ಪೊನ್ನಂಪೇಟೆ, ಆ. ೧೭: ೭ನೇ ವರ್ಷದ ನಿಸರ್ಗ ಜೆ.ಸಿ.ಐ. ಕೆಸರುಗದ್ದೆ ಕ್ರೀಡೋತ್ಸವ -೨೦೨೧ರ ಫುಟ್ಬಾಲ್ ಪಂದ್ಯಾವಳಿಯ ಪ್ರಶಸ್ತಿಯನ್ನು ಕುಂಜಿಲ ಟೈಗರ್ ಬಾಯ್ಸ್ ತಂಡ ತನ್ನ ಮುಡಿಗೇರಿಸಿಕೊಂಡು ಸಂಭ್ರಮಿಸಿತು. ಫೈನಲ್ ಪ್ರವೇಶಿಸಿದ ಕಡಂಗ ಸವೆನ್ ಸ್ಟಾರ್ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ಆಶ್ರಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ ಹಾಗೂ ಮಾಯಮುಡಿಯ ಕಾವೇರಿ ಯುವಕ ಸಂಘದ ಸಹಯೋಗದೊಂದಿಗೆ ವಿವಿಧ ಪ್ರಾಯೋಜಕರ ನೆರವಿನಲ್ಲಿ ಕೊಳತೋಡಿನಲ್ಲಿ ನಡೆದ ಕೆಸರುಗದ್ದೆ ಫುಟ್ಬಾಲ್ ಪಂದ್ಯಾವಳಿಯ ಪ್ರಬಲ ಹೋರಾಟದ ಪರಿಣಾಮ ಫೈನಲ್ಸ್ ತಲುಪಿದ ಕುಂಜಿಲ ಟೈಗರ್ ಬಾಯ್ಸ್ ತಂಡ ಅಂತಿಮವಾಗಿ ಎದುರಾಳಿ ತಂಡವನ್ನು ಪೆನಾಲ್ಟಿ ಶೂಟ್‌ಔಟ್‌ನಲ್ಲಿ ೨-೦ ಗೋಲುಗಳಿಂದ ಮಣಿಸಿ ವಿಜಯದ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿತು.

ತೀವ್ರ ಸ್ಪರ್ಧೆಯೊಡ್ಡಿ ವಿನ್ನರ್ಸ್ ಪ್ರಶಸ್ತಿಯ ಕನಸಿನೊಂದಿಗೆ ಫೈನಲ್ಸ್ಗೆ ಬಂದ ಕಡಂಗ ಸವೆನ್ ಸ್ಟಾರ್ ತಂಡ ವಿಜಯದ ಮಾಲೆಯನ್ನು ತನ್ನ ಕೊರಳಿಗೇರಿಸಲು ಎಷ್ಟೇ ಪ್ರಯತ್ನಿಸಿದರೂ ಫಲ ನೀಡಲಿಲ್ಲ. ಆರಂಭದಿAದಲೇ ಸಮಬಲದ ಹೋರಾಟ ನಡೆದ ಫೈನಲ್ಸ್ ಪಂದ್ಯದಲ್ಲಿ ನೀರಿನಲ್ಲಿ ಒದ್ದ ಕಾಲ್ಚೆಂಡು ತಮ್ಮ ನಿಯಂತ್ರಣಕ್ಕೆ ತಕ್ಕಂತೆ ಗುರಿ ಮುಟ್ಟದಿದ್ದರೂ ಪ್ರಯತ್ನಗಳನ್ನು ಮಾತ್ರ ಉಭಯ ತಂಡಗಳು ಮುಂದುವರಿಸುತ್ತಲೇ ಇದ್ದವು. ಕೊನೆಗೆ ಫೀಲ್ಡ್ಗೋಲು ದಾಖಲಾಗದ ಕಾರಣ ಪೆನಾಲ್ಟಿ ಶೂಟ್‌ಔಟ್‌ನಲ್ಲ್ಲಿ ಪಂದ್ಯದ ವಿಜಯ ನಿರ್ಧರಿಸುವುದು ಅನಿವಾರ್ಯವಾಯಿತು. ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ಸ್ನಲ್ಲಿ ಕಡಂಗದ ಸಿಟಿ ಬಾಯ್ಸ್ ತಂಡವನ್ನು ಮಣಿಸಿದ ಕುಂಜಿಲ ಟೈಗರ್ ಬಾಯ್ಸ್ ತಂಡ ಹಾಗೂ ೨ನೇ ಸೆಮಿಪೈನಲ್ಸ್ನಲ್ಲಿ ಬೇತ್ರಿಯ ಎಸ್.ಇ.ಸಿ. ತಂಡವನ್ನು ಮಣಿಸಿದ ಕಡಂಗ ಸವೆನ್ ಸ್ಟಾರ್ ತಂಡ ಫೈನಲ್ಸ್ಗೆ ಅರ್ಹತೆ ಪಡೆದಿತ್ತು. ಕೆಸರುಗದ್ದೆ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬೇತ್ರಿಯ ಸ್ಟನ್ರ‍್ಸ್ ಬಾಯ್ಸ್ ತಂಡದ ಮುಜೀಬ್ ಅತ್ಯುತ್ತಮ ಆಟಗಾರರಾಗಿ ಮೂಡಿಬಂದರು.

ಕೆಸರುಗದ್ದೆ ಕ್ರೀಡೋತ್ಸವದ ಆಕರ್ಷಣೆಯಾಗಿ ಮೂಡಿಬಂದ ಪುರುಷರ ಹಗ್ಗಜಗ್ಗಾಟ ಸ್ಪರ್ಧೆ ಗ್ರಾಮೀಣ ಕ್ರೀಡೆಯ ಮೆರುಗನ್ನು ಮತ್ತಷ್ಟು ಹೆಚ್ಚಿಸಿತು. ಹಲವಾರು ಸುತ್ತಿನ ಹೋರಾಟಗಳನ್ನು ನಡೆಸಿ ಫೈನಲ್ಸ್ ಪ್ರವೇಶಿಸಿದ್ದ ಮದೆನಾಡಿನ ಕಾಫಿ ಲಿಂಕ್ಸ್ ತಂಡ ಬಲಿಷ್ಠ ಕಗ್ಗೋಡ್ಲು ಫ್ರೆಂಡ್ಸ್ ‘ಎ’ ತಂಡವನ್ನು ಮಣಿಸುವುದರ ಮೂಲಕ ವಿನ್ನರ್ಸ್ ಪ್ರಶಸ್ತಿ ಪಡೆದುಕೊಂಡು ಮತ್ತೊಮ್ಮೆ ಚಾಂಪಿಯನ್ ಆಗಿ ಮೂಡಿ ಬಂದಿತು. ಮಳೆಯ ನಡುವೆಯೂ ಸೇರಿದ್ದ ನೂರಾರು ಪ್ರೇಕ್ಷಕರ ಪ್ರೋತ್ಸಾಹದ ನಡುವೆ ಆರಂಭಗೊAಡ ಹಗ್ಗಜಗ್ಗಾಟ ಸ್ಪರ್ಧೆಯ ಫೈನಲ್ಸ್ನಲ್ಲಿ ಬಲಿಷ್ಠ ಮತ್ತು ಅನುಭವಿ ಸ್ಪರ್ಧಾಳುಗಳನ್ನು ಒಳಗೊಂಡ ಕಗ್ಗೋಡ್ಲು ಫ್ರೆಂಡ್ಸ್ ‘ಎ’ ತಂಡÀ ಸೋಲೊಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಆದರೆ, ಮದೆನಾಡಿನ ಕಾಫಿ ಲಿಂಕ್ಸ್ ತಂಡ ಸತತವಾಗಿ ೨ ಸುತ್ತಿನಲ್ಲೂ ಎದುರಾಳಿ ತಂಡದ ವಿರುದ್ಧ ಪ್ರಾಬಲ್ಯ ಮೆರೆದು ಮೇಲುಗೈ ಸಾಧಿಸಿತ್ತು. ಈ ಪರಿಣಾಮ ಉತ್ತಮ ಪ್ರದರ್ಶನ ನೀಡಿದ ಕಗ್ಗೋಡ್ಲು ಫ್ರೆಂಡ್ಸ್ ‘ಎ’ ತಂಡÀ ಮದೆನಾಡಿನ ಕಾಫಿ ಲಿಂಕ್ಸ್ ತಂಡದೆದುರು ಶರಣಾಗಬೇಕಾಯಿತು.

ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ಸ್ನಲ್ಲಿ ಕಗ್ಗೋಡ್ಲು ಫ್ರೆಂಡ್ಸ್ ‘ಬಿ’ ತಂಡವನ್ನು ಸೋಲಿಸಿದ ಮದೆನಾಡಿನ ಕಾಫಿ ಲಿಂಕ್ಸ್ ತಂಡ ಹಾಗೂ ೨ನೇ ಸೆಮಿಫೈನಲ್‌ನಲ್ಲಿ ಗೋಣಿಕೊಪ್ಪಲಿನ ಬಿ.ಎನ್.ಎಸ್. ತಂಡವನ್ನು ಸೋಲಿಸಿದ ಕಗ್ಗೋಡ್ಲು ಫ್ರೆಂಡ್ಸ್ ‘ಎ’ ತಂಡÀ ಅಂತಿಮ ಹಣಾಹಣಿಗೆ ಹಾದಿ ಸುಗಮಗೊಳಿಸಿ ಕೊಂಡಿತ್ತು. ಕೆಸರುಗದ್ದೆ ಓಟದ ಸ್ಪರ್ಧೆಯ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಶಮ್ಮಾಝ್ (ಪ್ರಥಮ) ಆಶೀರ್(ದ್ವಿತೀಯ), ಪ್ರೌಡಶಾಲಾ ಬಾಲಕರ ವಿಭಾಗದಲ್ಲಿ ಭವೀಶ್ (ಪ್ರಥಮ) ಧನುಷ್ (ದ್ವಿತೀಯ) ಸ್ಥಾನ ಪಡೆದರೆ, ಪುರುಷರ ಮುಕ್ತ ವಿಭಾಗದಲ್ಲಿ ನೌಫಲ್ (ಪ್ರಥಮ) ಪೂವಣ್ಣ (ದ್ವಿತೀಯ) ಮತ್ತು ಜಂಶೀರ್ (ತೃತೀಯ) ಬಹುಮಾನ ಪಡೆದುಕೊಂಡರು.

ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು. ಜೆ.ಸಿ.ಐ ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ ಎಂ.ಎನ್. ವನಿತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಡಿ.ಸಿ.ಸಿ. ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಸಮಾಜದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಮೂಡಿಸಲು ಕ್ರೀಡಾಕೂಟಗಳು ಮಹತ್ತರ ಪಾತ್ರ ವಹಿಸುತ್ತವೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಕ್ರೀಡಾಕೂಟ ಆಧುನಿಕ ತಂತ್ರಜ್ಞಾನಾ ಧರಿತ ಸಮಾಜದಲ್ಲಿ ಬಿಡುವಿಲ್ಲದೆ ಕಾರ್ಯನಿರ್ವಹಿಸುವ ನಾಕರಿಕರಿಗೆ ಹೊಸ ಅನುಭವವನ್ನು ನೀಡುತ್ತದೆ. ಕ್ರೀಡಾಕೂಟಗಳು ನಿರಂತವಾಗಿ ನಡೆಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಅಜ್ಜಿಕುಟ್ಟೀರ ನರೇನ್ ಕಾರ್ಯಪ್ಪ, ಗೋಣಿಕೊಪ್ಪಲು ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಕೆ.ಟಿ. ಟಿಪ್ಪು ಬಿದ್ದಪ್ಪ, ವಿ. ಬಾಡಗದ ಕಾಫಿ ಬೆಳೆಗಾರ ಕಂಜಿತAಡ ಗಿಣಿ ಮೊಣ್ಣಪ್ಪ, ಯವಕಪಾಡಿಯ ಕಾಫಿ ಬೆಳೆಗಾರ ಅಂಜಪರವAಡ ಕುಶಾಲಪ್ಪ, ಜೇಸಿಸ್‌ನ ವಲಯ ಸಂಯೋಜಕ ಕೆ.ಎಂ. ಶಿವ ನಾಚಪ್ಪ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎಸ್.ಎಸ್. ಸುರೇಶ್, ಗದ್ದೆ ಮಾಲೀಕ ಮುರುವಂಡ ಸಾವನ್ ಸೋಮಣ್ಣ, ಕಾಮೆಯಂಡ ಸುಬ್ರಮಣಿ ಮೊದಲಾದವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

ವಲಯ ನಿರ್ದೇಶಕ ಮತ್ತು ಪೊನ್ನಂಪೇಟೆ ನಿಸರ್ಗ ಜೇಸಿಸ್‌ನ ಸ್ಥಾಪಕಾಧ್ಯಕ್ಷ ರಫೀಕ್ ತೂಚಮಕೇರಿ, ನಿಕಟ ಪೂರ್ವ ಅಧ್ಯಕ್ಷ ಟಾಟು ಮೊಣ್ಣಪ್ಪ, ಕಾರ್ಯದರ್ಶಿ ಎ.ಪಿ. ದಿನೇಶ್ ಕುಮಾರ್, ಯೋಜನಾ ನಿರ್ದೇಶಕ ಕುಪ್ಪಂಡ ದಿಲನ್ ಬೋಪಣ್ಣ, ಘಟಕದ ಪೂರ್ವಾಧ್ಯಕ್ಷ ಮುಕ್ಕಾಟೀರ ಸಂದೀಪ್, ಬಿ.ಈ. ಕಿರಣ್ ಸೇರಿದಂತೆ ಘಟಕಾಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು. ಕ್ರೀಡೋತ್ಸವದಲ್ಲಿ ತೀರ್ಪುಗಾರರಾಗಿ ವಿವಿಧ ಶಾಲೆಯ ದೈಹಿಕ ಶಿಕ್ಷಕರಾದ ಅರುಣ್ ಅಮ್ಮತ್ತಿ, ಪ್ರಕಾಶ್, ಅಶ್ವಥ್ ಮತ್ತು ಅಶ್ವಿನ್ ಅವರು ಕಾರ್ಯನಿರ್ವಹಿಸಿದರು. ನಿಸರ್ಗ ಜೇಸಿಸ್ ತಂಡದ ಪದಾಧಿಕಾರಿಗಳಾದ ಎಂ.ಜಿ. ಮಹೇಶ್, ಎಂ.ಎಸ್. ಶರ್ಫುದ್ದೀನ್, ಶಿವಕುಮಾರ್, ಹೆಚ್.ಆರ್. ಸತೀಶ್, ಸುರೇಶ್, ಸ್ವಾಮಿ, ಶರತ್ ಸೋಮಣ್ಣ, ಮೆಹರೂಫ್ ಮೊದಲಾದವರು ಪಂದ್ಯಾವಳಿಯ ತಾಂತ್ರಿಕ ಸಮಿತಿಯಲ್ಲಿ ಕಾರ್ಯನಿರ್ವಹಿಸಿದರು.