ಮಡಿಕೇರಿ, ಆ.೧೭ : ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್‌ನಲ್ಲಿ ಕೊಡಗು ಜಿಲ್ಲಾ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್‌ನ ವಿದ್ಯಾರ್ಥಿ ಪಿ.ಎಸ್. ನಿಖಿಲ್ ಎರಡು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾನೆ.

ಟಟಮಿ ಫೈಟ್ ಹಾಗೂ ರಿಂಗ್ ಫೈಟ್ ವಿಭಾಗದಲ್ಲಿ ಭಾಗವಹಿಸಿ ೨ ಕಂಚಿನ ಪದಕಕ್ಕೆ ಭಾಜನರಾಗಿರುವ ಈತ ಸಿದ್ದಾಪುರದ ಸುರೇಶ್ ಹಾಗೂ ರೀನಾ ದಂಪತಿಗಳ ಪುತ್ರ.