ಮಡಿಕೇರಿ, ಆ. ೧೯: ವಿಶಿಷ್ಟ ಹಾಗೂ ವಿಭಿನ್ನತೆಯಿಂದ ಕೂಡಿರುವ ಅರೆಭಾಷಿಕ ಗೌಡ ಜನಾಂಗದ ಸಂಸ್ಕೃತಿ - ಪದ್ಧತಿಗಳ ಕಂಪು ಮೂರ್ನಾಡಿನಲ್ಲಿಂದು ಪಸರಿಸಿತು. ಹುಟ್ಟಿನಿಂದಿಡಿದು ಸಾವಿನವರೆಗೂ ಪ್ರತಿ ಕಾರ್ಯದಲ್ಲೂ ಒಂದೊAದು ಪದ್ಧತಿಗಳನ್ನೊಳಗೊಂಡಿರುವ ಜನಾಂಗದ ವಿವಿಧ ಸಂಪ್ರದಾಯ - ಪದ್ಧತಿಗಳ ಪ್ರದರ್ಶನ ಮೂರ್ನಾಡು ಗೌಡ ಸಮಾಜದಲ್ಲಿ ನಡೆಯಿತು. ಸಂಪೂರ್ಣ ಕಾರ್ಯಕ್ರಮ ಒಂದು ಮದುವೆ ಸಮಾರಂಭದAತೆ ಕಂಗೊಳಿಸಿತು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮೂರ್ನಾಡು ಗೌಡ ಸಮಾಜದ ಸಹಯೋಗದೊಂದಿಗೆ ಮುಂದಿನ ಪೀಳಿಗೆಗೆ ಅರೆಭಾಷೆ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕೃತಿ ಶಿಬಿರ ಏರ್ಪಡಿಸಲಾಗಿತ್ತು. ನಾಲ್ಕು ದಿನಗಳ ಕಾಲ ನಡೆದ ಶಿಬಿರದಲ್ಲಿ ೬೦ಕ್ಕೂ ಅಧಿಕ ಮಂದಿ ತರಬೇತಿ ಪಡೆದಿದ್ದು, ಇಂದು ಸಮಾರೋಪಗೊಂಡಿತು.

ಸಾAಪ್ರದಾಯಿಕ ಉದ್ಘಾಟನೆ

ಕಾರ್ಯಕ್ರಮದ ಉದ್ಘಾಟನೆ ಮದುವೆ ಮನೆಯಲ್ಲಿ ನಡೆಯುವ ಸಂಪ್ರದಾಯದAತೆ ನೆರವೇರಿತು. ಪೂರ್ಣಕಲಶದೊಂದಿಗೆ ಆರತಿ ಬೆಳಗಿ ಅತಿಥಿಗಳನ್ನು ಬರಮಾಡಿ ಕೊಳ್ಳಲಾಯಿತು. ಸಭಾಂಗಣದ ವೇದಿಕೆ ಬಳಿ ಅಲಂಕೃತವಾಗಿ ಜೋಡಿಸಿಟ್ಟಿದ್ದ ಕೃಷಿ ಚಟುವಟಿಕೆಯ ಹೆಗ್ಗುರು ತಾಗಿರುವ ನೇಗಿಲು - ನೊಗ- ಗೊರಗಗಳಲ್ಲಿ ಇರಿಸಲಾಗಿದ್ದ ಹಣತೆಯನ್ನು ಬೆಳಗುವದರ ಮೂಲಕ ಅತಿಥಿಗಳು ಉದ್ಘಾಟಿಸಿದರು.

ಸಂಸ್ಕೃತಿಯ ಕಂಪು

ಅರೆಭಾಷೆ ಗೌಡರ ಮದುವೆ ಸಮಾರಂಭದ ಪ್ರಮುಖ ಶಾಸ್ತçಗಳಾದ ವೀಳ್ಯಶಾಸ್ತç, ಚಪ್ಪರ ಕಂಬ ಹಾಕುವ ಶಾಸ್ತç, ಗಂಗೆ ಪೂಜೆ, ಹರಕೆ ಹಣ ಕಟ್ಟುವದು, ಅಂಗಳ ಸಾರಿಸುವ ಶಾಸ್ತç, ಅಕ್ಕಿ ಶಾಸ್ತç, ಹೆಣ್ಣು - ಗಂಡು ವಹಿಸುವದು, ಹೆಣ್ಣು ಇಳಿಸುವುದು, ತುಪ್ಪದ ಚೆಂಬು ಕಟ್ಟುವದು ಸೇರಿದಂತೆ ಇನ್ನಿತರ ಶಾಸ್ತçಗಳನ್ನು ಸೋಬಾನೆ ಹಾಡಿನೊಂದಿಗೆ ಶಿಬಿರಾರ್ಥಿಗಳು ಪ್ರದರ್ಶಿಸಿ ಗಮನ ಸೆಳೆದರು.

