ಪೊನ್ನಂಪೇಟೆ, ಆ. ೨೧: ಪೊನ್ನಂಪೇಟೆ ಪೊಲೀಸ್ ಠಾಣೆಯ ಆವರಣದಲ್ಲಿ ಪೊನ್ನಂಪೇಟೆ ವ್ಯಾಪ್ತಿಯ ವರ್ತಕರ ಸಭೆ ನಡೆಯಿತು.
ಈ ಸಂದರ್ಭ ಪೊನ್ನಂಪೇಟೆ ಪೊಲೀಸ್ ಠಾಣಾಧಿ ಕಾರಿ ಡಿ. ಕುಮಾರ್ ಮಾತನಾಡಿ, ಕಳ್ಳತನ ಹಾಗೂ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ಕೆಲಸಕ್ಕೆ ತಾವೆಲ್ಲರೂ ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ಎಲ್ಲಾ ವರ್ತಕರು ತಮ್ಮ ತಮ್ಮ ಅಂಗಡಿಯ ಮುಂಭಾಗ ಸಿಸಿ ಕ್ಯಾಮರಾವನ್ನು ರಸ್ತೆ ಕಾಣುವಂತೆ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಅಂಗಡಿಗಳ ಮುಂಭಾಗ ಆಟೋ ಹಾಗೂ ಇತರ ವಾಹನವನ್ನು ನಿಲ್ಲಿಸಿಕೊಂಡು ಟ್ರಾಫಿಕ್ ಸಮಸ್ಯೆ ಮಾಡದಂತೆ ತಿಳಿಸಿದರು. ಈ ಸಂದÀರ್ಭ ಮಾತನಾಡಿದ ವರ್ತಕರು, ಗ್ರಾಹಕರರು ತಾವು ಖರೀದಿಸಿದ ಸಾಮಗ್ರಿಗಳನ್ನು ತಮ್ಮ ವಾಹನಗಳನ್ನು ನಿಲ್ಲಿಸಿರುವ ಸ್ಥಳಕ್ಕೆ ತೆಗೆದುಕೊಂಡು ಹೋಗಲು ತೊಂದರೆಯಾಗುತ್ತದೆ. ಅಂಗಡಿಗಳ ಮುಂದೆ ನಿಲ್ಲಿಸಿಕೊಂಡು ಸಾಮಗ್ರಿಗಳನ್ನು ಗಾಡಿಗೆ ಹಾಕಿಕೊಳ್ಳಲು ೫ ನಿಮಿಷ ಕಾಲಾವಕಾಶ ನೀಡುವಂತೆ ಮನವಿ ಮಾಡಿಕೊಂಡರು. ಮನವಿಗೆ ಸ್ಪಂದಿಸಿದ ಠಾಣಾಧಿಕಾರಿ ಇದಕ್ಕೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು. ಸಭೆಯಲ್ಲಿ ಪೊನ್ನಂಪೇಟೆ ವರ್ತಕರ ಸಂಘದ ಅಧ್ಯಕ್ಷ ಚಿರಿಯಪ್ಪಂಡ ಕೆ. ಉತ್ತಪ್ಪ ಹಾಗೂ ವರ್ತಕರು ಹಾಜರಿದ್ದರು.