ಮಡಿಕೇರಿ, ಆ. ೧೯: ಅನಿವಾಸಿ ಕನ್ನಡಿಗರ ಒಕ್ಕೂಟ ಕರ್ನಾಟಕ ಕಲ್ಚರಲ್ ಫೌಂಡೇಶನ್ ವತಿಯಿಂದ ೨೦೧೮ರ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದ ಮೂರು ಕುಟುಂಬಕ್ಕೆ ಮನೆಗಳನ್ನು ತಾ. ೨೩ರಂದು ಹಸ್ತಾಂತರಿಸಲಾಗುವುದು ಎಂದು ಕೆಸಿಎಫ್ ಯುಎಇ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು ಹೇಳಿದರು.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೮ರ ಆಗಸ್ಟ್ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಘಟಿಸಿದ ಪ್ರಾಕೃತಿಕ ವಿಕೋಪದಲ್ಲಿ ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾದವರ ಪೈಕಿ ಕನಿಷ್ಟ ೧೦ ಮಂದಿಗೆ ಮನೆ ನಿರ್ಮಾಣಕ್ಕೆ ಇಂಡ್ಯನ್ ಗ್ರಾಂಡ್ ಮುಫ್ತಿ, ಕೊಡಗಿನ ಖಾಝಿ ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ. ಉಸ್ತಾದರು ಆದೇಶ ಪಾಲನೆಗಾಗಿ ಎಸ್‌ವೈಎಸ್ ರಾಜ್ಯ ಸಮಿತಿ ವತಿಯಿಂದ ಖಾಸಗಿ ಸ್ಥಳ ಖರೀದಿಸಲು ಮುಂದಾಗಿತ್ತು. ಈತನ್ಮಧ್ಯೆ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಕೊಡಗು ಮುಸ್ಲಿಂ ಜಮಾಅತ್ ಕೋಶಾಧಿಕಾರಿ ದಾನಿ ಅಬ್ದುಲ್ ಲತೀಫ್ ಸುಂಟಿಕೊಪ್ಪ ಅವರು ಲಕ್ಷಾಂತರ ರೂಪಾಯಿ ಮೌಲ್ಯದ ತಮ್ಮ ಒಂದು ಎಕರೆ ಜಮೀನನ್ನು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಉದಾರವಾಗಿ ಎಸ್‌ವೈಎಸ್ ಸಮಿತಿಗೆ ನೀಡಿದರು. ಆ ಜಾಗದಲ್ಲಿ ಈಗಾಗಲೇ ಎಸ್‌ವೈಎಸ್ ರಾಜ್ಯ ಸಮಿತಿ ವತಿಯಿಂದ ವಿಭಿನ್ನ ಜನಾಂಗದ ಅರ್ಹ ೧೬ ಫಲಾನುಭವಿಗಳಿಗೆ ಮನೆ ನಿರ್ಮಿಸಲು ಬೇಕಾದ ಸ್ಥಳವನ್ನು ಆಯ್ದ ಸಂತ್ರಸ್ತರ ಹೆಸರಿಗೆ ನೋಂದಾಯಿಸಿದ್ದು, ಆ ಜಾಗದಲ್ಲಿ ಅನಿವಾಸಿ ಕನ್ನಡಿಗರ ಒಕ್ಕೂಟ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ವತಿಯಿಂದ ಮೂರು ಸಂತ್ರಸ್ತರಿಗೆ ನಿರ್ಮಿಸಿದ ಮನೆಯ ಕಾಮಗಾರಿ ಪೂರ್ಣಗೊಂಡಿದ್ದು, ಫಲಾನುಭವಿಗಳಿಗೆ ಹಸ್ತಾಂತರ ಮಾಡಲು ಸಿದ್ಧವಾಗಿದೆ. ಈ ಮನೆಗಳ ಹಸ್ತಾಂತರವನ್ನು ತಾ. ೨೩ರಂದು ಬೆಳಿಗ್ಗೆ ೯.೩೦ ಗಂಟೆಗೆ ಶೈಖುನಾ ಸುಲ್ತಾನುಲ್ ಉಲಮಾ ಆನ್ಲೆöÊನ್ ಮೂಲಕ ನೆರವೇರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೂರ್ಗ್ ಜಂಇಯತುಲ್ ಉಲಮಾದ ಅಧ್ಯಕ್ಷ ಶೈಖುನಾ ಮಹ್ಮೂದ್ ಉಸ್ತಾದ್, ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದರೂಸಿ ಎಮ್ಮೆಮಾಡು, ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಕಾಂಗ್ರೆಸ್ ಕಾರ್ಯಾಧ್ಯಕ್ಷ ಧರ್ಮಜಾ ಉತ್ತಪ್ಪ, ಜೆಡಿಎಸ್ ಅಧ್ಯಕ್ಷ ಕೆ.ಎಂ. ಗಣೇಶ್, ಹಾಜಿ ಶೈಖ್ ಭಾವ ಮಂಗಳೂರು, ಎಸ್ಪಿ ಹಂಝ ಸಖಾಫಿ ಬಂಟ್ವಾಳ, ಡಿ.ಪಿ. ಯೂಸುಫ್ ಸಖಾಫಿ ಬೈತಾರ್, ಅಬ್ದರ‍್ರಹೀಮ್ ಸಅದಿ ನಂದಾವರ, ಅಬ್ದುಲ್ಲ ಸಖಾಫಿ ಕೊಳಕೇರಿ, ಶಾಫಿ ಸಹದಿ ಸೋಮವಾರಪೇಟೆ, ಮುಸ್ತಫಾ ಸಖಾಫಿ ಹುಂಡಿ, ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಅಬ್ದುಲ್ ಲತೀಫ್ ಸುಂಟಿಕೊಪ್ಪ, ಎಸ್‌ವೈಎಸ್ ಜಿಲ್ಲಾಧ್ಯಕ್ಷ ಅಬ್ದುಲ್ಲಾ ಸಖಾಫಿ ಕೊಳಕೇರಿ, ಕೆಸಿಎಫ್ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ಕೊಂಡAಗೇರಿ, ಮುಸ್ಲಿಂ ಜಮಾಅತ್ ಕಾರ್ಯಾಧ್ಯಕ್ಷ ಪಿ.ಎ. ಯೂಸುಫ್ ಕೊಂಡAಗೇರಿ, ಎಸ್‌ವೈಎಸ್ ಮಾಧ್ಯಮ ಕಾರ್ಯದರ್ಶಿ ಅಬ್ದುಲ್ ಹಫೀಳ್ ಕೊಳಕೇರಿ ಉಪಸ್ಥಿತರಿದ್ದರು.