ಮಡಿಕೇರಿ, ಆ. ೨೧; ನೆರೆಯ ರಾಜ್ಯ ಕೇರಳೀಯನ್ನರ ಪ್ರಮುಖ ಓಣಂ ಹಬ್ಬವನ್ನು ಜಿಲ್ಲೆಯಾದ್ಯಂತ ಮಲಯಾಳಿ ಸಮುದಾಯದವರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಬಲಿ ಚಕ್ರವರ್ತಿ ಯನ್ನು ಪೂಜಿಸುವದರೊಂದಿಗೆ ಮನೆ ಮುಂದೆ, ಒಳಗಡೆ ಹೂವಿನ ರಂಗೋಲಿ ಹಾಕಿ (ಪೂಕಳಂ), ಸಾಂಪ್ರದಾಯಿಕ ತಿನಿಸುಗಳನ್ನು ಮಾಡಿ, ಸಹಭೋಜನ ದೊಂದಿಗೆ ಸಂಭ್ರಮಿಸಿ ದರು. ಬೆಳಿಗ್ಗೆಯೇ ದೇವಾಲಯಗಳಿಗೆ ತೆರಳಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿದರು. ವರ್ಷಂಪ್ರತಿ ವಿವಿಧೆಡೆ ಸಾಮೂಹಿಕ ಆಚರಣೆಯೊಂದಿಗೆ ಬಲಿಚಕ್ರವರ್ತಿಯ ವೇಷದಾರಿಯ ಮೆರವಣಿಗೆ ನಡೆಯುತ್ತಿತ್ತು. ಆದರೆ, ಈ ಬಾರಿ ಕೋವಿಡ್‌ನಿಂದಾಗಿ ಸರಳ, ಸಾಂಪ್ರದಾಯಿಕ ಆಚರಣೆ ಕಂಡುಬAದಿತು.

ಸುAಟಿಕೊಪ್ಪದ ವಿವಿಧೆಡೆ

ಸುಂಟಿಕೊಪ್ಪ : ಸುಂಟಿಕೊಪ್ಪ ಪಟ್ಟಣ ಸೇರಿದಂತೆ ಗದ್ದೆಹಳ್ಳ, ಕೆದಕಲ್, ೭ನೇ ಹೊಸಕೋಟೆ, ಕಂಬಿಬಾಣೆ, ಕೊಡಗರಹಳ್ಳಿ ಮಾದಾಪುರ, ಗರಗಂದೂರು ಇನ್ನಿತರ ಕಡೆ ಓಣಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಕೇರಳದಲ್ಲಿ ಸಂಭ್ರಮದಿAದ ಆಚರಿಸುತ್ತಿರುವ ಓಣಂ ಹಬ್ಬವನ್ನು ಕೊಡಗಿನ ಹಿಂದೂ ಮಲಯಾಳಿ ಬಾಂಧವರು ಅಷ್ಟೇ ಸಂಭ್ರಮದಿAದ ಆಚರಿಸುತ್ತಾರೆ.

ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀಮುತ್ತಪ್ಪ ದೇವಾಲಯದಲ್ಲಿ ಪೂಕಳಂ ರಚಿಸಿದ್ದು ಅತ್ಯಾಕರ್ಷ ವಾಗಿತ್ತು. ಮನೆಯ ಅಂಗಳದಲ್ಲಿ ಬೆಳಿಗ್ಗೆ ಪೂಕಳಂ ರಚಿಸಿ ಹೊಸ ಬಟ್ಟೆ ಧರಿಸಿ ದೇವರಿಗೆ ಪೂಜೆ ಸಲ್ಲಿಸಿ ಮಧ್ಯಾಹ್ನ ಸಸ್ಯಹಾರದಿಂದ ತಯಾರಿಸಿದ್ದ ವಿವಿಧ ಬಗೆಯ ಪಲ್ಯ, ಪುಳಿ ಇಂಜಿ, ಅಪ್ಪಳ, ಇನ್ನಿತರ ತರಕಾರಿಗಳಿಂದ ತಯಾರಿಸಿದ (ಓಣಂ ಸದ್ಯದೊಂದಿಗೆ) ಭಕ್ಷ ಭೋಜನ ಸವಿದು ಓಣಂ ಹಬ್ಬ ಆಚರಿಸಿದರು.

ಪೊನ್ನಂಪೇಟೆ : ಪೊನ್ನಂಪೇಟೆಯಲ್ಲಿ ಓಣಂ ಹಬ್ಬವನ್ನು ಸಡಗರ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮನೆಯ ಆವರಣದಲ್ಲಿ ರಂಗು ರಂಗಿನ ಹೂವಿನ ರಂಗೋಲಿ (ಪೂಕಳಂ) ರಚಿಸಿ ಸಂಭ್ರಮಿಸಿದರು. ಕೆಲವು ಮನೆಗಳಲ್ಲಿ ಅಕ್ಕ ಪಕ್ಕದ ಮನೆಯವರು ಹಾಗೂ ಸ್ನೇಹಿತರನ್ನು ಮನೆಗೆ ಕರೆದು ಸಹ ಭೋಜನ ಮಾಡಿ ಖುಷಿಪಟ್ಟರು.

