ಮಡಿಕೇರಿ, ಆ. ೨೧: ದ್ವಿತೀಯ ಪಿ.ಯು ಕನ್ನಡ ವಿಷಯದ ಪರೀಕ್ಷೆ ಮಡಿಕೇರಿ, ಆ. ೨೧: ದ್ವಿತೀಯ ಪಿ.ಯು ಕನ್ನಡ ವಿಷಯದ ಪರೀಕ್ಷೆ ಜಿಲ್ಲೆಯಲ್ಲಿನ ೩ ಪರೀಕ್ಷೆ ಕೇಂದ್ರಗಳಾದ ಮಡಿಕೇರಿ, ಸೋಮವಾರಪೇಟೆ ಹಾಗೂ ವೀರಾಜಪೇಟೆ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷೆ ನಡೆಯಿತು.

ತಾ. ೧೯ ರಿಂದ ಪರೀಕ್ಷೆ ಪ್ರಾರಂಭವಾಗಿದ್ದು, ಅಂದು ನಡೆಯಬೇಕಿದ್ದ ಗಣಿತ ಪರೀಕ್ಷೆಗೆ ನೋಂದಣಿ ಮಾಡಿದ್ದ ಏಕೈಕ ವಿದ್ಯಾರ್ಥಿನಿ ಅನಾರೋಗ್ಯ ಸಂಬAಧ ಗೈರಾಗಿ ಪರೀಕ್ಷೆ ನಡೆದಿರಲಿಲ್ಲ.

ಆದರೆ ಇಂದು ನಡೆದ ಕನ್ನಡ ವಿಷಯದ ಪರೀಕ್ಷೆಗೆ ಖಾಸಗಿಯಾಗಿ ನೋಂದಾಯಿಸಿದ್ದ ಒಟ್ಟು ೨೦೬ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಡಿಕೇರಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಒಟ್ಟು ೩೨ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಇದ್ದು, ಪೊಲೀಸ್

(ಮೊದಲ ಪುಟದಿಂದ) ಇಲಾಖೆಯಿಂದ ಭದ್ರತೆ ಕಲ್ಪಿಸಲಾಗಿತ್ತು. ಆರೋಗ್ಯ ಇಲಾಖೆ ವತಿಯಿಂದ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕಾö್ಯನಿಂಗ್‌ಗೆ ಒಳಪಡಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ವಿಜಯ ಹಾಗೂ ಉಪನ್ಯಾಸಕ ಚಿದಾನಂದ ಹಾಜರಿದ್ದು ಪರೀಕ್ಷೆಯ ಮೇಲುಸ್ತುವಾರಿ ವಹಿಸಿದ್ದರು.

ಸೋಮವಾರಪೇಟೆ: ೧೧೯ ಮಂದಿ ಹಾಜರು

ಇಲ್ಲಿನ ಜೂನಿಯರ್ ಕಾಲೇಜಿನಲ್ಲಿ ತೆರೆಯಲಾಗಿರುವ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರದಲ್ಲಿ ೧೧೯ ಮಂದಿ ಪರೀಕ್ಷೆಗೆ ಹಾಜರಾದರು.

ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿರುವ ೧೩೦ ವಿದ್ಯಾರ್ಥಿಗಳಿಗೆ ಇಲ್ಲಿನ ಜೂನಿಯರ್ ಕಾಲೇಜಿನ ಕೊಠಡಿಗಳಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ಕೈಗೊಂಡಿದ್ದು, ಕನ್ನಡ ಭಾಷೆಯ ಪರೀಕ್ಷೆಗೆ ೧೧೯ ಮಂದಿ ಹಾಜರಾದರು.

