ನಕ್ಸಲ್ ದಾಳಿ:ಮೂವರು ಪೊಲೀಸರು ಹುತಾತ್ಮ
ನಾರಾಯಣಪುರ, ಆ. ೨೦: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಶುಕ್ರವಾರ ನಡೆದ ನಕ್ಸಲ್ ದಾಳಿಯಲ್ಲಿ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ)ನ ಸಹಾಯಕ ಕಮಾಂಡೆAಟ್ ಹಾಗೂ ಅವರ ಸಹೋದ್ಯೋಗಿಯೊಬ್ಬರು ಹುತಾತ್ಮರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಛೋಟೆಡೊಂಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಐಟಿಬಿಪಿಯ ೪೫ನೇ ಬೆಟಾಲಿಯನ್‌ನ ಕಡಮೆಟ ಕ್ಯಾಂಪ್ ಬಳಿ ಮಧ್ಯಾಹ್ನ ೧೨.೧೦ರ ಸುಮಾರಿಗೆ ಈ ನಕ್ಸಲ್ ದಾಳಿ ನಡೆದಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ (ಬಸ್ತಾರ್ ಶ್ರೇಣಿ) ಸುಂದರರಾಜ್ ಪಿ. ಅವರು ಹೇಳಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರದೇಶ ಪ್ರಾಬಲ್ಯ ಕಾರ್ಯಾಚರಣೆಯಲ್ಲಿದ್ದ ಐಟಿಬಿಪಿಯ ೪೫ನೇ ಬೆಟಾಲಿಯನ್ ಸಿಬ್ಬಂದಿ ಮೇಲೆ ನಕ್ಸಲರ ಒಂದು ತಂಡ ಗುಂಡಿನ ದಾಳಿ ನಡೆಸಿದೆ. ಅದು ಶಿಬಿರದಿಂದ ಸರಿಸುಮಾರು ೬೦೦ ಮೀಟರ್ ದೂರದಲ್ಲಿದೆ ಎಂದು ಅವರು ಹೇಳಿದರು. ಐಟಿಬಿಪಿಯ ೪೫ನೇ ಬೆಟಾಲಿಯನ್‌ನ ಸಹಾಯಕ ಕಮಾಂಡೆAಟ್ ಸುಧಾಕರ್ ಶಿಂಧೆ ಮತ್ತು ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್‌ಐ) ಗುರುಮುಖ್ ಸಿಂಗ್ ಅವರು ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ ಎಂದು ಐಜಿ ತಿಳಿಸಿದ್ದಾರೆ. ದಾಳಿಯ ನಂತರ, ನಕ್ಸಲರು ಒಂದು ಎಕೆ -೪೭ ರೈಫಲ್, ಎರಡು ಬುಲೆಟ್ ಪ್ರೂಫ್ ಜಾಕೆಟ್‌ಗಳು ಮತ್ತು ಭದ್ರತಾ ಸಿಬ್ಬಂದಿಯ ಒಂದು ವೈರ್‌ಲೆಸ್ ಸೆಟ್ ಲೂಟಿ ಮಾಡಿ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದರು.
ವಿನಾಶಕಾರಿ ಶಕ್ತಿ ಶಾಶ್ವತವಲ್ಲ-ಪ್ರಧಾನಿ
ಸೋಮನಾಥ, ಆ. ೨೦: ಭಯೋತ್ಪಾದನೆಯ ಮೂಲಕ ಸಾಮ್ರಾಜ್ಯ ಸ್ಥಾಪಿಸುವ ಸಿದ್ಧಾಂತವನ್ನು ಅನುಸರಿಸುವ ವಿನಾಶಕಾರಿ ಶಕ್ತಿಗಳು ಮತ್ತು ಜನರು ಕೆಲ ಸಮಯದವರೆಗೆ ಮಾತ್ರ ಪ್ರಾಬಲ್ಯ ಸಾಧಿಸಬಹುದು. ಆದರೆ ಮಾನವೀಯತೆಯನ್ನು ಶಾಶ್ವತವಾಗಿ ನಿಗ್ರಹಿಸಲು ಸಾಧ್ಯವಿಲ್ಲದ ಕಾರಣ ಅವರ ಅಸ್ತಿತ್ವ ಶಾಶ್ವತವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಗುಜರಾತಿನ ಪ್ರಸಿದ್ಧ ಸೋಮನಾಥ ದೇವಾಲಯದ ಕೆಲವು ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಸೋಮನಾಥ ದೇವಸ್ಥಾನವು ಹಲವು ಬಾರಿ ನಾಶವಾಯಿತು, ವಿಗ್ರಹಗಳನ್ನು ಅನೇಕ ಬಾರಿ ಅಪವಿತ್ರಗೊಳಿಸಲಾಯಿತು ಮತ್ತು ಅದರ ಅಸ್ತಿತ್ವವನ್ನು ಅಳಿಸಲು ಪ್ರಯತ್ನಿಸಲಾಯಿತು. ಆದರೆ ಪ್ರತಿ ವಿನಾಶಕಾರಿ ದಾಳಿಯ ನಂತರ ಅದು ಮತ್ತೆ ಸಂಪೂರ್ಣ ವೈಭವವನ್ನು ಪಡೆಯಿತು. ಇದು ನಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ ಎಂದರು. ವಿನಾಶಕ್ಕಾಗಿ ಶ್ರಮಿಸುವ ಶಕ್ತಿಗಳು ಮತ್ತು ಭಯೋತ್ಪಾದನೆಯಿಂದ ಸಾಮ್ರಾಜ್ಯ ಸ್ಥಾಪಿಸುವ ಸಿದ್ಧಾಂತವನ್ನು ಅನುಸರಿಸುವವರು ಸ್ವಲ್ಪ ಸಮಯದವರೆಗೆ ಪ್ರಾಬಲ್ಯ ಸಾಧಿಸಬಹುದು. ಆದರೆ ಅವರ ಅಸ್ತಿತ್ವವು ಶಾಶ್ವತವಾಗಿರುವುದಿಲ್ಲ. ಏಕೆಂದರೆ ಅವರು ಮಾನವೀಯತೆಯನ್ನು ಶಾಶ್ವತವಾಗಿ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು.
ಕುಖ್ಯಾತ ರೌಡಿಗಳ ಸ್ಥಳಾಂತರ
ಬೆAಗಳೂರು, ಆ. ೨೦: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ೧೮ ರೌಡಿಗಳನ್ನು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿದೆ. ವಿಲ್ಸನ್ ಗಾರ್ಡನ್ ನಾಗರಾಜ್, ಶಿವ, ಜಾರ್ಜ್ ಮೈಕಲ್, ಪ್ರದೀಪ್, ಬಾಂಬೆ ಸಲೀಂ ಸೇರಿ ಒಟ್ಟು ೧೮ ಜನ ರೌಡಿಗಳನ್ನು ಸ್ಥಳಾಂತರಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ರೌಡಿಗಳು, ಜೈಲಿನಲ್ಲಿದ್ದುಕೊಂಡೆ ತಮ್ಮ ಸಹಚರರ ಮೂಲಕ ನಗರದಲ್ಲಿ ರೌಡಿ ಚಟುವಟಿಕೆಗಳನ್ನು ನಡೆಸುವ ಸಂಚು ರೂಪಿಸುವ ಯತ್ನ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ೧೮ ರೌಡಿಗಳನ್ನು ಜಿಲ್ಲಾಕೇಂದ್ರ ಗಳ ಕಾರಾಗೃಹಗಳಿಗೆ ಸ್ಥಳಾಂತರಿಸಲು ಕಾರಾಗೃಹ ಇಲಾಖೆಯ ನಿರ್ದೇಶಕರಿಗೆ ಶಿಫಾರಸ್ಸು ಮಾಡಿದ್ದರು. ಇದೀಗ ಅವರ ಅನುಮತಿ ಪಡೆದು ೧೮ ಜನ ರೌಡಿಗಳನ್ನು ಕಲಬುರಗಿ, ಬೆಳಗಾವಿ, ಧಾರವಾಡ, ಶಿವಮೊಗ್ಗ, ಮೈಸೂರು, ವಿಜಯಪುರ, ಬಳ್ಳಾರಿ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿದೆ.
ವಿನಯ್ ಕುಲಕರ್ಣಿಗೆ ಜಾಮೀನು
ಧಾರವಾಡ, ಆ. ೨೦: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಯೋಗೀಶ್ ಗೌಡ ಹತ್ಯೆ ಕೇಸಿನಲ್ಲಿ ಜಾಮೀನು ಸಿಕ್ಕಿದೆ. ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಹತ್ಯೆ ಪ್ರಕರಣಕ್ಕೆ ಸಂಬAಧಿಸಿ ಆರೋಪಿ ಎಂದು ಜೈಲು ಸೇರಿದ್ದ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿನ್ನೆ ಜಾಮೀನು ನೀಡಿದೆ.
ಕೊರೊನಾ ಹೆಚ್ಚಳಕ್ಕೆ ಡೆಲ್ಟಾ ಕಾರಣ
ನವದೆಹಲಿ, ಆ. ೨೦: ದೇಶಾದ್ಯಂತ ಹೆಚ್ಚಳ ಕಾಣುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆಗೆ ಡೆಲ್ಟಾ ವೈರಾಣು ಕಾರಣ ಎಂದು ಭಾರತೀಯ ಜೀನೋಮ್ ಸೀಕ್ವೆನ್ಸಿಂಗ್ ಸಂಸ್ಥೆ ತಿಳಿಸಿದೆ. ಡೆಲ್ಟಾ ವೈರಾಣುವಿನಿಂದಾಗಿ ಲಸಿಕೆಯ ಪ್ರಭಾವವೂ ತಗ್ಗಿರುವುದಾಗಿ ಸಂಸ್ಥೆ ಅಭಿಪ್ರಾಯಪಟ್ಟಿದೆ. ಹಾಗಿದ್ದೂ ಲಸಿಕೆ ಹಾಕಿಸಿಕೊಳ್ಳಬೇಕಾಗಿರುವುದು ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದರೂ, ಸಾವಿನ ಪ್ರಮಾಣವನ್ನು ಕಡಿಮೆಗೊಳಿಸುವಲ್ಲಿ ಲಸಿಕೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಏಕದಿನ ಸೋಂಕು ಪ್ರಕರಣಗಳ ಸಂಖ್ಯೆ ಮೇ ತಿಂಗಳಿಗೆ ಹೋಲಿಸಿದರೆ ಹೆಚ್ಚಳವಾಗಿರುವುದು ಕಂಡುಬAದಿರುವ ಹಿನ್ನೆಲೆಯಲ್ಲಿ ಸಂಸ್ಥೆ ಈ ಮಾಹಿತಿ ನೀಡಿದೆ.
ರೂ. ೭೨೧ ಕೋಟಿ ಮೌಲ್ಯದ ಕ್ರಿಪ್ಟೊ ಕರೆನ್ಸಿ ಕಳವು
ಟೊಕಿಯೊ, ಆ. ೨೦: ಜಪಾನಿ ಕ್ರಿಪ್ಟೊ ಕರೆನ್ಸಿ ವಿನಿಮಯ ಕೇಂದ್ರವೊAದರಿAದ ಹ್ಯಾಕರ್‌ಗಳು ರೂ. ೭೨೧ ಕೋಟಿ ಮೌಲ್ಯದ ಕ್ರಿಪ್ಟೊ ಕರೆನ್ಸಿಯನ್ನು ಕಳವು ಮಾಡಿರುವ ಘಟನೆ ನಡೆದಿದೆ. ಲಿಕ್ವಿಡ್ ಎನ್ನುವ ಸಂಸ್ಥೆಯಲ್ಲಿ ಈ ಭಾರೀ ಮೊತ್ತದ ಕಳವು ನಡೆದಿದೆ. ಇತ್ತೀಚಿನ ದಿನಗಳಲ್ಲಿ ನಡೆದ ಎರಡನೇ ಕಳವು ಪ್ರಕರಣ ಇದಾಗಿದೆ. ಕ್ರಿಪ್ಟೊ ಕರೆನ್ಸಿಯನ್ನು ಸಂಗ್ರಹಿಸಿ ಇಡಲಾಗಿದ್ದ ವ್ಯಾಲೆಟ್‌ನಲ್ಲಿ ಅನಧಿಕೃತ ಬಳಕೆದಾರ ಅಕ್ರಮವಾಗಿ ಹ್ಯಾಕ್ ಮಾಡುವ ಮೂಲಕ ಪ್ರವೇಶ ಪಡೆದಿರುವುದು ತಜ್ಞರ ಗಮನಕ್ಕೆ ಬಂದಿತ್ತು. ಈ ಸಂಬAಧ ಪರಿಶೀಲನೆ ನಡೆಸಿದಾಗ ಒಟ್ಟು ರೂ. ೭೨೧ ಕೋಟಿ ಮೌಲ್ಯದ ಸಂಪತ್ತು ಕಳವಾಗಿರುವುದು ಪತ್ತೆಯಾಗಿತ್ತು. ಕಳೆದ ವಾರ ಪಾಲಿ ನೆಟ್‌ವರ್ಕ್ ಎಂಬ ಕ್ರಿಪ್ಟೊ ಕರೆನ್ಸಿ ಸಂಸ್ಥೆಯ ಕಂಪ್ಯೂಟರ್‌ಗಳ ಮೇಲೆ ದಾಳಿ ನಡೆಸಿದ್ದ ಹ್ಯಾಕರ್‌ಗಳು ರೂ. ೪,೪೦೦ ಕೋಟಿ ಮೌಲ್ಯದ ಸಂಪತ್ತನ್ನು ಕಳವು ಮಾಡಿದ್ದರು. ಆದರೆ ಕೆಲ ಸಮಯ ನಂತರ ಕಳವು ಮಾಡಿದ ಹ್ಯಾಕರ್‌ಗಳೇ ಆ ಮೊತ್ತವನ್ನು ಹಿಂತಿರುಗಿಸಿ, ತಮ್ಮ ಉದ್ದೇಶ ಕಲವು ಮಾಡುವುದಲ್ಲ ಜಾಗೃತಿ ಮೂಡಿಸುವುದು ಎಂಬ ಸಂದೇಶ ಕಳಿಸಿದ್ದರು. ಆ ಹ್ಯಾಕರ್‌ಗಳು ಪಾಲಿ ನೆಟ್‌ವರ್ಕ್ ಕ್ರಿಪ್ಟೊ ಕರೆನ್ಸಿ ಕೇಂದ್ರದ ಭದ್ರತಾ ವ್ಯವಸ್ಥೆಯಲ್ಲಿನ ಲೋಪವನ್ನು ಪತ್ತೆ ಹಚ್ಚಿ ಸೈಬರ್ ದಾಳಿ ನಡೆಸಿದ್ದರು. ಈ ರೀತಿಯ ಲೋಪವನ್ನು ಮುಂದೆ ಆಗದಂತೆ ಎಚ್ಚರ ವಹಿಸಿ ಎಂದು ಹ್ಯಾಕರ್‌ಗಳು ತಿಳಿಸಿದ್ದರು. ಆ ಘಟನೆ ಮಾಸುವ ಮೊದಲೇ ಜಪಾನ್ ನಲ್ಲಿ ಲಿಕ್ವಿಡ್ ಕ್ರಿಪ್ಟೊ ಕರೆನ್ಸಿ ವಿನಿಮಯ ಕೇಂದ್ರದ ಮೇಲೆ ಸೈಬರ್ ದಾಳಿ ನಡೆದಿದೆ.
ಅಫ್ಘಾನ್‌ನಲ್ಲಿ ಆಹಾರ ಕೊರತೆ
ವಿಶ್ವಸಂಸ್ಥೆ, ಆ. ೨೦: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿ ಕೊಳ್ಳುವ ಮೂಲಕ ಉದ್ಭವವಾಗಿರುವ ಮಾನವೀಯ ಬಿಕ್ಕಟ್ಟಿನಿಂದಾಗಿ ೧.೪ ಕೋಟಿ ಮಂದಿಗೆ ತಿನ್ನಲು ಆಹಾರ ಕೂಡ ಲಭಿಸುತ್ತಿಲ್ಲ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಕೊರೊನಾ ಸಾಂಕ್ರಾಮಿಕದಿAದ ಬಳಲುತ್ತಿರುವ ಆ ದೇಶದಲ್ಲಿ ಈ ಹೊಸ ಬಿಕ್ಕಟ್ಟು, ಗಂಭೀರ ಆರ್ಥಿಕ ಹಾಗೂ ಸಾಮಾಜಿಕ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ವಿಶ್ವ ಸಂಸ್ಥೆ ಆಹಾರ ಕಾರ್ಯಕ್ರಮಗಳ ಆಫ್ಘನ್ ನಿರ್ದೇಶಕಿ ಮೇರಿ ಎಲ್ಲೆನ್, ಕಳವಳ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಶೇ. ೪೦ಕ್ಕಿಂತಲೂ ಹೆಚ್ಚು ಬೆಳೆ ವಿಫಲವಾಗಿದ್ದು, ಸಂಗ್ರಹಿಸಿದ ಆಹಾರ ಧಾನ್ಯಗಳು ನಾಶವಾಗಿವೆ ಎಂದು ಅವರು ಹೇಳಿದ್ದಾರೆ. ವಿಶ್ವಸಂಸ್ಥೆ ಪ್ರತಿನಿಧಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ತಾಲಿಬಾನಿಗಳ ಆಗಮನದಿಂದ ಸಾವಿರಾರು ಜನರು ನಿರಾಶ್ರಿತರಾಗುತ್ತಿದ್ದಾರೆ. ಅವರಿಗೆ ಆಹಾರ ಒದಗಿಸುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.