ಇಂದು ರಾಜೀವ್ ಗಾಂಧಿ ಜನ್ಮದಿನ
"ಮಿಸ್ಟರ್ ಪ್ರೆöÊಮ್ ಮಿನಿಸ್ಟರ್, ಪ್ಲೀಸ್ ಮೀಟ್ ಅವರ್ ಜನರಲ್’’ ಎಂದು ನೇರವಾಗಿ ಭಾರತದ ಪ್ರಧಾನಿಗಳಾಗಿದ್ದ ರಾಜೀವ್ ಗಾಂಧಿಯವರಿಗೆ ಕಾಂಗ್ರೆಸ್ ಮುಖಂಡ ಮಿಟ್ಟು ಚಂಗಪ್ಪನವರು ಹೇಳಿದಾಗ ಜೊತೆಯಲ್ಲಿ ಇದ್ದ ಅಂದಿನ ಕೇಂದ್ರ ವಿತ್ತ ಸಚಿವ ಜನಾಧÀðನ ಪೂಜಾರಿ ಒಂದು ಕ್ಷಣ ಕಸಿವಿಸಿಗೊಳ್ಳುತ್ತಾರೆ. ಆದರೆ ಮಿಟ್ಟು ಚಂಗಪ್ಪನವರ ಮತ್ತು ರಾಜೀವ್ಗಾಂಧಿಯವರ ಆತ್ಮೀಯತೆಯ ಬಗ್ಗೆ ಅರಿವಿದ್ದ ಅಂದಿನ ಮಡಿಕೇರಿ ಪುರಸಭೆಯ ಅಧ್ಯಕ್ಷರಾಗಿದ್ದ ಕೆ. ಎಸ್. ದೇವಯ್ಯ ನವರಿಗೆ ಇದು ಸಹಜವಾಗಿ ಕಾಣಿಸುತ್ತದೆ.
ಘಟನೆ ನಡೆದಿದ್ದು ೧೯೮೫ ರ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಹೆಲಿಕಾಪ್ಟರ್ನಲ್ಲಿ ಮಡಿಕೇರಿಗೆ ಬಂದು ಸೀನಿಯರ್ ಕಾಲೇಜು (ಈಗಿನ ಎಫ್.ಎಂ.ಸಿ ಕಾಲೇಜು) ಮೈದಾನದಲ್ಲಿ ರಾಜೀವ್ ಗಾಂಧಿಯವರು ಹೆಲಿಕಾಪ್ಟರ್ನಿಂದ ಇಳಿದಾಗ ಜಗತ್ತೇ ನಿಬ್ಬೆರಗುಗೊಳಿಸಿದ ವ್ಯಕ್ತಿತ್ವ ರಾಜೀವ್ ಗಾಂಧಿಯವರದ್ದು. ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡ ಅಲ್ಪಾವಧಿಯಲ್ಲಿಯೇ ಅಪಾರ ಸಾಧನೆ ಮಾಡಿದವರು.