ಗೋಣಿಕೊಪ್ಪಲು, ಆ. ೧೭: ಗೋಣಿಕೊಪ್ಪಲಿನ ಉದ್ಯಮಿ ನಾಮೇರ ದಿಲೀಪ್ ಸೋಮಯ್ಯ ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಆಹಾರ ಕಿಟ್ ವಿತರಿಸಿದರು.
ಗ್ರಾಮದ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ ಅಧ್ಯಕ್ಷತೆಯಲ್ಲಿ ಆಹಾರ ಕಿಟ್ ವಿತರಣೆ ನಡೆಯಿತು.
ಸಮಾಜದಲ್ಲಿ ಆರ್ಥಿಕವಾಗಿ ಕಷ್ಟದಲ್ಲಿ ಇರುವವರನ್ನು ಗುರುತಿಸಿ ಕೈಲಾದ ಸಹಾಯ ಮಾಡುವುದರಿಂದ ಮನಸ್ಸಿಗೆ ತೃಪ್ತಿ ಸಿಗಲಿದೆ. ಈ ಹಿನ್ನೆಲೆ ಹುಟ್ಟೂರಿಗೆ ಕೈಲಾದಷ್ಟು ನೆರವು ನೀಡಿದ್ದೇನೆ ಎಂದು ದಿಲೀಪ್ ಹೇಳಿದರು.
ಗ್ರಾಮದ ಹಿರಿಯ ಮುಖಂಡ ಅಕ್ರಮ ಸಕ್ರಮ ಸಮಿತಿ ಸದಸ್ಯ ಮಾಜಿ ವಿಎಸ್‌ಎಸ್‌ಎನ್ ಬ್ಯಾಂಕ್ ಅಧ್ಯಕ್ಷ ತೀತಿಮಾಡ ಲಾಲಾ ಪೂಣಚ್ಚ ದಿಲೀಪ್ ಸೋಮಯ್ಯ ಅವರ ಕಾರ್ಯವನ್ನು ಶ್ಲಾಘಿಸಿದರು.
ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮದ್ರೀರ ಗಿರೀಶ್, ಗ್ರಾಮದ ಹಿರಿಯರಾದ ನಂಜಪ್ಪ, ಮಹಾದೇವರ ದೇವಸ್ಥಾನ ಸಮಿತಿ ಅಧ್ಯಕ್ಷ ನಾಮೇರ ದಾದಾ, ನಾಮೇರ ಚೇತನ್, ಗ್ರಾಮ ಪಂಚಾಯಿತಿ ಸದಸ್ಯರುಗಳು, ಉದ್ಯಮಿಗಳಾದ ನಾಮೇರ ರೇಖಾ ಸೋಮಯ್ಯ, ರೋಹನ್ ಕುಶಾಲಪ್ಪ, ರೋನಿಕ ಸೋಮಯ್ಯ, ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಮದ್ರಿರ ಗಿರೀಶ್ ಸ್ವಾಗತಿಸಿ, ವಂದಿಸಿದರು.