(ಮೊದಲ ಪುಟದಿಂದ) ಶಿಕ್ಷಕ, ಕಲಾವಿದ ತೆಕ್ಕಡೆ ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ನಡೆದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಮೇರ್ಕಜೆ ಉಮೇಶ್ ನಾಣಯ್ಯ, ಕಲ್ಲುಮುಟ್ಲು ಗಣೇಶ್ ಪೂವಯ್ಯ, ಬೊಳ್ತಜ್ಜಿ ನಂದ ಸಿದ್ದಾರ್ಥ್ ತಳೂರು ಯಶೋಧ ಸೋಮಣ್ಣ ಅವರುಗಳು ತರಬೇತಿ ನೀಡಿದ್ದರು.

ಸಂಸ್ಕೃತಿ ಅಳಿಯದಿರಲಿ

ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ಕಡ್ಲೆರ ತುಳಿಸಿ ಮೋಹನ್ ಮಾತನಾಡಿ, ಇದೊಂದು ಅರೆಭಾಷೆ ಸಂಸ್ಕೃತಿಯನ್ನು ಬೆಳೆಸುವ ಕಾರ್ಯಕ್ರಮವಾಗಿದೆ. ನಮ್ಮ ಸಂಸ್ಕೃತಿ - ಪದ್ಧತಿಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ. ವೈಭವಪೂರ್ಣ, ಉತ್ತಮ ಸಂಸ್ಕೃತಿ ನಮ್ಮದಾಗಿದ್ದು, ಇದು ಎಂದಿಗೂ ಅಳಿಯದಿರಲಿ ಎಂದು ಆಶಿಸಿದರು. ಗೌಡರು ಭೂಮಿಗೆ ಒಡೆಯರು ಎಂದು ಪ್ರತಿಪಾದಿಸಿದ ಅವರು, ಗೌಡ ಜನಾಂಗದ ಸಾಂಸ್ಕೃತಿಕ ಹಿನ್ನೆಲೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಒಂದೇ ರೀತಿಯ ಆಚರಣೆಯಿರಲಿ

ಮಡಿಕೇರಿ ಆಕಾಶವಾಣಿ ಉದ್ಘೋಷಕ, ಕಲಾವಿದ ವಿನೋದ್ ಮೂಡಗದ್ದೆ ಮಾತನಾಡಿ, ನಾವುಗಳು ಭಾಷೆಯ ಆಧಾರದಲ್ಲಿ ಗುರುತಿಸಿಕೊಳ್ಳುತ್ತಿದ್ದೇವೆ. ಭಾಷೆ - ಸಂಸ್ಕೃತಿ ಇದ್ದರೆ ಮಾತ್ರ ಮುಂದಕ್ಕೆ ಬರಲು ಸಾಧ್ಯ. ಮಕ್ಕಳಿಗೆ ಮನೆಯಲ್ಲಿಯೇ, ಮಾತೃಭಾಷೆ, ಸಂಸ್ಕೃತಿ ಕಲಿಸುವಂತಾಗಬೇಕೆAದರು. ಪದ್ಧತಿ - ಆಚರಣೆಯಲ್ಲಿ ಪ್ರದೇಶಗಳಿಗೆ ಸಂಬAಧಿಸಿದAತೆ ವಿಭಿನ್ನತೆಯಿದೆ. ಈ ಬಗ್ಗೆ ಚರ್ಚೆಯಾಗಬೇಕು ಎಲ್ಲಾ ಮುಖ್ಯಸ್ಥರನ್ನು ಸೇರಿಸಿ ಶಿಬಿರ ಮಾಡಿ ಎಲ್ಲಾ ಕಡೆಗಳಲ್ಲಿಯೂ ಒಂದೇ ರೀತಿಯ ಆಚರಣೆಯಾಗಬೇಕೆಂದು ಅಭಿಪ್ರಾಯಪಟ್ಟರು. ಪ್ರಸ್ತುತ ಯುವ ಬರಹಗಾರರು ಬೆಳಕಿಗೆ ಬರುತ್ತಿದ್ದು, ಬರೆಯುವ ಮುನ್ನ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಕೃಷಿ - ಅಡುಗೆ ಕಲಿಯಿರಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂರ್ನಾಡು ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಹರೀಶ್ ಮಾತನಾಡಿ, ಈ ಶಿಬಿರ ಸಾರ್ಥಕವಾಗಿದ್ದು, ಇದರಿಂದ ಸಾಕಷ್ಟು ಕಲಿತಿದ್ದಾರೆ. ಸಂಪನ್ಮೂಲ ವ್ಯಕ್ತಿಗಳು ಗುರುಗಳ ರೀತಿ ಕಲಿಸಿದ್ದಾರೆ. ಯುವ ಪೀಳಿಗೆ ನಮ್ಮ ಶಾಸ್ತç, ಪದ್ಧತಿಗಳನ್ನು ಕಲಿಯಬೇಕಿದೆ. ಜೊತೆಗೆ ಕೃಷಿ ಚಟುವಟಿಕೆಯನ್ನು ಕಲಿತುಕೊಳ್ಳ ಬೇಕೆಂದು ಕಿವಿಮಾತು ಹೇಳಿದರು. ಅಲ್ಲದೆ ಮಹಿಳೆಯರು, ಯುವತಿಯರು ಕೂಡ ನಮ್ಮ ಸಾಂಪ್ರದಾಯಿಕ ಅಡುಗೆ, ತಿನಿಸುಗಳನ್ನು ಮಾಡುವದನ್ನು ಕಲಿಯಬೇಕೆಂದು ಸಲಹೆ ಮಾಡಿದರು.

