ಚೆಯ್ಯಂಡಾಣೆ, ಆ. ೨೦: ಸುನ್ನೀ ಜಂಯಿಯ್ಯತುಲ್ ಮುಅಲ್ಲಿಮೀನ್ ಎಮ್ಮೆಮಾಡು ರೇಂಜ್ ೨೦೨೧-೨೨ ನೇ ಸಾಲಿನ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಹಿದಾಯತುಲ್ ಇಸ್ಲಾಂ ಮದ್ರಸಾ ಪಳ್ಳಿರಾಣೆಯಲ್ಲಿ ಎಸ್.ಜೆ.ಎಂ. ಎಮ್ಮೆಮಾಡು ರೇಂಜ್ ಅಧ್ಯಕ್ಷ ಅಬ್ದುರಜಾಕ್ ಸಅದಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಝೀರ್ ಸಖಾಫಿ ಪಡಿಯಾನಿ ಸ್ವಾಗತಿಸಿ, ಸ್ಥಳೀಯ ಖತೀಬ್ ಇಬ್ರಾಹಿಂ ಲತೀಫಿ ಉದ್ಘಾಟಿಸಿದರು.
ನೂತನ ಅಧ್ಯಕ್ಷರಾಗಿ ಅಬ್ದುರ್ರಝಾಕ್ ಸಅದಿ ಎಮ್ಮೆಮಾಡು, ಪ್ರಧಾನ ಕಾರ್ಯದರ್ಶಿಯಾಗಿ ನಝೀರ್ ಸಖಾಫಿ ಪಡಿಯಾನಿ, ಕೋಶಾಧಿಕಾರಿ ಯಾಗಿ ಸಯ್ಯದ್ ಅಬ್ದುಲ್ ಅಝೀಝ್ ತಂಘಳ್ ರವರನ್ನು ಆಯ್ಕೆ ಮಾಡಲಾಯಿತು.
ವೇಲ್ಫೇರ್ ವಿಭಾಗದ ಅಧ್ಯಕ್ಷರಾಗಿ ಸಯ್ಯದ್ ಸೈಫುದ್ದೀನ್ ಸಖಾಫಿ ಎಮ್ಮೆಮಾಡು, ಕಾರ್ಯದರ್ಶಿಯಾಗಿ ಶಬೀರ್ ಸಖಾಫಿ ತಾವೂರು. ಟ್ರೈನಿಂಗ್ ವಿಭಾಗದ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಮದನಿ ಅಯ್ಯಂಗೇರಿ, ಕಾರ್ಯದರ್ಶಿಯಾಗಿ ರಫೀಕ್ ಸಖಾಫಿ ತಾವೂರು. ಪರೀಕ್ಷಾ ವಿಭಾಗದ ಅಧ್ಯಕ್ಷರಾಗಿ ಮುಹಮ್ಮದ್ ಸಖಾಫಿ ಎಮ್ಮೆಮಾಡು, ಕಾರ್ಯದರ್ಶಿಯಾಗಿ ಮುಹಮ್ಮದ್ ಮುಸ್ಲಿಯಾರ್ ಎಮ್ಮೆಮಾಡು. ಮಿಷನರಿ ವಿಭಾಗದ ಅಧ್ಯಕ್ಷರಾಗಿ ಪಿ.ಎಸ್ ಮುಹಮ್ಮದ್ ಮುಸ್ಲಿಯಾರ್ ಎಮ್ಮೆಮಾಡು ಕಾರ್ಯದರ್ಶಿಯಾಗಿ ಶಮೀರ್ ಸಖಾಫಿ ಚೆಟ್ಟಿಮಾನಿ.
ಮ್ಯಾಗಜಿನ್ ವಿಭಾಗದ ಅಧ್ಯಕ್ಷರಾಗಿ ಇಬ್ರಾಹಿಂ ಮುಸ್ಲಿಯಾರ್ ಎಮ್ಮೆಮಾಡು ರವರುಗಳನ್ನು ಆಯ್ಕೆ ಮಾಡಲಾಯಿತು. ರಿಟೇನಿಂಗ್ ಆಫೀಸರಾಗಿ ಮುಸ್ತಫ ಸಖಾಫಿ ಉಸ್ತಾದರು ಕಾರ್ಯ ನಿರ್ವಹಿಸಿದರು.
-ಅಶ್ರಫ್ ಚೆಯ್ಯಂಡಾಣೆ