ಗೋಣಿಕೊಪ್ಪ ವರದಿ, ಆ. ೨೨: ಮುಳಿಯ ಜ್ಯುವೆಲ್ಸ್ನಲ್ಲಿ ಆ್ಯಂಟಿಕ್ ಮತ್ತು ಡೈಮಂಡ್ ಮೇಳಕ್ಕೆ ಚಾಲನೆ ನೀಡಲಾಯಿತು. ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಮತ್ತೂರು ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಇಂದಿರಾ ರಾಜು, ಸ್ವಯಂ ಪ್ರೇರಣ ಬಳಗದ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸಂಜು, ಸಂಗೀತ ಶಿಕ್ಷಕಿ ಚಂದ್ರಕಲಾ, ಹಾಡುಗಾರ ಅನ್ವಿತ್ ಕುಮಾರ್ ಉದ್ಘಾಟಿಸಿ, ಆಭರಣ ಪ್ರದರ್ಶನದ ಮೂಲಕ ಮೇಳಕ್ಕೆ ಚಾಲನೆ ನೀಡಿದರು.

ಮುಳಿಯ ಜ್ಯುವೆಲ್ಸ್ ಗೋಣಿಕೊಪ್ಪ ಶಾಖಾ ಪ್ರಬಂಧಕ ಅಶೋಕ್ ಬಂಗೇರ ಮಾತನಾಡಿ, ಸೆಪ್ಟೆಂಬರ್ ೧೦ ರವರೆಗೆ ಮೇಳ ನಡೆಯಲಿದ್ದು, ಕಡಿಮೆ ಬೆಲೆಗೆ ಡೈಮಂಡ್, ವಿವಿಧ ವಿನ್ಯಾಸದ ಆಂಟಿಕ್ ಆಭರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತದೆ ಎಂದರು.