ಮಡಿಕೇರಿ, ಆ. ೨೧: ತಮ್ಮ ದೂರದೃಷ್ಟಿ, ಮಹತ್ವಾಕಾಂಕ್ಷೆಯ ಚಿಂತನೆಗಳನ್ನು ಸಾಕಾರಗೊಳಿಸುವ ಮೂಲಕ ಭಾರತ ದೇಶವನ್ನು ಸುಭದ್ರಗೊಳಿಸಿ ರಾಜೀವ್ ಗಾಂಧಿಯವರು ಭವ್ಯ ಭಾರತದ ನಿರ್ಮಾತೃರೆಂದೆನಿಸಿದ್ದಾರೆ ಎಂದು ಮಾಜಿ ಸಂಸದರು ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ರಾಜ್ಯಾಧ್ಯಕ್ಷ ಸಿ. ನಾರಾಯಣ ಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಹಯೋಗದಲ್ಲಿ ಮಡಿಕೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿನಿಧಿಗಳ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಪಂಚಾಯತ್‌ರಾಜ್ ವ್ಯವಸ್ಥೆಗೆ ಅಂದು ರಾಜೀವ್ ಗಾಂಧಿ ತಿದ್ದುಪಡಿ ತರಲು ಚಿಂತನೆ ನಡೆಸದಿದ್ದರೆ ಇಂದು ದೇಶ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
ಸಂಘಟನೆಯ ರಾಜ್ಯ ಸಂಚಾಲಕ ಹಾಗೂ ವಿಧಾನ ಪರಿಷತ್ ಸದಸ್ಯರಾದ ವಿಜಯ್ ಸಿಂಗ್ ಅವರು ಮಾತನಾಡಿ ಗ್ರಾಮ ಮಟ್ಟದಲ್ಲಿ ಪರಸ್ಪರ ಸಂವಾದ ನಡೆಸುವ ಮೂಲಕ ಜನರ ಸಮಸ್ಯೆಗಳನ್ನು ಅರಿತು ಅದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಘಟನೆಯ ಕಾರ್ಯಕರ್ತರು ಮುಂದಾಗುವAತೆ ಕರೆ ನೀಡಿದರು.
ರಾಷ್ಟಿçÃಯ ಸಲಹೆಗಾರರು ಮತ್ತು ಮಾಜಿ ಶಾಸಕ ಡಿ.ಆರ್. ಪಾಟೀಲರು ಮಾತನಾಡಿ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳನ್ನು ಒಗ್ಗೂಡಿಸಿದ ಕೀರ್ತಿ ದೇವರಾಜ್ ಅರಸು ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಸಾಮಾಜಿಕ ನ್ಯಾಯದ ಹರಿಕಾರರಾಗಿ ರುವ ಅರಸು ಸ್ಮರಣೆ ಅರ್ಥಪೂರ್ಣ ಎಂದು ಹೇಳಿದರು.
ಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯವನ್ನು ರಾಷ್ಟಿçÃಯ ಸಲಹೆಗಾರರಾದ ಬಿ.ವೈ. ಘೋರ್ಪಡೆ ಮತ್ತು ಎಐಸಿಸಿ ಕಾರ್ಯದರ್ಶಿ ಬಿ .ಎಂ .ಸಂದೀಪ್ ನಡೆಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ವಿ.ಪಿ. ಶಶಿಧರ್ ರಾಜೀವ್ ಗಾಂಧಿಯವರ ಬಗ್ಗೆ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಮಾಚಯ್ಯ ದೇವರಾಜ್ ಅರಸು ಅವರ ಬಗ್ಗೆ ವಿಷಯ ಮಂಡನೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ನವರು ಪಕ್ಷ ಸಂಘಟನೆಯ ದೃಷ್ಟಿಯಿಂದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕಾರ್ಯಗಳಿಗೆ ಮುಂದಿನ ದಿನಗಳಲ್ಲಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘಟನೆಯ ಕೊಡಗು ಜಿಲ್ಲಾ ಅಧ್ಯಕ್ಷರಾದ ತೆನ್ನೀರಾ ಮೈನಾ ರವರು ಜನ ಪ್ರತಿನಿಧಿ ನಾಯಕನಾಗಿರದೆ ಜನರ ನಡುವೆ ಸೇವಕನಾಗಿರಬೇಕು ಎಂದು ಹೇಳಿದರು.