ಪರೀಕ್ಷೆಗೆ ಹಾಜರಾದವರನ್ನು ಪರೀಕ್ಷಾ ಕೇಂದ್ರದ ಹೊರಭಾಗದಲ್ಲಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಯಿತು. ಸರ್ಕಾರಿ ಆಸ್ಪತ್ರೆಯ ಚಂದ್ರಾವತಿ ಹಾಗೂ ಚರಣ್ ಅವರುಗಳು ಎಲ್ಲರಿಗೂ ರ‍್ಯಾಪಿಡ್ ಪರೀಕ್ಷೆ ಮಾಡಿದರು. ಎಲ್ಲರಿಗೂ ನೆಗೆಟಿವ್ ಫಲಿತಾಂಶ ಬಂದಿದ್ದರಿAದ ಪರೀಕ್ಷಾ ಕೇಂದ್ರದೊಳಗೆ ತೆರಳಲು ಅವಕಾಶ ಕಲ್ಪಿಸಲಾಯಿತು.

ಪಾಸಿಟಿವ್ ಬಂದವರನ್ನು ಕೂಡಿಗೆಯ ಕೋವಿಡ್ ಕೇರ್ ಸೆಂಟರ್‌ಗೆ ಕರೆಯೊಯ್ದು ಅಲ್ಲಿ ಪರೀಕ್ಷೆ ಎದುರಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಯಾರಲ್ಲೂ ಪಾಸಿಟಿವ್ ಬಾರದ ಹಿನ್ನೆಲೆ ಇಲ್ಲೇ ಪರೀಕ್ಷೆ ಎದುರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕಾಲೇಜು ಪ್ರಾಂಶುಪಾಲ ಬೆಳ್ಳಿಯಪ್ಪ ಹಾಗೂ ಉಪನ್ಯಾಸಕಿ ತಿಲೋತ್ತಮೆ ತಿಳಿಸಿದರು.

ಜೂನಿಯರ್ ಕಾಲೇಜಿನಲ್ಲಿ ಒಟ್ಟು ೧೩೭ ಮಂದಿ ಪರೀಕ್ಷೆ ಎದುರಿಸಲಿರುವುದರಿಂದ ೧೪ ಕೊಠಡಿಗಳನ್ನು ಸಿದ್ಧಪಡಿಸಲಾಗಿದ್ದು, ಪ್ರತಿ ಕೊಠಡಿಯಲ್ಲಿ ೧೦ ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ವಿಶೇಷ ಚೇತನ ಅಣ್ಣಪ್ಪ ಎಂಬವರು ಇಂದು ತಮ್ಮ ಸಹಾಯಕರೊಂದಿಗೆ ಪರೀಕ್ಷೆ ಎದುರಿಸಲು ಅವಕಾಶ ಪಡೆದಿದ್ದರು. ಆದರೆ ಸಹಾಯಕರಿಗೆ ಅನಾರೋಗ್ಯ ಇದ್ದುದರಿಂದ ಅಣ್ಣಪ್ಪ ಅವರು ಪರೀಕ್ಷೆಗೆ ಗೈರಾದರು.

*ವೀರಾಜಪೇಟೆ: ವೀರಾಜಪೇಟೆ ಜೂನಿಯರ್ ಕಾಲೇಜಿನಲ್ಲಿ ಇಂದು ನಡೆದ ಕನ್ನಡ ಭಾಷೆಯ ಪರೀಕ್ಷೆಗೆ ೫೫ ವಿದ್ಯಾರ್ಥಿಗಳು ಹಾಜರಾಗಿದ್ದರು.

ಪರೀಕ್ಷೆಗೆ ಒಂದು ಕೊಠಡಿಯಲ್ಲಿ ಹತ್ತು ವಿದ್ಯಾರ್ಥಿಗಳನ್ನು ಮಾತ್ರ ಕೂರಿಸಲಾಗಿತ್ತು. ಕೋವಿಡ್ ಲಕ್ಷಣಗಳಿರುವ ವಿದ್ಯಾರ್ಥಿಗಳಿದ್ದರೇ ಅವರನ್ನು ವೀರಾಜಪೇಟೆಯ ಬಾಳುಗೋಡು ಕೋವಿಡ್ ಆರೈಕೆ ಕೇಂದ್ರದಲ್ಲಿ ಪರೀಕ್ಷೆ ಬರೆಸುವ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಆರೋಗ್ಯ ಇಲಾಖೆಯಿಂದ ಅಗತ್ಯ ಮುನ್ನಚ್ಚರಿಕಾ ಕ್ರಮಗಳನ್ನು ವಹಿಸಲಾಗಿತ್ತು.