ಅವರು ಮಡಿಕೇರಿಗೆ ಬಂದಾಗ ಶಿಸ್ತಿನ ಸಿಪಾಯಿ ದೇಶದ ಹೆಮ್ಮೆಯ ಪುತ್ರ ಜನರಲ್ ಕಾರ್ಯಪ್ಪನವರು ಅವರನ್ನು ಭೇಟಿ ಮಾಡಲು ಹೆಲಿಪ್ಯಾಡಿಗೆ ಬರುತ್ತಾರೆ. ಸಮಯ ಪಾಲನೆಯಲ್ಲಿ ಕಾರ್ಯಪ್ಪನವರು ಯಾವತ್ತೂ ಲೋಪ ಮಾಡಿರಲಿಲ್ಲ. ಆದರೆ ಪ್ರಧಾನಿಯವರೇ ಕೆಲವು ನಿಮಿಷ ಮೊದಲು ಬಂದಿದ್ದರು. ಮಿಟ್ಟು ಚಂಗಪ್ಪನವರು ಹೆಲಿಕಾಪ್ಟರ್ ಇಳಿದ ತಕ್ಷಣವೇ ರಾಜೀವ್ರವರಿಗೆ ಕೊಡಗಿನ ಸಾಂಪ್ರದಾಯಿಕ ಪೇಟ (ಮಂಡೆತುಣಿ) ತೊಡಿಸಿ ಸ್ವಾಗತಿಸುತ್ತಾರೆ. ಅಂದಿನ ಪುರಸಭೆ ಅಧ್ಯಕ್ಷರಾಗಿದ್ದ ಕೆ. ಎಸ್. ದೇವಯ್ಯ ನವರು ಮಡಿಕೇರಿಯ ಎಲ್ಲಾ ಪುರಸಭಾ ಸದಸ್ಯರೊಂದಿಗೆ ಅವರನ್ನು ಬರಮಾಡಿಕೊಳ್ಳುತ್ತಾರೆ. ನಂತರ ಕಾರಿನೆಡೆಗೆ ಪ್ರಧಾನಿಗಳು ತೆರಳಬೇಕು. ಸುಮಾರು ಅರವತ್ತು ಮೀಟರ್ ದೂರದಲ್ಲಿ ಒಬ್ಬರೇ ಬರುತ್ತಿರುವ ಕಾರ್ಯಪ್ಪನವರನ್ನು, ಕಂಡ ಮಿಟ್ಟು ಚಂಗಪ್ಪನವರು ಪ್ರಧಾನಿಗಳಿಗೆ ಮೇಲಿನ ಮಾತನ್ನು ಹೇಳುತ್ತಾರೆ.
ಮುಂದೆ ನಡೆದದ್ದು ಅದ್ಬುತ ! ದೇಶದ ಪ್ರಧಾನಿಗಳು ತಮ್ಮ ಶಿಷ್ಟಾಚಾರವನ್ನು ಬದಿಗಿರಿಸಿ ಭಾರತಾಂಬೆಯ ಹೆಮ್ಮೆಯ ಪುತ್ರನ ಬಳಿ ತಾವೇ ಸ್ವತಃ ನಡೆದುಕೊಂಡು ಹೋಗುತ್ತಾರೆ. ಹಸ್ತ ಲಾಘವ ಮಾಡಿ ಕ್ಷೇಮ ವಿಚಾರಿಸುತ್ತಾರೆ. ಮಿಟ್ಟು ಚಂಗಪ್ಪನವರು ರಾಜೀವ್ರವರಿಗೆ ಜನರಲ್ ಕಾರ್ಯಪ್ಪನವರನ್ನು ಹಿಂದೆ ಭೇಟಿ ಮಾಡಿದ ಬಗ್ಗೆ ವಿಚಾರಿಸಿದಾಗ “ಇಲ್ಲಾ ಆದರೆ ಇವರ ಸಾಧನೆ ಬಗ್ಗೆ ತಿಳಿದಿದ್ದೀನಿ” ಎಂದು ತಿಳಿಸುತ್ತಾರೆ. ಅಲ್ಲಿಯೇ ಮಿಟ್ಟು ಚಂಗಪ್ಪನವರು ಕಾರ್ಯಪ್ಪ ನವರು ಈ ದೇಶದ ಮೂರುಪಡೆಗಳಾದ ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆಯ ಮಹಾದಂಡನಾಯಕರಾಗಿದ್ದ ಏಕೈಕ ಸೇನಾಧಿಕಾರಿ, ಇವರಿಗೆ ನ್ಯಾಯವಾಗಿ ಫೀಲ್ಡ್ ಮಾರ್ಷಲ್ ಪದವಿ ಮೊದಲು ಸಲ್ಲಬೇಕಿತ್ತು. ಆದರೆ ಸಿಗಲಿಲ್ಲ. ಆದ್ದರಿಂದ ನಮಗೆಲ್ಲರಿಗೂ ಬೇಸರವಿದೆ ಎಂದು ವಿವರಿಸುತ್ತಾರೆ. ರಾಜೀವ್ ಗಾಂಧಿಯವರು ಜನರಲ್ ಕಾರ್ಯಪ್ಪನವರಿಗೆ ವಂದಿಸಿ ಸಾಯಿಹಾಕಿ ಮೈದಾನದಲ್ಲಿ ಆಯೋಜಿಸಿದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿ ಬೆಂಗಳೂರಿಗೆ ತೆರಳುತ್ತಾರೆ. ನಂತರ ರಾಜ್ಯದ ಹಲವು ಕಡೆ ಚುನಾವಣಾ ಪ್ರಚಾರ ಸಭೆ ನಡೆದು ಅವರು ದೆಹಲಿಗೆ ಹೋಗುತ್ತಾರೆ . ಕಾರ್ಯಪ್ಪನವರ ಸೇವೆ ಶಿಸ್ತು, ದೇಶಭಕ್ತಿಯ ಬಗ್ಗೆ ಅರಿತಿದ್ದ ರಾಜೀವ್ರವರು ಅವರಿಗೆ ಸಂಬAಧಿಸಿದ ಕಡತಗಳನ್ನು ತರಿಸುತ್ತಾರೆ. ಮಿಟ್ಟು ಚಂಗಪ್ಪನವರು ವಿವರಿಸಿದ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿ ಫೀಲ್ಡ್ ಮಾರ್ಷಲ್ ಪದವಿಯನ್ನು ಒಂದು ವರ್ಷದೊಳಗಾಗಿ ೧೯೮೬ ರಲ್ಲಿ ಘೋಷಿಸುತ್ತಾರೆ. ನ್ಯಾಯವಾಗಿ ಯಾರಿಗೆ ಅದು ಸಲ್ಲಬೇಕಾಗಿತ್ತು, ಅವರಿಗೆ ಸಲ್ಲಿಸುವಲ್ಲಿ ಸಫಲರಾಗುತ್ತಾರೆ. ಕಾರ್ಯಪ್ಪನವರು ಸೈನ್ಯದ ಮಹೋನ್ನತ ಗೌರವವಾದ ಫೀಲ್ಡ್ ಮಾರ್ಷಲ್ ಪದವಿ ಪಡೆದಿದ್ದರಿಂದ ಆ ಪದವಿಯ ಗಾಂಭೀರ್ಯ ಮತ್ತಷ್ಟು ಹೆಚ್ಚಾಗಿದೆ ಎಂದರೂ ಅತಿಶಯೋಶಕ್ತಿ ಎಂದೆನಿಸುವುದಿಲ್ಲ ಎಂಬುದು ಎಲ್ಲಾ ಭಾರತೀಯರ ಅಂಬೋಣ.
