ಅಫ್ಘಾನ್‌ಗೆ ಆರ್ಥಿಕ ನೆರವಿಲ್ಲ : ಐಎಂಎಫ್
ವಾಷಿAಗ್ಟನ್, ಆ. ೧೯: ಪ್ರಜಾಪ್ರಭುತ್ವ ಸರ್ಕಾರವನ್ನು ಪತನಗೊಳಿಸಿ ಅಧಿಕಾರಕ್ಕೇರಿರುವ ಆಫ್ಘಾನಿಸ್ತಾನದ ನೂತನ ತಾಲಿಬಾನ್ ಸರ್ಕಾರಕ್ಕೆ ಸಧ್ಯಕ್ಕೆ ಸಾಲ ಅಥವಾ ಇತರ ಸಂಪನ್ಮೂಲಗಳ ನೆರವು ನೀಡುವುದಿಲ್ಲ ಎಂದು ಅಂರ‍್ರಾಷ್ಟಿçÃಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ. ಜಗತ್ತಿನ ೧೯೦ ರಾಷ್ಟçಗಳಿಗೆ ಸಾಲ ನೀಡುವ ಸಂಸ್ಥೆ ಐಎಂಎಫ್, ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ಹೊಸ ತಾಲಿಬಾನ್ ಸರ್ಕಾರವು ಸಾಲ ಅಥವಾ ಇತರ ಸಂಪನ್ಮೂಲಗಳ ಪಡೆಯಲು ಅನುಮತಿಸುವುದಿಲ್ಲ ಎಂದು ಹೇಳಿದೆ. ಐಎಂಎಫ್ ಅಂರ‍್ರಾಷ್ಟಿçÃಯ ಸಮುದಾಯದ ಅಭಿಪ್ರಾಯಗಳ ಮೇರೆಗೆ ಈ ಕಠಿಣ ನಿಲುವು ತಳೆದಿರುವುದಾಗಿ ಐಎಂಎಫ್ ಸ್ಪಷ್ಟಪಡಿಸಿದೆ. ಅಫ್ಘಾನಿಸ್ತಾನದಲ್ಲಿ ಸರ್ಕಾರವನ್ನು ಗುರುತಿಸುವ ಬಗ್ಗೆ ಪ್ರಸ್ತುತ ಅಂರ‍್ರಾಷ್ಟಿçÃಯ ಸಮುದಾಯದಲ್ಲಿ ಸ್ಪಷ್ಟತೆಯ ಕೊರತೆಯಿದೆ, ಇದರ ಪರಿಣಾಮವಾಗಿ ದೇಶವು ಎಸ್‌ಡಿಆರ್ ಅಥವಾ ಇತರ ಐಎಂಎಫ್ ಸಂಪನ್ಮೂಲಗಳ ಬಳಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
೩ ಕೋಟಿಗೂ ಹೆಚ್ಚು ಜನರು ನಿಗದಿತ ಸಮಯದಲ್ಲಿ ಲಸಿಕೆ ಪಡೆದಿಲ್ಲ
ನವದೆಹಲಿ, ಆ. ೧೯: ೩.೮೬ ಕೋಟಿಗೂ ಹೆಚ್ಚು ಜನರು ನಿಗದಿತ ಸಮಯದಲ್ಲಿ ತಮ್ಮ ಎರಡನೇ ಡೋಸ್ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆ ಪಡೆದಿಲ್ಲ ಎಂದು ಕೇಂದ್ರ ಸರ್ಕಾರ ಆರ್‌ಟಿಐ ಪ್ರಶ್ನೆಗೆ ಉತ್ತರ ನೀಡಿದೆ. ಕೋವಿನ್ ಪೋರ್ಟಲ್‌ನಲ್ಲಿರುವ ಮಾಹಿತಿಯ ಪ್ರಕಾರ, ಗುರುವಾರ ಮಧ್ಯಾಹ್ನದ ವೇಳೆಗೆ ೪೪,೨೨,೮೫,೮೫೪ ಜನರು ತಮ್ಮ ಮೊದಲ ಡೋಸ್ ಪಡೆದಿದ್ದಾರೆ, ಆದರೆ ೧೨,೫೯,೦೭,೪೪೩ ಜನರು ತಮ್ಮ ಎರಡನೇ ಡೋಸ್ ತೆಗೆದುಕೊಂಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ರಮಣ್ ಶರ್ಮಾ ಅವರು ಮಾಹಿತಿ ಹಕ್ಕು ಕಾಯಿದೆಯಡಿ (ಕೋವಿಶೀಲ್ಡ್ ಮತ್ತು ಕೋವಾಕ್ಸಿನ್) ಮೊದಲ ಡೋಸ್ ಲಸಿಕೆಗಳನ್ನು ಪಡೆದ ಜನ ಸಂಖ್ಯೆಯ ವಿವರ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಕೇಂದ್ರ ಆರೋಗ್ಯ ಸಚಿವಾಲಯದ ಕೋವಿಡ್-೧೯ ಲಸಿಕೆ ಆಡಳಿತ ಕೋಶ ಉತ್ತರ ನೀಡಿದೆ.
ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿಗೆ ಕೋರ್ಟ್ ಷರತ್ತುಬದ್ಧ ಅನುಮತಿ
ನವದೆಹಲಿ, ಆ. ೧೯: ಮಾಜಿ ಸಚಿವ ಮತ್ತು ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿಗೆ ಅವರಿಗೆ ಕರ್ನಾಟಕ ಮತ್ತು ಆಂಧ್ರಪ್ರದೇಶ ಜಿಲ್ಲೆಗಳಲ್ಲಿ ಎಂಟು ವಾರಗಳ ಕಾಲ ಉಳಿಯಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ. ಹಿಂದಿನ ಸಂದರ್ಭದಲ್ಲಿ ಬಳ್ಳಾರಿಗೆ ಭೇಟಿ ನೀಡಿದಾಗ ರೆಡ್ಡಿ ಅವರು ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ ಎಂಬುದನ್ನು ಪರಿಗಣಿಸಿದ ನ್ಯಾಯಪೀಠ, ರೆಡ್ಡಿ ಅವರ ಉತ್ತಮ ನಡತೆಯ ಆಧಾರದ ಮೇಲೆ ಸುಪ್ರೀಂಕೋರ್ಟ್ ತೀರ್ಪು ನೀಡಿತು. ಈ ಪ್ರಕರಣದ ವಿಚಾರಣೆ ಇನ್ನೂ ಆರಂಭಗೊAಡಿಲ್ಲ. ಅರ್ಜಿದಾರರು ಬಳ್ಳಾರಿಗೆ ಭೇಟಿ ನೀಡಿದಾಗ ಯಾವುದೇ ಜಾಮೀನು ಷರತ್ತನ್ನು ಉಲ್ಲಂಘಿಸಿಲ್ಲ. ಪ್ರಕರಣದ ಈ ಸಂಗತಿಗಳು ಮತ್ತು ಸನ್ನಿವೇಶಗಳನ್ನು ನೋಡಿದರೆ, ಜಾಮೀನು ಆದೇಶವನ್ನು ಮಾರ್ಪಡಿ ಸುವಂತೆ ನಿರ್ದೇಶಿಸಿದೆ ಎಂದು ನ್ಯಾಯಮೂರ್ತಿಗಳಾದ ವಿನೀತ್ ಸರನ್ ಮತ್ತು ದಿನೇಶ್ ಮಹೇಶ್ವರಿ ಹೇಳಿದರು. ಇದರೊಂದಿಗೆ, ಬಳ್ಳಾರಿ (ಕರ್ನಾಟಕ), ಕಡಪ ಮತ್ತು ಅನಂತಪುರ (ಆಂಧ್ರ ಪ್ರದೇಶ) ಜಿಲ್ಲೆಗಳಿಗೆ ಭೇಟಿ ನೀಡಲು ಮತ್ತು ಉಳಿದುಕೊಳ್ಳಲು ರೆಡ್ಡಿಗೆ ಅನುಮತಿ ನೀಡಲಾಗಿದೆ. ೨೦೧೫ರ ಜ. ೨೦ ರಂದು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು, ಆದರೆ ಈ ಜಿಲ್ಲೆಗಳಿಗೆ ಭೇಟಿ ನೀಡದಂತೆ ಷರತ್ತು ವಿಧಿಸಿತ್ತು. ರೆಡ್ಡಿ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ, ಸಿಬಿಐ ತನ್ನ ತನಿಖೆಯನ್ನು ಪೂರ್ಣಗೊಳಿಸಿದ್ದರಿಂದ ತನ್ನ ಕಕ್ಷಿದಾರನ ಮೇಲೆ ಹೇರಲಾಗಿರುವ ನಿರ್ಬಂಧಗಳನ್ನು ತೆರವುಗೊಳಿಸಬೇಕು ಮಾಡಬೇಕು ಎಂದು ಹೇಳಿದರು.