ಕಣಿವೆ : ಮಲೆಯಾಳಿ ಭಾಷಿಗರ ಪ್ರಮುಖ ಹಬ್ಬವಾದ ಓಣಂ ಆಚರಣೆ ಗುಡ್ಡೆಹೊಸೂರು, ಬೆಟ್ಟಗೇರಿ, ಬಳ್ಳೂರು, ನಂಜರಾಯಪಟ್ಟಣ, ಕಂಬಿಬಾಣೆ, ಏಳನೇ ಹೊಸಕೋಟೆ ಸೇರಿದಂತೆ ಎಲ್ಲೆಡೆ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಮುಂಜಾನೆ ಬೇಗ ಎದ್ದ ಬಾಂಧವರು ಮನೆಯ ಒಳ ಹಾಗೂ ಹೊರ ಆವರಣವನ್ನು ಶುಚಿಗೊಳಿಸಿ ಮಡಿಗೊಳಿಸಿದ ನಂತರ ಮನೆಯ ಬಾಗಿಲಿನಲ್ಲಿ ಬಣ್ಣ ಬಣ್ಣದ ಪುಷ್ಪಗಳಿಂದ ಪೂಕಳಂ ಎಂಬ ಹೂವಿನ ಎಸಳುಗಳಿಂದ ಆಕರ್ಷಕವಾದ ರಂಗೋಲಿಯನ್ನು ಬಿಡಿಸಿ ಧಾರ್ಮಿಕ ಶ್ರದ್ಧೆ ಮೆರೆದರು. ಕೋವಿಡ್ ನಿಯಮಗಳ ಪಾಲನೆಯೊಂದಿಗೆ ವಾರಾಂತ್ಯದ ಲಾಕ್ ಡೌನ್ ನಡುವೆಯೂ ತಮ್ಮ ತಮ್ಮ ಮನೆಗಳಲ್ಲಿ ಕುಟುಂಬ ಸದಸ್ಯರು ಸೇರಿ ಓಣಂ ಸದ್ಯ ಸಿದ್ಧಪಡಿಸಿ ಸಾಮೂಹಿಕವಾಗಿ ಸವಿದರು.

ಶನಿವಾರಸಂತೆ : ಪಟ್ಟಣ ಹಾಗೂ ಹೋಬಳಿಯಾದ್ಯಂತ ತಿರು ಓಣಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಸಂಪ್ರದಾಯಬದ್ಧವಾಗಿ ಆಚರಿಸಿ ಸಂಭ್ರಮಿಸಿದರು. ಕೇರಳದ ನಾಡಹಬ್ಬವೆಂದೇ ಪರಿಚಿತವಾಗಿರುವ ಓಣಂ ಹಬ್ಬವನ್ನು ಇಂದು ಜಾತಿ ಮತ ಧರ್ಮ, ಭೇದವಿಲ್ಲದೆ ಆಚರಿಸಿದರು.

ಶಿರಂಗಾಲ ಗ್ರಾಮದ ಶೋಭಾ ಜೆ.ಕೆ. ವೇಲಾಯುಧನ್ ಕುಟುಂಬಸ್ಥರು ಓಣಂ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಸಂಭ್ರಮದಿAದ ಆಚರಿಸಿದರು. ಕುಟುಂಬ ಸದಸ್ಯರೆಲ್ಲಾ ಜ್ಯೋತಿ ಬೆಳಗಿಸಿ ಕೊರೊನಾ ಮುಕ್ತ ವಾತಾವರಣವನ್ನು ದಯಪಾಲಿಸುವಂತೆ ಹಾಗೂ ಸಮುದಾಯದವರು ಸಾಮೂಹಿಕವಾಗಿ ಸಂತಸದಿAದ ಆಚರಿಸುವ ಸಂದರ್ಭ ಮರಳಿ ಬರುವಂತೆ ಕೋರಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಓಣಂ ಹಬ್ಬ ಕುಟುಂಬಸ್ಥರು ಮಾತ್ರಲ್ಲ ಬಂಧು ಬಳಗದವರೆಲ್ಲ ಸೇರಿ ಶಕ್ತಿ ಮೀರಿ ಸಂಭ್ರಮದಿAದ ಹಾಗೂ ವಿಜೃಂಭಣೆಯಿAದ ಆಚರಿಸುವ ಹಬ್ಬವಾಗಿದೆ. ಆದರೆ ಈ ಬಾರಿ ಕೋವಿಡ್-೧೯ ಹಿನ್ನೆಲೆ ಕುಟುಂಬ ಸದಸ್ಯರು ಮಾತ್ರ ಮನೆಯಲ್ಲಿ ಆಚರಿಸುವಂತಾಯಿತು ಎಂದು ಜಿ.ಕೆ. ವೇಲಾಯುಧನ್ ಅಭಿಪ್ರಾಯಪಟ್ಟರು.ಮಡಿಕೇರಿ: ಮಡಿಕೇರಿಯ ಮುತ್ತಪ್ಪ ದೇವಾಲಯದ ಪೂಜಾರಿ ಸುಬ್ರಮಣಿ ಅವರ ಮನೆಯಲ್ಲಿ ಮಾವೇಲಿಯ ಹೂವಿನ ರಂಗೋಲಿಯೊAದಿಗೆ ಆಚರಿಸಿದರು.

ಕೂಡಿಗೆ: ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ವಿ.ಎಂ. ವಿಜಯ ನವರ ಮನೆಯ ಮುಂಭಾಗದಲ್ಲಿ ತಿರುಓಣಂ ಹಬ್ಬದ ಹೂವಿನ ರಂಗೋಲಿ.