ಸೋಮವಾರಪೇಟೆ, ಆ. ೧೯: ಸ್ವಾತಂತ್ರö್ಯದ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ಯುವ ಮೋರ್ಚಾದಿಂದ ಆಯೋಜಿಸಲಾಗಿದ್ದ ಸೈಕಲ್ ಜಾಥಾಕ್ಕೆ ಪಟ್ಟಣದ ಜೇಸೀ ವೇದಿಕೆ ಮುಂಭಾಗ ಚಾಲನೆ ನೀಡಲಾಯಿತು.

ಸೋಮವಾರಪೇಟೆಯಿಂದ ಕುಶಾಲನಗರದವರೆಗೆ ನಡೆದ ಜಾಥಾದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಯುವ ಮೋರ್ಚಾ ಕಾರ್ಯಕರ್ತರು ಭಾಗವಹಿಸಿದ್ದರು.

ಜೇಸೀ ವೇದಿಕೆ ಮುಂಭಾಗದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ದಕ್ಷಿಣ ಕನ್ನಡ ಪ್ರಭಾರಿ ಬಿ.ಬಿ. ಭಾರತೀಶ್ ಅವರು, ಸ್ವಾತಂತ್ರö್ಯ ಪೂರ್ವದಲ್ಲಿ ನಡೆದ ಹೋರಾಟದ ಹಾದಿಯನ್ನು ಎಲ್ಲರೂ ಸ್ಮರಿಸಿಕೊಳ್ಳಬೇಕು. ಹಲವಷ್ಟು ಯುವಕರು ಪ್ರಾಣಾರ್ಪಣೆ ಮಾಡಿದ್ದಾರೆ. ತಮ್ಮ ಯೌವನ ಹಾಗೂ ಜೀವನವನ್ನೇ ಸ್ವಾತಂತ್ರö್ಯಕ್ಕೆ ಮುಡಿಪಾಗಿಟ್ಟ ಮಹಾನ್ ಹೋರಾಟಗಾರರನ್ನು ರಾಜಕೀಯ ಪಕ್ಷಗಳು ಕಡೆಗಣಿಸಿವೆ ಎಂದರು.

ಸ್ವಾತAತ್ರö್ಯ ದಿನದಂದು ಪುತ್ತೂರಿನ ಕಬಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾತಂತ್ರö್ಯವೀರ ಸಾವರ್ಕರ್ ಅವರ ಫೋಟೋ ತೆಗೆಯುವಂತೆ ಎಸ್‌ಡಿಪಿಐ ಪಕ್ಷದವರು ಆಗ್ರಹಿಸಿ ಸ್ವಾತಂತ್ರö್ಯ ರಥಕ್ಕೆ ತಡೆಯೊಡ್ಡಿರುವುದು ಖಂಡನೀಯ ಎಂದರು.

ಸ್ವಾತಂತ್ರö್ಯದ ನಿಜವಾದ ಇತಿಹಾಸವನ್ನು ತಿರುಚಲಾಗಿದೆ. ಈ ಬಗ್ಗೆ ಯುವ ಜನಾಂಗದಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಭಾರತೀಶ್ ಅಭಿಪ್ರಾಯಿಸಿದರು.

ಈ ಸಂದರ್ಭ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಮನುಕುಮಾರ್ ರೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಾದಪ್ಪ, ಯುವ ಮೋರ್ಚಾ ರಾಜ್ಯ ಸಮಿತಿ ಸದಸ್ಯ ಮಹೇಶ್ ತಿಮ್ಮಯ್ಯ, ಜಿಲ್ಲಾ ಪ್ರಭಾರಿ ರೂಪಾ ಸತೀಶ್ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.

ಕೂಡಿಗೆಯಲ್ಲಿ ಸ್ವಾಗತ

ಯುವ ಮೋರ್ಚಾದ ವತಿಯಿಂದ ಯುವ ಸಂಕಲ್ಪ ಯಾತ್ರೆಯ ಸೈಕಲ್ ಜಾಥಾವನ್ನು ಕೂಡಿಗೆಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಈ ಸಂದರ್ಭ ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರು ಮತ್ತು ತಾಲೂಕು, ಹೋಬಳಿ, ಗ್ರಾಮ, ಪಂಚಾಯಿತಿ ಮಟ್ಟದ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದರು.

ಕುಶಾಲನಗರದಲ್ಲಿ ಅಂತ್ಯ

ಕುಶಾಲನಗರ: ಸೈಕಲ್ ಜಾಥಾ ಸೋಮವಾರಪೇಟೆಯಿಂದ ಕುಶಾಲನಗರ ತಲುಪುತ್ತಿದ್ದಂತೆ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮತ್ತು ಸ್ಥಳೀಯ ಪ್ರಮುಖರು ಸೋಮೇಶ್ವರ ದೇವಾಲಯದ ಬಳಿ ಬರ ಮಾಡಿಕೊಂಡರು. ಬಳಿಕ ನಗರದ ಮುಖ್ಯ ರಸ್ತೆ ಮೂಲಕ ಜಾಥಾ ನಡೆಸಿ ಅಂತ್ಯಗೊಳಿಸಲಾಯಿತು.

ಈ ಸಂದರ್ಭ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಬಿ.ಬಿ. ಭಾರತೀಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗಣಿಪ್ರಸಾದ್ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ನಗರ ಅಧ್ಯಕ್ಷ ಉಮಾಶಂಕರ್ ಪಕ್ಷದ ತಾಲೂಕು ವಕ್ತಾರ ಕೆ.ಜಿ. ಮನು, ಯುವ ಮೋರ್ಚಾದ ಶಿವಾಜಿರಾವ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಇದ್ದರು.