ಸುಧಾರಿತ ಚಾಫ್ ಟೆಕ್ನಾಲಜಿ ಅಭಿವೃದ್ಧಿ
ನವದೆಹಲಿ, ಆ. ೧೯: ಭಾರತೀಯ ಯುದ್ಧ ವಿಮಾನಗಳನ್ನು ರೆಡಾರ್ ಅಪಾಯದಿಂದ ರಕ್ಷಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸುಧಾರಿತ ಚಾಫ್ ಟೆಕ್ನಾಲಜಿ(ಎಸಿಟಿ)ಯನ್ನು ಅಭಿವೃದ್ಧಿಪಡಿಸಿದೆ. ಜೋಧ್‌ಪುರದ ರಕ್ಷಣಾ ಪ್ರಯೋಗಾಲಯ, ಡಿಆರ್‌ಡಿಓ, ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೊರೇಟರಿ (ಹೆಚ್‌ಇಎಂ ಆರ್‌ಎಲ್) ಸಹಯೋಗದೊಂದಿಗೆ ಸುಧಾರಿತ ಚಾಫ್ ಮೆಟೀರಿಯಲ್ ಮತ್ತು ಚಾಫ್ ಕಾರ್ಟ್ರಿಡ್ಜ್-೧೧೮/ಐ ಅಭಿವೃದ್ಧಿಪಡಿಸಲಾಗಿದೆ. ಡಿಆರ್‌ಡಿಒನ ಈ ಪ್ರಯತ್ನವನ್ನು ಶ್ಲಾಘಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಇದು ಸ್ವಾವಲಂಬಿ ಭಾರತದ ಮತ್ತೊಂದು ದಿಟ್ಟ ಹೆಜ್ಜೆ ಎಂದಿದ್ದಾರೆ. ಇದು ಭಾರತೀಯ ವಾಯುಪಡೆಯು, ಯಶಸ್ವಿ ಬಳಕೆದಾರ ಪ್ರಯೋಗಗಳನ್ನು ಪೂರ್ಣಗೊಳಿಸಿದ ನಂತರ ಈ ತಂತ್ರಜ್ಞಾನವನ್ನು ಪರಿಚಯಿಸುವ ಪ್ರಕ್ರಿಯೆಯನ್ನು ಆರಂಭಿಸಲಿದೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಸೇನಾಧಿಕಾರಿ ಹುತಾತ್ಮ
ಜಮ್ಮು, ಆ. ೧೯: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಎನೌಕೌಂಟರ್‌ನಲ್ಲಿ ಸೇನೆಯ ಕಿರಿಯ ನಿಯೋಜಿತ ಅಧಿಕಾರಿ (ಜೆಸಿಒ) ಹುತಾತ್ಮರಾಗಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಭದ್ರತಾ ಪಡೆಗಳು ಥನಮಂಡಿ ಬೆಲ್ಟ್ನಲ್ಲಿ ಭಯೋತ್ಪಾದಕರು ಅಡಗಿರುವ ಮಾಹಿತಿ ಪಡೆದ ನಂತರ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆ ಎನೌಕೌಂಟರ್ ಆಗಿ ಬದಲಾಯಿತು. ಪ್ರತಿದಾಳಿಯಲ್ಲಿ ಸೇನಾಧಿಕಾರಿ ಹುತಾತ್ಮರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ಗುಂಡೇಟಿನಿAದ ಗಾಯಗೊಂಡಿದ್ದ ರಾಷ್ಟಿçÃಯ ರೈಫಲ್ಸ್ನ ಜೆಸಿಒ ಅವರನ್ನು ತಕ್ಷಣವೇ ಹತ್ತಿರದ ವೈದ್ಯಕೀಯ ಸೌಲಭ್ಯಕ್ಕೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಜಮ್ಮುವಿನ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ಅವರು ಹೇಳಿದ್ದಾರೆ. ಈ ವರ್ಷ ಆಗಸ್ಟ್ನಲ್ಲಿ ಈ ಪ್ರದೇಶದಲ್ಲಿ ನಡೆದ ಎರಡನೇ ಎನೌಕೌಂಟರ್ ಇದಾಗಿದ್ದು, ಆಗಸ್ಟ್ ೬ ರಂದು, ಇಬ್ಬರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಉಗ್ರರನ್ನು ಥನಮಂಡಿ ಬೆಲ್ಟ್ನಲ್ಲಿ ಭದ್ರತಾ ಪಡೆಗಳು ಎನ್‌ಕೌಂಟರ್ ಮಾಡಿದ್ದರು.