
ಮಡಿಕೇರಿ, ಆ. ೨೨: ರಾಷ್ಟಿçÃಯ ಭದ್ರತಾದಳ (ಎನ್ಎಸ್ಜಿ) ಮುಖ್ಯಸ್ಥರಾಗಿ ಅಧಿಕಾರದಲ್ಲಿರುವ ಕೊಡಗಿನ ಹೆಮ್ಮೆಯ ಐ.ಪಿ.ಎಸ್. ಅಧಿಕಾರಿ ಮನೆಯಪಂಡ ಎ. ಗಣಪತಿ ಅವರಿಗೆ ಇದೀಗ ಈ ಸ್ಥಾನದೊಂದಿಗೆ ಮತ್ತೊಂದು ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಎನ್.ಎಸ್.ಜಿ. ಮಹಾನಿರ್ದೇಶಕರಾಗಿ ಕೆಲವು ತಿಂಗಳ ಹಿಂದೆ ಇವರು ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಇವರು ಈ ಹುದ್ದೆಯೊಂದಿಗೆ ಸಿ.ಐ.ಎಸ್.ಎಫ್.ನ ಮಹಾನಿರ್ದೇಶಕ (ಡೈರೆಕ್ಟರ್ ಜನರಲ್)ರಾಗಿಯೂ ನಿಯುಕ್ತಿಗೊಂಡಿದ್ದಾರೆ. ಆಗಸ್ಟ್ ೧೪ ರಿಂದ ಇವರು ಈ ಸ್ಥಾನವನ್ನು ವಹಿಸಿಕೊಂಡಿದ್ದಾರೆ.
ಭಾರತ ಸರಕಾರದ ಗೃಹ ಸಚಿವಾಲಯ ಈ ಆದೇಶವನ್ನು ಹೊರಡಿಸಿದೆ. ಗಣಪತಿ ಅವರು ಕೊಡಗು ಜಿಲ್ಲೆಯ ಪೊನ್ನಂಪೇಟೆ ಸನಿಹದ ಕುಂದ ಈಚೂರು ಗ್ರಾಮದವರಾಗಿದ್ದಾರೆ. ಇವರು ಮನೆಯಪಂಡ ವಿಠಲ್ ಅಪ್ಪಯ್ಯ ಹಾಗೂ ನಿವೃತ್ತ ಅಧ್ಯಾಪಕಿ ಪ್ರೇಮ (ತಾಮನೆ ಪಟ್ಟಡ) ಅವರ ಪುತ್ರರಾಗಿದ್ದಾರೆ.
೧೯೮೬ರ ಬ್ಯಾಚ್ನ ಉತ್ತರಾಖಂಡ್ ಕ್ಯಾಡರ್ನ ಐಪಿಎಸ್ ಅಧಿಕಾರಿಯಾಗಿರುವ ಗಣಪತಿ ಅವರು ಈ ಹಿಂದೆ ನಾಗರಿಕ ವಿಮಾನಯಾನ (ಸಿವಿಲ್ ಏವಿಯೇಷನ್)ದ ಭದ್ರತಾ ಬ್ಯೂರೋ ಮುಖ್ಯಸ್ಥರಾಗಿ ಉತ್ತರಾಖಂಡ್ನ ಡಿಜಿಪಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.