ಸೋಮವಾರಪೇಟೆ,ಆ.೨೩: ಇಲ್ಲಿನ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಎಂ.ಎA. ಪ್ರಕಾಶ್ ಕುಮಾರ್ ಆಯ್ಕೆಯಾಗಿದ್ದು, ತಾ.೨೪ರಂದು (ಇಂದು) ಸಂಜೆ ೬ ಗಂಟೆಗೆ ಸ್ಥಳೀಯ ಮಾನಸ ಸಭಾಂಗಣದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯದರ್ಶಿ ಧರ್ಮಪ್ಪ ತಿಳಿಸಿದ್ದಾರೆ.

ಕಾರ್ಯಕ್ರಮವನ್ನು ನಿಕಟಪೂರ್ವ ಜಿಲ್ಲಾ ರಾಜ್ಯಪಾಲ ಅಭಿನಂದನ್ ಶೆಟ್ಟಿ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಾಯಕ ರಾಜ್ಯಪಾಲ ಎಚ್.ಟಿ. ಅನಿಲ್, ಕಾರ್ಯದರ್ಶಿ ಎಚ್.ಎಸ್. ವಸಂತಕುಮಾರ್, ವಲಯ ಸೇನಾನಿ ಎಂ.ಡಿ. ಅಶೋಕ್ ಪಾಲ್ಗೊಳ್ಳಲಿದ್ದಾರೆ.