ಮಡಿಕೇರಿ, ಆ. ೨೧: ಮುಂದಿನ ಹದಿನೈದು ವರ್ಷಗಳ ನಂತರ ಅಧಿಕಾರಕ್ಕೆ ಬರುವ ಇಂದಿನ ಶಾಲಾ ವಿದ್ಯಾರ್ಥಿಗಳಿಗೆ ನೈತಿಕ ಪಾಠಗಳನ್ನು ತಿಳಿಹೇಳುವ ಕೆಲಸ ಮಾಡಬೇಕಿದೆ ಎಂದು ಸಮಾಜಮುಖಿ ಚಿಂತಕ ಹೆಚ್.ಕೆ. ವಿವೇಕಾನಂದರವರು ನುಡಿದರು. ಕಾಲ್ನಡಿಗೆಯ ಮೂಲಕ ಜ್ಞಾನಭಿಕ್ಷೆ ಪಾದಯಾತ್ರೆಯು ಮಡಿಕೇರಿಗೆ ಬಂದ ಸಂದರ್ಭದಲ್ಲಿ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರು ಬಳಗ ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ಏರ್ಪಡಿಸಿದ ಸಂವಾದ ಕಾರ್ಯಕ್ರಮ ದಲ್ಲಿ ಮಾತನಾಡುತಿದ್ದರು.
ಜನನ ಮತ್ತು ಮರಣ ಪತ್ರ ಪಡೆಯಲು ಲಂಚ ಕೊಡಬೇಕಾದ ದಿನಗಳ ನಡುವೆ ನಾವಿದ್ದೀವಿ. ಮುಂದಿನ ಪೀಳಿಗೆಯು ಈ ಸಮಸ್ಯೆಯಿಂದ ಹೊರತರಬೇಕಾಗಿದೆ. ಈಗಿನ ಹದಿನೈದು ವರ್ಷದ ಯುವಕರಿಗೆ ನೈತಿಕ ಪಾಠವಾಗಬೇಕಿದೆ. ಪ್ರಸ್ತುತ ಯುವಜನತೆಯನ್ನು ತಪ್ಪು ದಾರಿಗೆ ಕರೆದೊಯ್ಯುತ್ತಿದ್ದಾರೆ. ಪ್ರಸಿದ್ಧ ಕ್ರೀಡಾಪಟುಗಳು, ಕ್ರಿಕೆಟ್ ಆಟಗಾರರು ಕ್ರಿಕೆಟ್ನಲ್ಲಿ ಬೆಟ್ಟಿಂಗ್ ಆಡುವಂತೆ ಇಸ್ಪೀಟು ಆಡುವಂತೆ ಪ್ರಚೋದಿಸುವ ಜಾಹೀರಾತಿನಲ್ಲಿ ನಟಿಸುತ್ತಾರೆ. ಜವಾಬ್ದಾರಿ ಮರೆತು ಜಾಹೀರಾತಿನ ಹಣದ ಹಿಂದೆ ಬಿದ್ದಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಯುವಪೀಳಿಗೆಗೆ ನೈತಿಕ ಮೌಲ್ಯಗಳ ಪರಿಚಯ ಮಾಡಿಸ ಬೇಕಾಗಿದೆ. ಅವರ ಜವಾಬ್ದಾರಿಯನ್ನು ಹೇಳಿಕೊಡ ಬೇಕಾಗಿದೆ. ತಾವು ಪಾದಯಾತ್ರೆ ಮೂಲಕ ಜ್ಞಾನ ಭಿಕ್ಷೆ ಎನ್ನುವ ಈ ಅಭಿಯಾನವನ್ನು ಪಾರಂಭಿಸಿದ್ದು, ಖಾಲಿ ಕೈ ನಲ್ಲಿ ಮನೆಯಿಂದ ಹೊರಟಿದ್ದು, ೨೦೨೦ರ ಕನ್ನಡ ರಾಜ್ಯೋತ್ಸವ ನವೆಂಬರ್ ಒಂದರAದು ಕರ್ನಾಟಕದ ತುತ್ತ ತುದಿ ಬೀದರ್ ಜಿಲ್ಲೆಯಿಂದ ಕಾಲ್ನಡಿಗೆ ಯಲ್ಲಿ ಈ ಎಲ್ಲ ವಿಚಾರಗಳನ್ನು ಪ್ರತೀ ತಾಲೂಕಿನಲ್ಲಿ ಅಲ್ಲಲ್ಲಿ ಸಭೆಗಳನ್ನು ನಡೆಸುತ್ತಾ ೨೯೧ ದಿನಗಳಲ್ಲಿ ೯೦೦೦ ಕಿಲೋಮಿಟರುಗಳ ದೂರ ಪಾದಯಾತ್ರೆ ಮಾಡುತ್ತ ೨೧ ನೇ ಜಿಲ್ಲೆಯಾಗಿ ಕೊಡಗಿಗೆ ಬಂದಿದ್ದು