ಸೋಮವಾರಪೇಟೆ, ಆ. ೧೯: ಜಮ್ಮಾ ಹಿಡುವಳಿ ಹಕ್ಕು, ಕೋವಿ ಹಕ್ಕಿಗೆ ಸಂಬAಧಿಸಿದAತೆ ತಾ. ೨೩ ರಂದು ಸೋಮವಾರಪೇಟೆ ಒಕ್ಕಲಿಗರ ಸಮುದಾಯ ಭವನದಲ್ಲಿ ಜಮ್ಮಾ ಹಿಡುವಳಿ ಹೊಂದಿರುವ ಒಕ್ಕಲಿಗರ ಸಭೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ ತಿಳಿಸಿದ್ದಾರೆ.

ಜಮ್ಮಾ ಹಿಡುವಳಿ ಹಕ್ಕಿನ ವಿಚಾರದಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಹಾಗೂ ಅರ್ಜಿದಾರ ಕ್ಯಾಪ್ಟನ್ ಚೇತನ್ ಅವರುಗಳ ನಡುವೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ವಾದ ವಿವಾದದ ನಡುವೆ ಜಮ್ಮಾ ಹಿಡುವಳಿಯ ಒಕ್ಕಲಿಗರ ಪಾತ್ರದ ಬಗ್ಗೆ ಚರ್ಚಿಸಲು ಸಭೆ ಆಯೋಜಿಸಲಾಗಿದ್ದು, ಅಂದು ಪೂವಾಹ್ನ ೧೧ ಗಂಟೆಗೆ ಸಭೆ ನಡೆಯಲಿದೆ.

ಹುಟ್ಟು, ಸಾವು, ಹಬ್ಬ, ಹರಿದಿನಗಳಲ್ಲಿ ನಾವುಗಳೂ ಸಹ ಕೋವಿಯ ಆರಾಧಕರಾಗಿದ್ದೇವೆ. ಕೋವಿಯ ಹಕ್ಕಿನ ವಿಚಾರವೂ ಸಹ ನ್ಯಾಯಾಲಯದಲ್ಲಿರುವುದರಿಂದ ಮುಂದಿನ ಬೆಳವಣಿಗೆಗಳ ಬಗ್ಗೆ ಸಭೆಯಲ್ಲಿ ರೂಪುರೇಷೆ ಸಿದ್ಧಪಡಿಸ ಲಾಗುವುದು ಎಂದು ಎಸ್.ಎಂ. ಚಂಗಪ್ಪ ತಿಳಿಸಿದ್ದಾರೆ.