ಮಡಿಕೇರಿ, ಆ. ೧೯: ನಗರದ ಶ್ರೀ ಮುತ್ತಪ್ಪ ದೇವಾಲಯದಲ್ಲಿ ವರಮಹಾಲಕ್ಷಿö್ಮ ಹಬ್ಬದ ಪ್ರಯುಕ್ತ ತಾ. ೨೦ ರಂದು (ಇಂದು) ವಿವಿಧ ಧಾರ್ಮಿಕ ಕೈಕಂರ್ಯಗಳು ನೆರವೇರಲಿವೆೆ. ಮುತ್ತೆöÊದೆಯರಿಗೆ ಹರಿಶಿನ ಕುಂಕುಮ ವಿತರಣೆ, ದೇವಿಗೆ ವಿಶೇಷ ನೈವೇದ್ಯ ಅರ್ಪಣೆ ಮಾಡುವುದು, ಭಕ್ತರಿಗೆ ಪ್ರಸಾದ ವಿತರಣೆ, ಭಗವತಿಗೆ ಹೊಸ ಸೀರೆ ಕುಪ್ಪಸ ಉಡಿಸಿ ಸರ್ವಾಲಂಕೃತೆ ಅಮ್ಮನಿಗೆ ಬಾಗಿನ ಸಮರ್ಪಣೆ, ಭಜನೆ, ಶ್ರೀ ಲಕ್ಮೀ ಅಷ್ಟೋತ್ತರ ಪಠಣ, ಮುಂತಾದ ದೈವಿಕ ಕೈಂಕರ್ಯಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.