ಮುಂದೆ ಇನ್ನೂ ೧೧ ಜಿಲ್ಲೆಗಳಲ್ಲಿ ಸಂಚರಿಸಲಿದ್ದೇನೆ. ಇನ್ನೂ ಐದು ಸಾವಿರ ಕಿಲೋಮೀಟರ್ ಪಾದಯಾತ್ರೆ ಮಾಡಿ ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿ ತಮ್ಮ ಜ್ಞಾನ ಭಿಕ್ಷೆ ಪಾದಯಾತ್ರೆ ಕೊನೆಗೊಳ್ಳಲಿದೆ ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಜಿ ಪಂ ಸದಸ್ಯ ವಿ.ಪಿ ಶಶಿಧರ್, ಬಳಗದ ನಿರ್ದೇಶಕ ಮುನೀರ್ ಅಹಮದ್, ಕೊಡಗು ಸಾಹಿತ್ಯ ಪರಿಷತ್ತಿನ ಮಾಜಿ ತಾಲೂಕು ಅಧ್ಯಕ್ಷರಾಗಿದ್ದ ಕೆ.ಟಿ. ಬೇಬಿ ಮ್ಯಾಥ್ಯೂ, ಆರ್.ಪಿ. ಚಂದ್ರಶೇಖರ್, ಕೆ. ಜಯಲಕ್ಷಿö್ಮ, ತನ್ನಿರ ಮೈನಾ, ಕೊಡಗು ಪತ್ರಿಕಾ ಭವನದ ಮ್ಯಾನೇಜಿಂಗ್ ಟ್ರಸ್ಟಿ ಮನುಶೆಣೈ ಭಾಗಿಯಾಗಿದ್ದರು.
ನಂತರ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಟಿ.ಪಿ. ರಮೇಶ್ ಉತ್ತಮವಾದ ಚಿಂತನೆಯೊAದಿಗೆ ಪಾದಯಾತ್ರೆ ಮಾಡುತ್ತಿರುವ ವಿವೇಕಾನಂದ ರವರ ಚಿಂತನೆಯನ್ನು ಜಿಲ್ಲೆಯಲ್ಲಿ ಮುಂದುವರಿಸಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಹೆಚ್.ಕೆ. ವಿವೇಕಾನಂದ ರವರ ಚಿಂತನೆ ಈ ಸಭೆಗೆ ಮಾತ್ರ ಸೀಮಿತವಾಗದೆ ಕಾಲೇಜು ವಿದ್ಯಾರ್ಥಿಗಳಿಗೆ ವಿಚಾರ ತಲುಪಿಸಿ ಅವರನ್ನು ಮುಂದಿನ ಉತ್ತಮ ನಾಗರಿಕರಾಗಿಸಬೇಕಿದೆ. ಮುಂದೆ ಇವರು ವೀರಾಜಪೇಟೆ ತಾ. ೨೧ ರಂದು (ಇಂದು), ಗೋಣಿಕೊಪ್ಪಲು ಮತ್ತು ಪೊನ್ನಂಪೇಟೆ ತಾ. ೨೨ ರಂದು ಸಿದ್ದಾಪುರ ಮತ್ತು ತಾ. ೨೩ ರಂದು ಕುಶಾಲನಗರ, ತಾ. ೨೪ ರಂದು ಸೋಮವಾರಪೇಟೆಯಲ್ಲಿ ಕಾರ್ಯಕ್ರಮ ನಡೆಸಿ ಮುಂದೆ ಹಾಸನ ಜಿಲ್ಲೆಗೆ ತೆರಳಲಿದ್ದಾರೆ ಎಂದರು.
ಕೊಡಗು ರಕ್ಷಣಾ ವೇದಿಕೆಯ ರವಿಗೌಡ, ನಗರಸಭೆ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಹೆಚ್.ಎಲ್. ದಿವಾಕರ್ ಉಪಸ್ಥಿತರಿದ್ದರು. ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫೆçಡ್ ಕ್ರಾಸ್ತಾ ನಿರೂಪಿಸಿದರು. ಅಧ್ಯಾಪಕ ಕೆ.ಯು. ರಂಜಿತ್ ವಂದಿಸಿದರು.