ಗೋಣಿಕೊಪ್ಪಲು, ಆ. ೨೨: ಇತಿಹಾಸ ಪ್ರಸಿದ್ಧವಾದ ಗೋಣಿಕೊಪ್ಪ ಸಮೀಪದ ಬೊಟ್ಯತ್‌ನಾಡ್‌ಗೆ ಒಳಪಟ್ಟಿರುವ ಕುಂದ ಬೆಟ್ಟದ ಮಹದೇವರ ದೇವಸ್ಥಾನದ ಮೇಲ್ಭಾಗದಲ್ಲಿ ಅಳವಡಿಸಿದ್ದ ಬಸವ ಮೂರ್ತಿಯನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ. ಪವಿತ್ರ ಪುಣ್ಯಕ್ಷೇತ್ರ ಕುಂದ ಬೆಟ್ಟದ ತುದಿಯಲ್ಲಿರುವ ಬೊಟ್ಲಪ್ಪ (ಬೆಟ್ಟದ ಮಹಾದೇವ) ದೇವಸ್ಥಾನಕ್ಕೆ ಕಿಡಿಗೇಡಿಗಳು ದೇವಾಲಯ ಮೇಲ್ಭಾಗದಲ್ಲಿ ಅಳವಡಿಸಲಾಗಿದ್ದ ಬಸವ ಮೂರ್ತಿಗೆ ಹಾನಿಯುಂಟುಮಾಡಿದ್ದಾರೆ.

(ಮೊದಲ ಪುಟದಿಂದ) ಗ್ರಾಮದ ವ್ಯಕ್ತಿಯೋರ್ವರು ಭಾನುವಾರ ಬೆಳಿಗ್ಗೆ ಈ ಸ್ಥಳಕ್ಕೆ ತೆರಳಿದ ವೇಳೆ ಈ ವಿಷಯ ಬೆಳಕಿಗೆ ಬಂದಿದೆ.

ಪಾAಡವರು ಅಜ್ಞಾತ ವಾಸದಲ್ಲಿದ್ದಾಗ ಪಾಂಡವರೇ ಕಲ್ಲಿನಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುವ ಬೊಟ್ಲಪ್ಪ ದೇಗುಲದ ಮೇಲ್ಚಾವಣಿಯ ನಾಲ್ಕು ತುದಿಗಳಲ್ಲಿ ಅಳವಡಿಸಲಾದ ಒಂದು ಬಸವ ವಿಗ್ರಹಕ್ಕೆ ಹಾನಿಯುಂಟು ಮಾಡಿದ್ದಾರೆ.

ಈ ಬಗ್ಗೆ ತಕ್ಕಮುಖ್ಯಸ್ಥರು ಹಾಗೂ ಊರಿನವರು ಗೋಣಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲಿಸಿದ ವೇಳೆ ಸ್ಥಳದಲ್ಲಿ ಕತ್ತಿಯೊಂದು ದೊರೆತಿದೆ.

ಪುರಾಣ ಪ್ರಸಿದ್ಧ ಇತಿಹಾಸವಿರುವ ಈ ಕುಂದಾಬೆಟ್ಟಕ್ಕೆ ಪ್ರವಾಸಿಗರು ಮೋಜು ಮಸ್ತಿಗೆಂದು ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ. ಭಾನುವಾರ ಕೂಡ ಯುವಕರ ತಂಡ ಮದ್ಯ ಮಾಂಸದೊAದಿಗೆ ಬೆಟ್ಟವೇರಲು ಆಗಮಿಸಿದ್ದರು. ಸ್ಥಳೀಯರು ಎಚ್ಚರಿಕೆ ನೀಡಿ ವಾಪಾಸು ಕಳುಹಿಸಿದ್ದಾರೆ. ಘಟನಾ ಸ್ಥಳಕ್ಕೆ ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಂ ಹಾಗೂ ಉಪನಿರೀಕ್ಷಕ ಸುಬ್ಬಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಗ್ರಾಮಸ್ಥರಾದ ಗುಮ್ಮಟ್ಟೀರ ದರ್ಶನ್, ತೀತರಮಾಡ ಶರಣು, ಉಮೇಶ್, ನೆರವಂಡ ಗೌತಮ್, ಸಣ್ಣುವಂಡ ಅಪ್ಪಿ, ಪಟ್ರಂಗಡ ಶ್ರೀಮಂತ್ ಇನ್ನಿತರರು ಇದ್ದರು.

ಈ ದೇವಸ್ಥಾನದಲ್ಲಿ ಕಾವೇರಿ ತಿರ್ಥೋದ್ಭವ ಸಂದರ್ಭ ಪ್ರತಿವರ್ಷ ಕೊಡಗಿನ ಮೊದಲ ಬೇಡು ಹಬ್ಬ ನಡೆಯುವುದು ವಿಶೇಷ.

ವಿಷಯ ತಿಳಿದ ಗ್ರಾಮಸ್ಥರು ಸಭೆ ಸೇರಿ ದೇವಸ್ಥಾನದ ಮೇಲೆ ಹಾಗೂ ವಿವಿಧ ಜಾಗಗಳಲ್ಲಿ ಗೌಪ್ಯವಾಗಿ ಸಿಸಿ ಕ್ಯಾಮೆರಾ ಅಳವಡಿಸುವ ಚಿಂತನೆ ನಡೆಸಿದ್ದಾರೆ. ಪ್ರಕೃತಿಯ ಸೊಬಗನ್ನು ಸವಿಯಲು ಬರುವವರು ಇದನ್ನು ಮರೆತು ಮದÀ್ಯ, ಮಾಂಸದೊAದಿಗೆ ಮೋಜು ಮಸ್ತಿ ನಡೆಸುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳಬೇಕಾಗಿದೆ.