ಮಡಿಕೇರಿ, ಆ. ೨೦: ಒಲಂಪಿಕ್ಸ್ನಲ್ಲಿ ಭಾಗವಹಿಸಿದ ಮಹಿಳಾ ಹಾಕಿ ತಂಡದ ತರಬೇತುದಾರೆ ಅಂಕಿತಾ ಸುರೇಶ್ ಸೇರಿದಂತೆ ನಾಲ್ಕು ಒಲಂಪಿಕ್ ಪಟುಗಳಿಗೆ ತಲಾ ಒಂದು ಲಕ್ಷ ರೂಪಾಯಿ ಪ್ರೋತ್ಸಾಹ ಧನವನ್ನು ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ಘೋಷಿಸಿದ್ದಾರೆ.
ಗಾಲ್ಫ್ ಆಟಗಾರ್ತಿ ಅತಿಥಿ ಅಶೋಕ್, ಕುದುರೆ ಸವಾರಿಯಲ್ಲಿ ಭಾಗವಹಿಸಿದ್ದ ಫೌದ ಮಿರ್ಜ, ಈಜುಗಾರ್ತಿ ಶ್ರೀಹರಿ ನಟರಾಜು ಅವರಿಗೆ ಪ್ರೋತ್ಸಾಹ ಧನ ಘೋಷಿಸಲಾಗಿದೆ.