ಗೋಣಿಕೊಪ್ಪಲು, ಆ. ೧೭: ಕೊಡಗು ಜಿಲ್ಲೆಯಾದ್ಯಾಂತ ೧೬,೨೦೦ ಕೆ.ಜಿ.ಗೂ ಅಧಿಕ ತೂಕದ ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ನೀಡಿದ್ದರೂ ಅಧಿಕಾರಿಗಳ ಕಣ್ತಪ್ಪಿಸಿ ನಿಯಮ ಬಾಹಿರವಾಗಿ ಮರಗಳ ನಾಟವನ್ನು ಸಾಗಿಸಲಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆಕ್ರಮ ಕೈಗೊಳ್ಳಬೇಕೆಂದು ಬಾಳೆಲೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಬಾಳೆಲೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರಮಣಮಾಡ ರಂಜನ್‌ಚAಗಪ್ಪ ಮುಂದಾಳತ್ವದಲ್ಲಿ ಗ್ರಾಮಸ್ಥರು ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್‌ರವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿ, ಗ್ರಾಮಾಂತರ ಪ್ರದೇಶದಲ್ಲಿ ನಿರಂತರ ನಿಯಮ ಉಲ್ಲಂಘಿಸಿ ಮರ ಸಾಗಾಟ ಮಾಡುತ್ತಿರುವ ಬಗ್ಗೆ ಗಮನ ಸೆಳೆದರು.

ಮಳೆಗಾಲವಿದ್ದರೂ ಬಹಳಷ್ಟು ಲಾರಿಗಳು ಮರಗಳನ್ನು ಹೆಚ್ಚಾಗಿ ತುಂಬಿಸಿಕೊAಡು ಚಲಿಸಲಾರದೆ ರಸ್ತೆಯಲ್ಲಿಯೇ ನಿಂತಿರುವುದು ಕಂಡು ಬರುತ್ತಿವೆ. ಅಲ್ಲದೆ ಇದರಿಂದ ಸಾರ್ವಜನಿಕವಾಗಿ ಓಡಾಡುವ ವಾಹನಗಳಿಗೆ ತೊಂದರೆಯಾಗುತ್ತಿದೆ. ಅಲ್ಲದೆ ರಸ್ತೆಗಳು ಕೂಡ ಹಾಳಾಗುತ್ತಿವೆ. ಇವುಗಳ ಮೇಲೆ ನಿಷೇಧವಿದ್ದರೂ ವಾಮಮಾರ್ಗದಲ್ಲಿ ಮರಗಳನ್ನು ಸಾಗಿಸಲಾಗುತ್ತಿದೆ. ಹಾಗೂ ಮರಗಳನ್ನು ಕಡಿದು ರಸ್ತೆ ಬದಿಯ ಚರಂಡಿಯಲ್ಲಿ ಹಾಕುವುದರಿಂದ ಸಮಸ್ಯೆ ಎದುರಾಗಿದೆ ಎಂದು ರಂಜನ್ ಗಮನ ಸೆಳೆದರು.

ಜಿಲ್ಲಾಡಳಿತದ ನಿಯಮದಂತೆ ಲಾರಿಗಳಲ್ಲಿ ಮರಗಳನ್ನು ಇತಿಮಿತಿಯಲ್ಲಿ ಸಾಗಾಟ ಮಾಡಬಹುದು. ಹೆಚ್ಚಿನ ಪ್ರಮಾಣದಲ್ಲಿ ಸಾಗಾಟ ಮಾಡುತ್ತಿರುವುದು ಕಂಡುಬAದರೆ ನಾಗರಿಕರು ಕೂಡಲೇ ಇಲಾಖೆಯ ಗಮನಕ್ಕೆ ತರಬಹುದು. ಅಂತಹ ಪ್ರಕರಣದಲ್ಲಿ ನಿಯಮಾನುಸಾರ ದಂಡ ವಿಧಿಸಲಾಗುವುದೆಂದು ವೃತ್ತ ನಿರೀಕ್ಷಕ ಜಯರಾಮ್ ಇಲಾಖೆಯ ಸುತ್ತೋಲೆಗಳನ್ನು ನೀಡುತ್ತ ಮುಖಂಡರಿಗೆ ಮಾಹಿತಿ ಒದಗಿಸಿದರು.

ಈ ವೇಳೆ ನಿಟ್ಟೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಚೆಕ್ಕೇರ ಸೂರ್ಯ ಅಯ್ಯಪ್ಪ, ಆರ್.ಎಂ.ಸಿ. ಮಾಜಿ ಅಧ್ಯಕ್ಷ ಸುಜಾಪೂಣಚ್ಚ, ಗ್ರಾಮದ ಪ್ರಮುಖರಾದ ಕಾಳಪಂಡ ಸುವಿನ್ ಮಾಚಯ್ಯ, ಗಾಡಂಗಡ ಸುಧಾ, ಮಾಜಿ ತಾಲೂಕು ಪಂಚಾಯಿತಿ ಸದಸ್ಯೆ ರಾಣಿ ನಾರಾಯಣ ಉಪಸ್ಥಿತರಿದ್ದರು.

-ಹೆಚ್.ಕೆ. ಜಗದೀಶ್