ಕೆಪಿಸಿಸಿ ಮುಖಂಡರಾದ ಹೆಚ್.ಎಸ್. ಚಂದ್ರಮೌಳಿ ಅವರು ಕಾರ್ಯಕ್ರಮದ ಕುರಿತು ಆಶಯನುಡಿಗಳನ್ನಾಡಿದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಸಚಿವೆ ಸುಮಾ ವಸಂತ್, ಜಿ.ಪಂ. ಮಾಜಿ ಅಧ್ಯಕೆÀ್ಷ ಕೆ.ಪಿ. ಚಂದ್ರಕಲಾ, ರಾಜಾರಾವ್, ದೀರ್ಘಕೇಶಿ ಶಿವಣ್ಣ, ಕೆಪಿಸಿಸಿ ಪ್ಯಾನೆಲಿಸ್ಟ್ ಟಿ.ಪಿ. ರಮೇಶ್, ಕೆಪಿಸಿಸಿ ಮುಖಂಡ ನಟೇಶ್ ಗೌಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಾನಂಡ ಪ್ರಥ್ಯು, ಅಬ್ದುಲ್ ಲತೀಫ್, ಪಂಕಜ, ಪುಟ್ಟಲಕ್ಷ್ಮಿ, ನಗರಸಭೆ ಮಾಜಿ ಅಧ್ಯಕೆÀ್ಷ ಕಾವೇರಮ್ಮ ಸೋಮಣ್ಣ, ಜುಲೇಕಾಬಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ, ಪಟ್ಟಡ ರಂಜಿ ಪೂಣಚ್ಚ, ಇಸ್ಮಾಯಿಲ್, ಸತೀಶ್ ಕುಮಾರ್, ಆರ್‌ಜಿಪಿಆರ್‌ಎಸ್ ಸಂಯೋಜಕ ರಾದ ಪಿ.ಎಲ್. ಸುರೇಶ್, ಬಾಲಚಂದ್ರ ನಾಯರ್, ಸುಕೂರ್, ಪಿಯೂಸ್ ಫೆರೆರಾ, ಮಹಿಳಾ ಘಟಕದ ಜಿಲ್ಲಾಧ್ಯಕೆÀ್ಷ ಸುರಯ್ಯಾ ಅಬ್ರಾರ್ ಸೇರಿದಂತೆ ಪಂಚಾಯತ್ ಪ್ರತಿನಿಧಿಗಳು ಭಾಗವಹಿಸಿದ್ದರು.
ವೇದಿಕೆ ರಹಿತ ಕಾರ್ಯಕ್ರಮ
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಹಲವು ವಿಶೇಷತೆ ಕಂಡು ಬಂತು. ಮಾಮೂಲಿಯಂತೆ ಮಾರುದ್ದದ ವೇದಿಕೆ, ವೇದಿಕೆಯಲ್ಲಿ ಹತ್ತಾರು ನಾಯಕರ ದಂಡು ಕಂಡು ಬರಲಿಲ್ಲ. ಎಲ್ಲಾ ನಾಯಕರು ಕಾರ್ಯಕರ್ತರೊಂದಿಗೆ ವೇದಿಕೆಯ ಮುಂಭಾಗದಲ್ಲಿ ಆಸೀನರಾಗಿದ್ದರು. ವಿಷಯ ಮಂಡನೆ ಮಾಡುವವರು, ಭಾಷಣ ಮಾಡುವವರು ಮಾತ್ರ ಮುಂದೆ ಬಂದು ಮಾತನಾಡಿ ಸ್ವ ಸ್ಥಾನಕ್ಕೆ ಹೋಗಬೇಕಿತ್ತು. ಈ ವಿನೂತನ ಕ್ರಮಕ್ಕೆ ಅನೇಕ ಕಾರ್ಯಕರ್ತರು ಮೆಚ್ಚುಗೆ ವ್ಯಕ್ತಪಡಿಸಿದರು.