ಮಡಿಕೇರಿ, ಆ. ೨೧: ಕಳೆದ ೨೦೧೮ ರಿಂದ ೨೦೨೦ ರವರೆಗೆ ಕೊಡಗು ಜಿಲ್ಲೆಯಲ್ಲಿ ಮಳೆಗಾಲವೆಂದರೆ, ಅದೂ ಆಗಸ್ಟ್ ಬಂತೆAದರೆ ಒಂದು ರೀತಿ ಭಯದ, ಆತಂಕದ ವಾತಾವರಣ ಉಂಟಾಗುತ್ತಿತ್ತು. ಈ ವರ್ಷ ಪರಂಪರಾನುಗತ ವರ್ಷಾಕಾಲವಾದ ಜೂನ್‌ನಿಂದ ಪ್ರಾರಂಭಗೊAಡ ಮುಂಗಾರು ಇದುವರೆಗೂ ಸಮತೋಲನದಿಂದ ಸುರಿದಿದೆ. ಪ್ರವಾಹ-ಭೂಕುಸಿತಗಳನ್ನು ದೂರಮಾಡಿ ಜಿಲ್ಲೆಯ ನಿವಾಸಿಗಳಲ್ಲಿ ಭರವಸೆ ಮೂಡಿಸಿದೆ.ಕೊಡಗು ಜಿಲ್ಲೆಯಲ್ಲಿ ಸತತ ಮೂರು ವರ್ಷಗಳ ಕಾಲ ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಳ್ಳುತ್ತಿತ್ತು. ಕೊಡಗು ಮಳೆ-ಮಂಜಿಗೆ ಹೆಸರುವಾಸಿ ಜಿಲ್ಲೆಯಾಗಿದ್ದರೂ ಪ್ರವಾಹ, ಭೂಕುಸಿತಗಳ ಘಟಿಸುವಿಕೆ ಅತ್ಯಂತ ವಿರಳವಾಗಿತ್ತು. ಜೂನ್, ಜುಲೈ, ಆಗಸ್ಟ್ನ ಮಳೆ, ಚಳಿ, ಮಂಜಿನ ವಾತಾವರಣವು ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು.

ಆದರೆ ೨೦೧೮ರ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಜಲಪ್ರಳಯ, ಭೂಕುಸಿತ, ಪ್ರಾಣಹಾನಿಯಿಂದಾಗಿ ಆಗಸ್ಟ್ ಬಂತೆAದರೆ ಜಿಲ್ಲೆಯ ಜನರಲ್ಲಿ ಆತಂಕ ಸಹಜವಾಗಿ ಮೂಡಲಾರಂಭಿಸಿತು. ಸತತ ೩ ವರ್ಷಗಳ ಕಾಲ ಈ ಆತಂಕಕ್ಕೆ ತಕ್ಕಾಗಿಯೇ ವಿಕೋಪಗಳು ಸಂಭವಿಸಿದವು. ಪ್ರಸ್ತುತ ವರ್ಷವೂ ಇದೇ ಮನೋಭಾವನೆಯಿಂದ ಇದ್ದ ಜನತೆಯು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ. ಏಕೆಂದರೆ ಈ ವರ್ಷದ ಮಳೆಯು ಜೂನ್, ಜುಲೈನಲ್ಲಿಯೇ ಹೆಚ್ಚಾಗಿ ತನ್ನ ಪ್ರಭಾವ ಬೀರಿದ್ದು ಸಣ್ಣ ಪ್ರಮಾಣದಲ್ಲಿ ಭೂಕುಸಿತಗಳು ಉಂಟಾಗಿದ್ದು, ತೀವ್ರ ಪ್ರಮಾಣದಲ್ಲಿ ಯಾವುದೇ ಹಾನಿ ಉಂಟಾಗಿಲ್ಲ.

ಈ ೩ ವರ್ಷಗಳಲ್ಲಿ ಆಗಸ್ಟ್ ಮೊದಲೆರಡನೆಯ ವಾರಗಳಲ್ಲಿಯೇ ವಿಕೋಪ ಉಂಟಾಗುತ್ತಿದ್ದು, ಈ ವರ್ಷ ನಾವು ೩ನೇ ವಾರಕ್ಕೆ ಕಾಲಿಟ್ಟಿದ್ದು, ಯಾವುದೇ ಅನಾಹುತಗಳು ಸಂಭವಿಸದೆ ಇರುವುದು ಶುಭ ಸುದ್ದಿ.

೨೦೧೮-ಅತ್ಯಧಿಕ ಮಳೆ

೨೦೧೮ ರಲ್ಲಿ ಒಟ್ಟು ಜಿಲ್ಲಾ ಸರಾಸರಿ ೧೬೪ ಇಂಚು ದಾಖಲೆಯ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿತು. ಈ ವರ್ಷ ಆಗಸ್ಟ್ ೮ ರಂದು ಒಂದೇ ದಿನದಲ್ಲಿ ಜಿಲ್ಲಾ ಸರಾಸರಿ ೨.೫೯ ಇಂಚು ಮಳೆ ದಾಖಲಾಗಿತ್ತು. ಬೆಟ್ಟ ಗುಡ್ಡಗಳ ಪ್ರದೇಶವಾದ ಕೊಡಗಿನಲ್ಲಿ ಎಷ್ಟೇ ಮಳೆ ಬಂದರೂ ಸರಾಗವಾಗ ಹರಿಯುತ್ತಿದ್ದ ನೀರಿಗೆ ಹರಿಯಲು ಜಾಗ ದೊರಕದೆ ಜಿಲ್ಲೆಯ ಬಹುತೇಕ ಪ್ರದೇಶಗಳು ಜಲಾವೃತಗೊಂಡವು.

ಈ ದಿನದಂದು ಉತ್ತರ ಕೊಡಗಿನ ಶಾಂತಳ್ಳಿ, ತೀರ್ಥ ಕ್ಷೇತ್ರ ತಲಕಾವೇರಿ, ದಕ್ಷಿಣ ಕೊಡಗಿನ ಬಿರುನಾಣಿ ಮುಂತಾದ ಗ್ರಾಮೀಣ ಪ್ರದೇಶಗಳಲ್ಲಿ ಸರಾಸರಿ ಅತ್ಯಧಿಕ ೭ ಇಂಚು ಮಳೆ ದಾಖಲಾಯಿತು.