ಮಡಿಕೇರಿ, ಆ.೨೧: ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅರಂತೋಡು ಇದರ ಸ್ಥಾಪಕಾಧ್ಯಕ್ಷರು ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹಿದ್ ತೆಕ್ಕಿಲ್ ಅವರ ೫೦ ನೇ ಜನ್ಮ ದಿನದ ಪ್ರಯುಕ್ತ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವ ಕಾರ್ಯ ಹಮ್ಮಿಕೊಳ್ಳಲಾಗಿದೆ.
ಸಂಪಾಜೆ ಗ್ರಾಮದ ಗೂನಡ್ಕ ಟಿ.ಬಿ.ಮುಹಮ್ಮದ್ ಅವರ ಪುತ್ರಿ ಫಾತಿಮ ಅವರ ಕುಟುಂಬಕ್ಕೆ ರೂ.೬ ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗುತ್ತಿದೆ.
ಟಿ.ಎಂ.ಶಾಹಿದ್ ತೆಕ್ಕಿಲ್, ಅರಂತೋಡು ಬದ್ರಿಯಾ ಜುಮಾ ಮಸೀದಿ ಖತೀಬ್ ಇಸಾಕ್ ಬಾಖವಿ, ಪೇರಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ರಿಯಾಝ್ ಫೈಝಿ ಎಮ್ಮೆಮಾಡು, ನೂರುದ್ದೀನ್ ಅನ್ಸಾರಿ ಪೇರಡ್ಕ, ಸಾಜಿದ್ ಅಝ್ ಹರಿ ತೆಕ್ಕಿಲ್ ಪೇರಡ್ಕ, ಸಂಪಾಜೆ ಗ್ರಾ.ಪಂ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಅರಂತೋಡು ಮಸೀದಿ ಅಧ್ಯಕ್ಷ ಹಾಗೂ ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ಪೇರಡ್ಕ ಮಸೀದಿ ಕಾರ್ಯದರ್ಶಿ ರಜಾಕ್ ಹಾಜಿ ತೆಕ್ಕಿಲ್ ಮೊಟ್ಟೆಂಗಾರ್, ಅನ್ವಾರುಲ್ ಹುದಾ ಅಸೊಸಿಯೇಷನ್ ಅಧ್ಯಕ್ಷ ಎಸ್.ಎಂ.ಅಬ್ದುಲ್ ಮಜೀದ್, ಪಂಚಾಯತ್ ಸದಸ್ಯ ಅಬುಸಾಲಿ ಗೂನಡ್ಕ, ಎಸ್.ಕೆ.ಹನೀಫ್ ಸಂಪಾಜೆ, ಕೆ.ಎಂ.ಮೂಸನ್ ಅರಂತೋಡು, ಹನೀಫ್ ಅರಂತೋಡು, ಮನ್ಸೂರ್ ಪಾರೆಕ್ಕಲ್, ಅನ್ವರ್ ಅರಂತೋಡು, ಲತೀಫ್ ತೆಕ್ಕಿಲ್ ಮೊಟ್ಟೆಂಗಾರ್, ಇಕ್ಬಾಲ್ ಚೆರೂರು, ಇಸಾಕ್ ಅರಂತೋಡು, ಪಸಿಲು ಆರಂತೋಡು, ಅಮೀರ್ ಕುಕ್ಕುಂಬಳ ಇನ್ನಿತರರು ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.