ಮಡಿಕೇರಿ, ಆ. ೧೮: ಕೊಡಗು ಜಿಲ್ಲಾ ಎಲ್ಲಾ ಹಂತದ ನ್ಯಾಯಾಲಯದಲ್ಲಿ ತಾ. ೧೪ ಮತ್ತು ೧೬ ರಂದು ನಡೆದ ಮೆಗಾಲೋಕ್ ಅದಾಲತ್ನಲ್ಲಿ ೭,೯೪೫ ಪ್ರಕರಣಗಳಲ್ಲಿ ೨,೬೨೭ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್. ಸುಬ್ರಮಣ್ಯ ಅವರು ತಿಳಿಸಿದ್ದಾರೆ.
ನ್ಯಾಯಾಲಯದಲ್ಲಿ ಬಾಕಿ ಇರುವ ರಾಜಿಯಾಗಬಲ್ಲ ಅಪರಾಧಿ ಪ್ರಕರಣಗಳು ಚೆಕ್ಕು ಅಮಾನ್ಯದ ಪ್ರಕರಣಗಳು ಆರ್ಥಿಕ ವಸೂಲಾತಿ ಪ್ರಕರಣಗಳು, ಮೋಟಾರ್ ಅಪಘಾತ ಪರಿಹಾರದ ನ್ಯಾಯಾಧೀಕರಣ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು ಸೇರಿದಂತೆ ಕಾರ್ಮಿಕ ವಿವಾದಗಳು ಹಾಗೂ ಕೈಗಾರಿಕಾ ಕಾರ್ಮಿಕ ವೇತನಕ್ಕೆ ಸೇರಿದ ಕ್ಲೇಮುಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ವೈವಾಹಿಕ/ ಕುಟುಂಬ ನ್ಯಾಯಾಲಯ ಪ್ರಕರಣಗಳು ಭೂ ಸ್ವಾಧೀನ ಪ್ರಕರಣಗಳು, ಕಂದಾಯ ಪ್ರಕರಣಗಳು, ಸಿವಿಲ್ ಪ್ರಕರಣಗಳು ಸೇರಿದಂತೆ ೭,೧೨೩ ಪ್ರಕರಣಗಳಲ್ಲಿ ೨,೧೧೨ ಪ್ರಕರಣಗಳು ಇತ್ಯರ್ಥಗೊಂಡು ಸುಮಾರು ರೂ. ೪.೬ ಕೋಟಿ ವಸೂಲಿಯಾಗಿದೆ ಎಂದು ಅವರು ತಿಳಿಸಿದರು.
ವ್ಯಾಜ್ಯ ಪೂರ್ವ ೮೨೨ ಪ್ರಕರಣಗಳಲ್ಲಿ ೫೧೫ ಪ್ರಕರಣಗಳು ಇತ್ಯರ್ಥಗೊಂಡು ರೂ. ೧.೨೭ ಕೋಟಿ ವಸೂಲಾತಿ ಆಗಿದೆ. ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಪ್ರಮುಖವಾಗಿ ಚೆಕ್ಕು ಅಮಾನ್ಯ ಸೇರಿದಂತೆ ಇತರ ಪ್ರಕರಣಗಳು ಒಳಗೊಂಡಿದೆ.
ಲೋಕ್ ಅದಾಲತ್ನಲ್ಲಿ ಬ್ಯಾಂಕ್ಗೆ ಸಂಬAಧಿಸಿದAತೆ ಹೆಚ್ಚಿನ ಪ್ರಕರಣಗಳು ಸಲ್ಲಿಕೆಯಾಗಿದ್ದವು. ವಕೀಲರು, ಕಕ್ಷಿದಾರರು, ಕಂದಾಯ, ಪೊಲೀಸ್, ಬ್ಯಾಂಕ್, ಹೀಗೆ ಹಲವರ ಸಹಕಾರದಿಂದ ಮೆಗಾಲೋಕ್ ಅದಾಲತ್ ಯಶಸ್ವಿಯಾಗಿದೆ ಎಂದು ಎನ್. ಸುಬ್ರಮಣ್ಯ ಅವರು ತಿಳಿಸಿದ್ದಾರೆ.