ರಾಜೀವ್ ಗಾಂಧಿಯವರ ಕಾರ್ಯವೈಖರಿ ಹಾಗಿತ್ತು .ಪ್ರತಿಯೊಂದು ವಿಚಾರವನ್ನು ಸೂಕ್ಷö್ಮವಾಗಿ ಅವಲೋಕಿಸುತ್ತಿದ್ದರು. ಎಲ್ಲವನ್ನೂ ದೆಹಲಿಯ ತಮ್ಮ ಕಛೇರಿಯಲ್ಲಿ ಅನುಭವಿಗಳೊಂದಿಗೆ ಚರ್ಚಿಸುತ್ತಿದ್ದರು. ತಜ್ಞರ ಸಲಹೆ ಪಡೆಯುತ್ತಿದ್ದರು. ಈ ದೂರದೃಷ್ಟಿಯಿಂದಲೇ ಅವರು ತಾಂತ್ರಿಕ ತಜ್ಞ ಸ್ಯಾಮ್ ಪಿತ್ರಾಡೋರವರನ್ನು ದೇಶಕ್ಕೆ ಕರೆ ತಂದು ಭಾರತವನ್ನು ಮಾಹಿತಿ ತಂತ್ರಜ್ಞಾನದ ಆಗರವಾಗಿಸಿದರು. ರಾಜೀವ್ ಗಾಂಧಿಯವರ ಕೊಡುಗೆಗಳು ಅಪಾರ. ಕುಡಿಯುವ ನೀರು, ಉತ್ತಮ ಗುಣಮಟ್ಟದ ಆಹಾರ, ಸುಧಾರಿತ ಶಿಕ್ಷಣ, ಆರೋಗ್ಯ ಕ್ಷೇತ್ರದ ಆಧುನೀಕರಣ ಹೀಗೆ ಹಲವಾರು ತಾಂತ್ರಿಕ ಮಿಷನ್ಗಳನ್ನು ಜಾರಿಗೆ ತಂದು ಭಾರತವನ್ನು ಮುಂದುವರಿದ ರಾಷ್ಟ್ರದ ಸಾಲಿನಲ್ಲಿ ನಿಲ್ಲಿಸಿದರು. ಬ್ಯಾಂಕಿAಗ್ ವ್ಯವಸ್ಥೆಯ ಡಿಜಿಟಲೀಕರಣ, ಟೆಲಿಕಾಂ ಕ್ಷೇತ್ರದಲ್ಲಿ ಅಭಿವೃದ್ಧಿ ಮುಂತಾದವುಗಳಿAದ ಭಾರತವು ವಿಶ್ವಗುರುವಿನ ಸ್ಥಾನ ಪಡೆಯಿತು. ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತಂದು ಆಯಾರಾಮ್, ಗಯಾರಾಮ್ ಸಂಸ್ಕೃತಿಗೆ ತಿಲಾಂಜಲಿ ಇತ್ತರು. ಯುವಕರ ಬಗ್ಗೆ ಅಪಾರ ನಂಬಿಕೆಯಿರಿಸಿದ್ದ ರಾಜೀವ್ ಗಾಂಧಿಯವರು ಯುವ ಶಕ್ತಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂಬುದನ್ನು ಮನಗಂಡು ಮತದಾನದ ಹಕ್ಕನ್ನು ೨೧ ವರ್ಷದಿಂದ ೧೮ ವರ್ಷಕ್ಕೆ ಇಳಿಸಿ ಯುವ ಸಮೂಹಕ್ಕೆ ದೇಶ ನಿರ್ಮಾಣದ ಜವಾಬ್ದಾರಿ ನೀಡಿದರು. ಒಬ್ಬ ಪ್ರಧಾನಿ, ಐನೂರು ಸಂಸದರು, ಐದು ಸಾವಿರ ಶಾಸಕರಿಂದ ಈ ದೇಶದ ೧೦೦ ಕೋಟಿ ಜನರನ್ನು ಆಳಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು ಗ್ರಾಮಕ್ಕೊಬ್ಬ ಪ್ರಧಾನಿ ಬೇಕು ಎಂಬ ಚಿಂತನೆಯೊAದಿಗೆ ಪಂಚಾಯತ್ ರಾಜ್ ವ್ಯವಸ್ಥೆ ಬುನಾದಿ ಹಾಕಿದರು. ಇದರಿಂದ ಮಹಿಳೆಯರು ದಲಿತರು, ಶೋಷಿತರು, ಹಿಂದುಳಿದ ವರ್ಗದವರು ಸೇರಿದಂತೆ ೩೦ ಲಕ್ಷಕ್ಕೂ ಅಧಿಕ ಮಂದಿ ಪ್ರತಿ ೫ ವರ್ಷಗಳಲ್ಲಿ ಜನಪ್ರತಿನಿಧಿಗಳಾಗಿ ಅಧಿಕಾರ ಚಲಾಯಿಸುವಂತಾಯಿತು. ಅಧಿಕಾರದ ವಿಕೇಂದ್ರೀಕರಣದ ಮೂಲಕ ಭಾರತವು ಸ್ವಾವಲಂಭಿ ರಾಷ್ಟçವಾಗಲು ರಾಜೀವ್ ಗಾಂಧಿಯವರ ಯೋಜನೆಗಳೂ ಮೂಲ ಕಾರಣವಾಗಿವೆ. ಇಂತಹ ಮಹಾನ್ ಚೇತನ ೧೯೯೧ರ ಮೇ. ೨೧ ರಂದು ತಮಿಳುನಾಡಿನ ಶ್ರೀ ಪೆರಂಬದೂರಿನಲ್ಲಿ ಎಲ್.ಟಿ.ಟಿ.ಇ. ಧಾಳಿಗೆ ಹುತಾತ್ಮರಾದಾಗ ಅವರಿಗೆ ಕೇವಲ ನಲವತ್ತೆಂಟು ವರ್ಷಗಳು. ಅವರ ಆಪ್ತ ವಲಯದಲ್ಲಿ ಭದ್ರತಾ ದೃಷ್ಟಿಯಿಂದ ತಮಿಳುನಾಡು ಪ್ರವಾಸ ಬೇಡ ಎಂಬ ಸಲಹೆ ಇದ್ದರೂ "ನಾನು ಈ ದೇಶದ ಪ್ರಧಾನಿಯಾಗಿದ್ದವನು. ಮುಂದಕ್ಕೆ ದೇಶದ ಪ್ರಧಾನಿಯಾಗಲು ಹೊರಟವನು. ನನ್ನ ದೇಶದ ಜನರನ್ನು ನಾನೇ ನಂಬದಿದ್ದರೆ ಅದು ಆತ್ಮವಂಚನೆಯಾಗುತ್ತದೆ" ಎಂದು ತೀರ್ಮಾನಿಸಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದನ್ನು ನೆನೆÀಸಿದಾಗ ಮನಸ್ಸು ಮಮ್ಮಲ ಮರುಗುತ್ತದೆ.
ಕೊನೆ ಹನಿ: ಅಂದು ಕಾರ್ಯಪ್ಪನವರಿಗೆ ಅರ್ಹತೆಯ ಆಧಾರದಲ್ಲಿ ಫೀಲ್ಡ್ ಮಾರ್ಷಲ್ ಪದವಿಯನ್ನು ಕೊಡಲೇಬೇಕೆಂದು ನೇರವಾಗಿ ದೇಶದ ಪ್ರಧಾನ ಮಂತ್ರಿಗಳಿಗೆ ಒತ್ತಾಯ ಮಾಡಲು ಮಿಟ್ಟು ಚಂಗಪ್ಪನವರು ಮುಂದಾಗಿ ಯಶಸ್ಸು ಕೂಡ ಕಂಡರು. ಇಂದು ಅರ್ಹತೆಯ ಆಧಾರದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರಿಗೆ ಮರಣೋತ್ತರ ಭಾರತ ರತ್ನ ನೀಡಬೇಕು ಎಂಬ ಕೂಗು ಎಲ್ಲೆಡೆ ಕೇಳಿಸುತ್ತಿದೆ. ಇದನ್ನು ದೆಹಲಿ ದೊರೆಗಳಿಗೆ ತಲುಪಿಸುವವರಾರು? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು ಎಂಬುದು ಯಕ್ಷ ಪ್ರಶ್ನೆ.
-ತೆನ್ನೀರ ಮೈನಾ, ಅಧ್ಯಕ್ಷರು,
ರಾಜೀವ್ ಗಾಂಧಿ ಪಂಚಾಯತ್ ರಾಜ್
ಸಂಘಟನೆ, ಕೊಡಗು ಜಿಲ್ಲೆ.