ ಹರ್ಷವರ್ಧನ ಅವರ ನಿಧನದಿಂದಾಗಿ ಆ ಸ್ಥಾನ ತೆರವಾಗಿತ್ತು. ಚುನಾವಣೆ ಸೆಪ್ಟೆಂಬರ್ ೩ ರಂದು ನಡೆಯಲಿದೆ.

ನಾಮಪತ್ರ ಸಲ್ಲಿಸುವ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಬಿಜೆಪಿ ಮುಖಂಡರುಗಳಾದ ನೆಲ್ಲೀರ ಚಲನ್, ಸುಜಾಕುಶಾಲಪ್ಪ, ರಘುನಾಣಯ್ಯ, ರೀನಾಪ್ರಕಾಶ್, ಪ.ಪಂ ಹಾಲಿ ಅಧ್ಯಕ್ಷರಾದ ಸುಶ್ಮಿತ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಜೂನ, ಪ.ಪಂ ಸದಸ್ಯರುಗಳಾದ ಆಶಾ, ಅನಿತ, ಯಶೋದ, ಮಾಜಿ ಸದಸ್ಯರಾದ ಟಿ. ಜೆ ಶಂಕರ್, ಸಂತೋಷ, ಕುಮಾರ್, ಸಚಿನ್, ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.