ಸುಂಟಿಕೊಪ್ಪ, ಆ. ೧೯: ಕೊಡಗರಹಳ್ಳಿ ಗ್ರಾಮ ಮಟ್ಟದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಕೊಡಗರಹಳ್ಳಿ ಉಪ್ಪುತೋಡು, ಕಲ್ಲೂರು, ಅಂದಗೋವೆ ಅಂಗನವಾಡಿ ಕೇಂದ್ರಗಳು ಜಂಟಿಯಾಗಿ ಕೊಡಗರಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಚೆನ್ನಬಸಪ್ಪ ವಹಿಸಿಕೊಂಡಿದ್ದರು. ಗ್ರಾ.ಪಂ. ಸದಸ್ಯೆ ನೀತಾ ಹರೀಶ್ ಮತ್ತು ಕಲಾಮಣಿ ನಾರಾಯಣ ಕಾರ್ಯಕ್ರಮ ಉದ್ಘಾಟಿಸಿದರು.

ಆಶಾ ಕಾರ್ಯಕರ್ತೆ ಲತಾ ದಿನದ ಮಹತ್ವ ವಿವರಿಸಿದರು. ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ವಿಜಯಲಕ್ಷಿö್ಮ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಲೀಲಾವತಿ, ಶೋಭಾವತಿ, ಝರಿನಾ, ವಿಶಾಲಾಕ್ಷಿ, ಸರಳ, ವಿಜಯ ಮತ್ತು ಕೊಡಗರಹಳ್ಳಿ ಕಿರಿಯ ಮಹಿಳೆ ಆರೋಗ್ಯ ಕಾರ್ಯಕರ್ತೆಯರಾದ ರಕ್ಷಿತ, ಆಶಾ ಕಾರ್ಯಕರ್ತೆಯರಾದ ಆರ್. ಕವಿತಾ ಮತ್ತು ಸಹಾಯಕಿಯರಾದ ಹೆಚ್.ಎಂ. ಸಂದ್ಯಾ, ಹಸೀನಾ ಸೇರಿದಂತೆ ಇನ್ನಿತರರು ಹಾಜರಿದ್ದರು.ಸಂಪಾಜೆ: ಸಂಪಾಜೆ-ಅರಮನೆತೋಟ ಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾಸ ಸಮಿತಿ ವತಿಯಿಂದ ಸ್ತನ್ಯಪಾನದ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲ ಭರತ್, ಬಾಲವಿಕಾಸ ಸಮಿತಿ ಅಧ್ಯಕ್ಷೆ ಲತಾ ಹೊದ್ದೆಟ್ಟಿ, ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ ಕುಕ್ಕೆಟ್ಟಿ, ಆಶಾ ಕಾರ್ಯಕರ್ತೆ ಸಾವಿತ್ರಿ ಕೊರಗಪ್ಪ, ಸಮಿತಿ ಸದಸ್ಯರು ಹಾಗೂ ಪೋಷಕರು ಭಾಗವಹಿಸಿದ್ದರು.