ಮಡಿಕೇರಿ, ಆ. ೧೯: ಕೋವಿಡ್ ಹಿನ್ನೆಲೆಯಲ್ಲಿ ಜಾರಿಗೆ ತಂದಿರುವ ವೀಕೆಂಡ್ ಕರ್ಫ್ಯೂ ನಿಯಮವನ್ನು ಕೊಡಗಿನಲ್ಲಿ ತೆರವುಗೊಳಿಸಬೇಕೆಂದು ಕೊಡಗು ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟ ಆಗ್ರಹಿಸಿದ್ದು, ತಾ. ೨೫ ರಂದು ಪ್ರತಿಭಟನೆ ನಡೆಸುವುದಾಗಿ ಒಕ್ಕೂಟದ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ, ಮಡಿಕೇರಿ, ಆ. ೧೯: ಕೋವಿಡ್ ಹಿನ್ನೆಲೆಯಲ್ಲಿ ಜಾರಿಗೆ ತಂದಿರುವ ವೀಕೆಂಡ್ ಕರ್ಫ್ಯೂ ನಿಯಮವನ್ನು ಕೊಡಗಿನಲ್ಲಿ ತೆರವುಗೊಳಿಸಬೇಕೆಂದು ಕೊಡಗು ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟ ಆಗ್ರಹಿಸಿದ್ದು, ತಾ. ೨೫ ರಂದು ಪ್ರತಿಭಟನೆ ನಡೆಸುವುದಾಗಿ ಒಕ್ಕೂಟದ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ, ಪರಿತಪಿಸುವಂತಾಗಿದೆ.
ಆದ್ದರಿAದ ವೀಕೆಂಡ್ ಕರ್ಫ್ಯೂ ತೆರವು ಮಾಡುವ ಮೂಲಕ ಪ್ರವಾಸೋದ್ಯಮ ಹಾಗೂ ಇತರ ಉದ್ಯಮಗಳನ್ನು ನಂಬಿಕೊAಡಿರುವ ಕುಟುಂಬಗಳ ನೋವಿಗೆ ಸರ್ಕಾರ ಹಾಗೂ ಸಂಬAಧಪಟ್ಟ ಇಲಾಖೆ ಸ್ಪಂದಿಸಬೇಕಿದೆ. ಪ್ರವಾಸಿಗರಿಗೆ ಕೊರೊನಾ ಪರೀಕ್ಷೆ ವ್ಯಾಕ್ಸಿನೇಷನ್ ಇವುಗಳನ್ನು ಕಡ್ಡಾಯಗೊಳಿಸುವ ಮೂಲಕ ವೀಕೆಂಡ್ ಕರ್ಫ್ಯೂ ನಿಯಮವನ್ನು ತೆರವುಗೊಳಿಸು ವಂತಾಗಬೇಕು. ಈ ಬಗ್ಗೆ ತಾ. ೨೫ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಗಾಂಧಿಮೈದಾನದಲ್ಲಿ ಒಕ್ಕೂಟದ ವತಿಯಿಂದ ಪ್ರತಿಭಟಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಮಂಜುನಾಥ್ ಕುಮಾರ್ ಹೇಳಿದರು. ಒಕ್ಕೂಟದ ಖಜಾಂಚಿ ಪದ್ಮ ಮಾತನಾಡಿ, ವೀಕೆಂಡ್ ಕರ್ಫ್ಯೂ ತೆರವುಗೊಳಿಸಿ ಕೋವಿಡ್ ನಿಯಮಗಳ ಕಡ್ಡಾಯ ಪಾಲನೆಯೊಂದಿಗೆ ಪ್ರವಾಸೋದ್ಯಮಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನಕಾರ್ಯದರ್ಶಿ ಕೆ. ಶಿವಕುಮಾರ್, ನಿರ್ದೇಶಕರುಗಳಾದ ನಿತಿನ್ ತಮ್ಮಯ್ಯ, ಬ್ರಿಜೇಶ್, ಮುದ್ದುರಾಜು ಉಪಸ್ಥಿತರಿದ್ದರು.