ಸೋಮವಾರಪೇಟೆ, ಆ. ೧೮: ಸಮೀಪದ ತಾಕೇರಿ ಗ್ರಾಮದ ಕೆ.ಕೆ. ವಿಮಲ ಎಂಬವರ ಪುತ್ರ ಕೆ.ಕೆ. ಶರತ್ ಎಂಬವರು ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಪಟ್ಟಣಕ್ಕೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ ಶರತ್ ಈವರೆಗೆ ಮನೆಗೆ ವಾಪಸ್ ಆಗಿಲ್ಲ. ಸಂಬAಧಿಕರ ಮನೆಗೂ ಹೋಗಿಲ್ಲ. ಈತನನ್ನು ಪತ್ತೆಹಚ್ಚಿಕೊಡುವಂತೆ ತಾಯಿ ವಿಮಲ ಅವರು ದೂರು ನೀಡಿದ್ದಾರೆ. ಈತನ ಬಗ್ಗೆ ಸುಳಿವು ದೊರೆತಲ್ಲಿ ಸೋಮವಾರಪೇಟೆ ಪೊಲೀಸ್ ಠಾಣೆ ದೂ.೦೮೨೭೬ ೨೮೨೦೪೦ಗೆ ಮಾಹಿತಿ ನೀಡುವಂತೆ ಪೊಲೀಸ್ ನಿರೀಕ್ಷಕ ಬಿ.ಜಿ. ಮಹೇಶ್ ಮನವಿ ಮಾಡಿದ್ದಾರೆ.