ಮಡಿಕೇರಿ, ಆ. ೨೧: ಕೊಡಗು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.೨ ಕ್ಕಿಂತ ಕಡಿಮೆಯಾಗದ ಹಿನ್ನೆಲೆ ತಾ. ೨೩ ರಿಂದ ೯ ರಿಂದ ಮೇಲ್ಪಟ್ಟ ತರಗತಿಗಳು ಸದ್ಯಕ್ಕೆ ಆರಂಭವಾಗುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಧರ್ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ತಾ. ೧೬ರ ಸುತ್ತೋಲೆಯಲ್ಲಿ ರಾಜ್ಯದಲ್ಲಿ ಕೋವಿಡ್-೧೯ರ ಸೋಂಕಿನ ಪ್ರಮಾಣ ಶೇ.೨ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ೯ ಮತ್ತು ೧೦ನೇ ತರಗತಿಗಳನ್ನು ತಾ ೨೩ ರಿಂದ ಆರಂಭಿಸುವ ಬಗ್ಗೆ ನಿರ್ದೇಶನ ನೀಡಿದ್ದಾರೆ. ಆದರೆ ಕೋವಿಡ್-೧೯ ಸೋಂಕಿನ ಪ್ರಮಾಣ ಶೇ.೨ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಪರ್ಯಾಯ ವಿಧಾನದಲ್ಲಿ ಕಲಿಕೆ ಮತ್ತು ಬೋಧನ ಪ್ರಕ್ರಿಯೆಗಳನ್ನು ಮುಂದುವರೆೆಸಲು ಸೂಚಿಸಿದ್ದರು.

ಅದರಂತೆ ಕೊಡಗು ಜಿಲ್ಲೆಯಲ್ಲಿ ಕಳೆದ ೧೦ ದಿನಗಳ ಸರಾಸರಿ ಕೋವಿಡ್-೧೯ ಸೋಂಕಿನ ಪ್ರಮಾಣವು ಶೇ.೨ರಷ್ಟು ಇರುವುದರಿಂದ ತರಗತಿ ಆರಂಭಿಸಲಾಗುವುದಿಲ್ಲ, ಆರಂಭಿಸುವ ದಿನಾಂಕವನ್ನು ಮುಂದೆ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.