ಮಡಿಕೇರಿ, ಆ. ೨೨: ಕೊಡಗು ಜಿಲ್ಲೆಗೆ ತಾ. ೨೩ ರಂದು (ಇಂದು) ಅತ್ಯಧಿಕ ಪ್ರಮಾಣದಲ್ಲಿ ಲಸಿಕೆಗಳು ಪೂರೈಕೆಯಾಗಲಿವೆ. ಒಂದೇ ದಿನ ೧೫,೮೦೦. ಲಸಿಕೆ ನೀಡುವ ಗುರಿ ಹೊಂದಿದ್ದು, ಗ್ರಾಮೀಣ ಪ್ರದೇಶದ ೬೦ ಕಡೆಗಳಲ್ಲಿ ಲಸಿಕೆ ಲಭ್ಯವಿರಲಿದೆ. ಇದೇ ಮೊದಲ ಬಾರಿಗೆ ಜಿಲ್ಲೆಗೆ ಇಷ್ಟೊಂದು ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗಿದೆ.