ಪೊನ್ನAಪೇಟೆ, ಆ.೧೮: ಜೂನ್ ೨೨ ರಂದು ಪೊನ್ನಂಪೇಟೆಯ ಮೊಬೈಲ್ ಅಂಗಡಿಯೊAದರಲ್ಲಿ ಮೊಬೈಲ್ ಗಳನ್ನು ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಪಣಿಯರವರ ಬೋಳ ಎಂಬುವವರ ಪುತ್ರ ಪಣಿಯರವರ ಗೋಪಿ (೧೯) ಎಂಬ ಆರೋಪಿಯನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ.

ಪೊನ್ನAಪೇಟೆ ಮುಖ್ಯ ರಸ್ತೆಯಲ್ಲಿ ಎಸ್ ಬಿ ಐ ಬ್ಯಾಂಕ್ ಸಮೀಪ ಇರುವ ಮೊಬೈಲ್ ಪ್ಲಾನೆಟ್ ಎಂಬ ಅಂಗಡಿಯ ಕಿಟಕಿಯನ್ನು ಮುರಿದು ೧೪ ಸಾವಿರ ಹಾಗೂ ೧೫ ಸಾವಿರ ಬೆಲೆಬಾಳುವ ೨ ರೆಡ್ ಮಿ ಮೊಬೈಲ್ ಗಳು, ರೂ .೭೦೦ ಬೆಲೆಯ ಬ್ಲೂಟೂತ್, ರೂ.೧೦೦೦ ಬೆಲೆಯ ಬ್ಲೂಟೂತ್ ಇಯರ್ ಫೋನ್, ರೂ.೧೦೦೦ ಬೆಲೆ ಬಾಳುವ ಟ್ರಿಮ್ಮರ್ ಸೇರಿದಂತೆ ಒಟ್ಟು ರೂ.೩೧,೭೦೦ ಮೌಲ್ಯದ ವಸ್ತುಗಳು ಕಳ್ಳತನವಾಗಿರುವ ಬಗ್ಗೆ ಅಂಗಡಿ ಮಾಲೀಕ ಟಿ.ಎಸ್. ಶಫೀರ್ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಕಳ್ಳನ ಪತ್ತೆಗಾಗಿ ಬಲೆ ಬೀಸಿದ್ದ ಠಾಣಾಧಿಕಾರಿ ಡಿ.ಕುಮಾರ್ ನೇತೃತ್ವದ ಪೋಲೀಸರ ತಂಡ ಇಂದು ಮಧ್ಯಾಹ್ನ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಶ್ರೀಮಂಗಲದ ನೆಮ್ಮಲೆ ಗ್ರಾಮದ ಚಟ್ಟಂಗಡ ಸೋಮಯ್ಯ ಎಂಬುವವರ ಲೈನ್ ಮನೆಯಲ್ಲಿದ್ದ ಪಣಿಯರವರ ಗೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿ ಕದ್ದ ಮೊಬೈಲ್ ಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವೀರಾಜಪೇಟೆ ತಾಲೂಕು ಡಿ.ವೈ.ಎಸ್.ಪಿ.ಜಯಕುಮಾರ್ ಹಾಗೂ ಗೋಣಿಕೊಪ್ಪಲು ವೃತ್ತನಿರೀಕ್ಷಕ ಜಯರಾಮ್ ಅವರ ಮಾರ್ಗದರ್ಶನ ದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಎಸ್‌ಐ ಗಣಪತಿ, ಸಿಬ್ಬಂದಿಗಳಾದ ಮನು, ಮಹೇಂದ್ರ, ಮಹದೇಶ್ವರ ಸ್ವಾಮಿ, ಸಿಡಿಆರ್ ರಾಜೇಶ್, ಪ್ರಮೋದ್,ಗಿರೀಶ್, ಮಹೇಶ್ ಭಾಗವಹಿಸಿದ್ದರು.