ತುಪ್ಪ ಚೆಂಬು ಕಟ್ಟುವ ಸ್ಪರ್ಧೆ

ಇದೇ ಸಂದರ್ಭದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳ ಪೈಕಿ ಯುವತಿಯರಿಗೆ ತುಪ್ಪದ ಚೆಂಬು ಕಟ್ಟುವ ಸ್ಪರ್ಧೆ ಏರ್ಪಡಿಸಿದ್ದು ವಿಶೇಷವಾಗಿತ್ತು. ಅದರಲ್ಲೂ ಒಂದೇ ಕುಟುಂಬದ ಪುಟ್ಟ ಬಾಲಕಿ ಸೇರಿದಂತೆ ಮೂವರು ಬಹುಮಾನ ಪಡೆದುಕೊಂಡಿರುವರು. ದೇರಜೆ ಹನಿ ಗಿರೀಶ್ ಪ್ರಥಮ, ದೇರಜೆ ಚರಿಷ್ಮ ದ್ವಿತೀಯ, ಪುಟಾಣಿ ದೇರಜೆ ಭವಿಷ್ಯ ತೃತೀಯ ಸ್ಥಾನ ಪಡೆದುಕೊಂಡರು.

ಅಕಾಡೆಮಿ ಸದಸ್ಯೆ ಕಾರ್ಯ ಕ್ರಮದ ಸಂಯೋಜಕಿ ಚೊಕ್ಕಾಡಿ ಪ್ರೇಮಾರಾಘವಯ್ಯ, ಅಕಾಡೆಮಿ ಸದಸ್ಯೆ ಬೈತಡ್ಕ ಜಾನಕಿ ಬೆಳ್ಯಪ್ಪ, ಗೌಡ ಸಮಾಜದ ಉಪಾಧ್ಯಕ್ಷ ತೆಕ್ಕಡೆ ಪ್ರಸನ್ನ ವ್ಯವಸ್ಥಾಪಕ ಮೇರ್ಕಜೆ ಲೋಹಿತ್, ಇತರರು ಕಾರ್ಯ ಕ್ರ‍್ರಮದಲ್ಲಿ ಪಾಲ್ಗೊಂಡಿದ್ದರು.

ಉಪನ್ಯಾಸಕಿ, ಗಾಯಕಿ ಬೈಲೆ ಸಹನಾ ಚಂದನ್ ಪ್ರಾರ್ಥಿಸಿದರೆ, ಶಿಕ್ಷಕಿ ಕಲ್ಲುಮುಟ್ಲು ಜಶ್ಮಿಚಿಂತು ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಅಗೋಳಿಕಜೆ ಧನಂಜಯ ನಿರೂಪಿಸಿದರೆ, ಸದಸ್ಯ ಡಾ. ಕೂಡಕಂಡಿ ದಯಾನಂದ ವಂದಿಸಿದರು. - ಸಂತೋಷ್